Shrimad Rambapuri Shakha Brahanmatha – Station Babalada
Claimed
ಶ್ರೀಮದ್ ರಂಭಾಪುರಿ ಶಾಖಾ ಬೃಹನ್ಮಠ - ಸ್ಟೇಷನ್ ಬಬಲಾದ
Average Reviews
Description
ಶ್ರೀಮದ್ ರಂಭಾಪುರಿ ಶಾಖಾ ಬೃಹನ್ಮಠ – ಸ್ಟೇಷನ್ ಬಬಲಾದ
ಕರ್ತೃ – ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲಾ ಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಸ್ಟೇಷನ್ಬಬಲಾದ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀಮದ್ ರಂಭಾಪುರಿ ಶಾಖಾ ಬೃಹನ್ಮಠವು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುನೆಲೆಗೊಳಿಸಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀಮಠದ ಕರ್ತೃಗುರುಗಳು ಪೂಜ್ಯ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು.ಕರ್ತೃಗುರುಗಳು ಅನುಷ್ಠಾನ ಪ್ರಿಯರಾಗಿದ್ದು ಸದಾ ಸಂಚಾರಿಗಳಾಗಿದ್ದರು. ಹೀಗೆಸಂಚಾರ ಮಾಡುತ್ತಾ ಸ್ಟೇಷನ್ ಬಬಲಾದ ಗ್ರಾಮಕ್ಕೆ ಆಗಮಿಸುವ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು ಊರ ಹೊರಗಿನ ಪ್ರಶಾಂತ ಸ್ಥಳದಲ್ಲಿ ಅನುಷ್ಠಾನ ನಿರತರಾಗುತ್ತಾರೆ.ಶ್ರೀಗಳ ಮಹಿಮೆಯನ್ನರಿತ ಗ್ರಾಮದ ಭಕ್ತರು ಶ್ರೀಗಳನ್ನು ಇಲ್ಲೇ ನೆಲೆಗೊಳ್ಳುವಂತೆ ಬಿನ್ನಹಮಾಡುತ್ತಾರೆ. ಭಕ್ತರ ಪ್ರೀತಿಗೆ ಮಣಿದ ಶ್ರೀಗಳು ಇಲ್ಲಿಯೇ ನೆಲೆನಿಂತು ಭಕ್ತರಸಹಕಾರದೊಂದಿಗೆ 1996ರ ಮಾರ್ಚ್ 30 ರಲ್ಲಿ ಶ್ರೀಮದ್ ರಂಭಾಪುರಿ ಶಾಖಾಬೃಹನ್ಮಠವನ್ನು ಸ್ಥಾಪಿಸಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಶ್ರೀಮಠವು ಸ್ಥಾಪನೆಗೊಂಡಿರುವ ಸ್ಥಳದ ಸಮೀಪದಲ್ಲಿಯೇ ಪುರಾತನಮಲ್ಲಿಕಾರ್ಜುನ ದೇವಸ್ಥಾನವಿದ್ದು ಅಲ್ಲಿಯೇ ಮಠ ಪ್ರಾರಂಭಗೊಂಡಿತು ಹಾಗೂ ಶ್ರೀ ದೇವಿದೇವಸ್ಥಾನವನ್ನು ಇಲ್ಲಿ ಕಾಣಬಹುದಾಗಿದ್ದು ಅಪಾರ ಸಂಖ್ಯೆಯ ಭಕ್ತಬಳಗವನ್ನು ಮಠವುಹೊಂದಿದೆ. ಕರ್ತೃಗುರುಗಳು ಶ್ರೀಮಠವನ್ನು ಸರ್ವರೀತಿಯಲ್ಲಿ ಅಬಿವೃದ್ಧಿಗೊಳಿಸಿಲಿಂಗೈಕ್ಯರಾಗಿದ್ದು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.ಹಿಂದಿನ ಶ್ರೀಗಳ ಐಕ್ಯಾ ನಂತರ ಒಂದು ವರ್ಷ ಶ್ರೀಮಠವು ಖಾಲಿ ಉಳಿದಿದ್ದುಆಗ ಊರಿನ ಸದ್ಭಕ್ತರು ಶ್ರೀ ರಂಭಾಪುರಿ ಶ್ರೀಗಳ ಮಾರ್ಗದರ್ಶನದಲ್ಲಿ ಈಗಿನ ಶ್ರೀಗಳಾದ ಶ್ರೀಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕರೆತಂದು ಪಟ್ಟಾಧಿಕಾರಮಾಡಿದರು. ಶ್ರೀಗಳು ಸಾಲೂರು ಮಠದಲ್ಲಿ ವೈಧಿಕ ಅಭ್ಯಾಸ ಮಾಡಿದ್ದು ಶ್ರೀ ರಂಭಾಪುರಿಪೀಠದಲ್ಲಿ ಆದ್ಯಾತ್ಮ ಶಿಕ್ಷಣವನ್ನು ಪಡೆದಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ರಾಮನವಮಿಯಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ ನಡೆಸುತ್ತಿದ್ದುದಸರಾದಲ್ಲಿ 41 ದಿನಗಳ ಕಾಲ ವಿಶೇಷ ಪೂಜೆ ನಡೆಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-06-1977
Place :
ಅರಳಿಗನೂರು, ಸಿರಗುಪ್ಪ ತಾ||
Photo :
Programs
ಪ್ರತಿ ಅಮವಾಸೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
ರಾಮನವಮಿಯಂದು ಶ್ರೀ ಮಠದ ಜಾತ್ರೆ ಜೂನ್ 9 ರಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ದಸರದಲ್ಲಿ 41 ದಿನಗಳ ಕಾಲ ವಿಶೇಷ ಪೂಜೆ