Shree Niranjeshwara Virakta Matha, Patavada

Shree Niranjeshwara Virakta Matha, Patavada Claimed

ಶ್ರೀ ನಿರಂಜೇಶ್ವರ ವಿರಕ್ತಮಠ, ಪಟವಾದ

Average Reviews

Description

ಶ್ರೀ ನಿರಂಜೇಶ್ವರ ವಿರಕ್ತಮಠ, ಪಟವಾದ

ಕರ್ತೃ – ಶ್ರೀ ಮ.ನಿ.ಪ್ರ.ಸ್ವ. ನಿರಂಜೇಶ್ವರ ಶಿವಯೋಗಿಗಳು

ಕಲಬುರಗಿ ಜಿಲ್ಲೆ ಪಟವಾದ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಪುರಾತನ ಕಾಲದ ಶ್ರೀನಿರಂಜೇಶ್ವರ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಮುಖಾಂತರ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಠಿಸಿದೆ. ಶ್ರೀಮಠದ ಮೂಲಪುರುಷ ಶ್ರೀ.ಮ.ನಿ.ಪ್ರ.ಸ್ವ. ನಿರಂಜೇಶ್ವರ ಶಿವಯೋಗಿಗಳು. ಶ್ರೀಗಳು ಸಂಚಾರ ಮಾಡುತ್ತಾಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಉಳಿದು ಜನರಿಗೆ ಧರ್ಮ ಹಾಗೂಕಾಯಕದ ಅರಿವನ್ನು ಮೂಡಿಸುತ್ತಾ ಪಟವಾದ ಭಾಗಕ್ಕೆ ಬರುತ್ತಾರೆ. ಆಗ ಇಲ್ಲಿಊರಿರುವುದಿಲ್ಲ, ಆದರೆ ತಮ್ಮ ಅನುಷ್ಠಾನಕ್ಕೆ ಇದೇ ಉತ್ತಮ ಸ್ಥಳವೆಂದು ಆಯ್ಕೆಮಾಡಿಕೊಂಡು ಶ್ರೀಗಳು ದೀರ್ಘಾನುಷ್ಠಾನ ನಿರತರಾಗುತ್ತಾರೆ. ಹೀಗೆ ಅನುಷ್ಠಾನನಿರತರಾಗಿರುವಾಗ ಕೆಲವಷ್ಟು ಜನ ವ್ಯಾಪಾರಕ್ಕೋಸ್ಕರ ಈ ಭಾಗವಾಗಿ ಹೋಗುತ್ತಿರುವಾಗಶಿವಯೋಗಿಗಳ ದರ್ಶನವಾಗಿ ಇಲ್ಲೇ ಉಳಿಯುತ್ತಾರೆ. ಅವರಿಗೆ ಶಿವಯೋಗಿಗಳು ನಾವುನಾಳೆ ಜೀವಂತ ಸಮಾದಿ ಆಗುತ್ತಿದ್ದೇವೆ ಎಂದು ಹೇಳಿ ಮರುದಿನ ಬೆಳಗ್ಗೆ ಉದಯದಲ್ಲಿಸಮಾದಿಸ್ಥರಾಗುತ್ತಾರೆ.ಶಿವಯೋಗಿಗಳ ಮಹಿಮೆಯನ್ನರಿತಿದ್ದ ಜನರು ಶ್ರೀಗಳ ಸಮಾದಿ ಗದ್ದುಗೆನಿರ್ಮಿಸಿ ಶ್ರೀಮಠವನ್ನು ಕಟ್ಟಿದ್ದು ತದನಂತರ ಮಠದ ಸುತ್ತಮುತ್ತ ಗ್ರಾಮ ಬೆಳೆದು ಶ್ರೀಮಠವುಹೆಸರಾಗುತ್ತದೆ. ಕರ್ತೃಗುರುಗಳಿಂದ ಜಾಗೃತಗೊಂಡ ಶ್ರೀಮಠದ ನಂತರದ ಪರಂಪರೆಯಬಗ್ಗೆ ಸ್ಪಷ್ಟತೆಯಿಲ್ಲವಾದರೂ 6 ಜನ ಗುರುಗಳ ಹೆಸರನ್ನು ದಾಖಲಿಸಬಹುದಾಗಿದೆ.ಶ್ರೀ.ಮ.ನಿ.ಪ್ರ.ಸ್ವ. ಶಿವಲಿಂಗ ಶಿವಯೋಗಿಗಳು, ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರಶಿವಯೋಗಿಗಳು, ಶ್ರೀ ಮ.ನಿ.ಪ್ರ.ಸ್ವ. ಬದ್ರೇಶ್ವರ ಸ್ವಾಮಿಗಳು ಹಾಗೂ ಹಿಂದಿನ ಗುರುಗಳಾದಶ್ರೀ. ಮ.ನಿ.ಪ್ರ.ಸ್ವ. ಪಂಚಾಕ್ಷರಿ ಸ್ವಾಮಿಗಳು ಶ್ರೀಮಠವನ್ನು ಬೆಳಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ.ಸ್ವ. ಶರಣಬಸವ ಸ್ವಾಮಿಗಳು 2011ರ ಡಿಸೆಂಬರ್22ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿದ್ದು ಮಠವನ್ನು ಸರ್ವತೋಮುಖವಾಗಿಅಭಿವೃದ್ಧಿಪಡಿಸುತ್ತಿದ್ದಾರೆ. ಗುರುಗಳು ಶ್ರೀಮಠದ ಜೊತೆಯಲ್ಲಿ ಭೂಸನೂರು ಶ್ರೀ ಒಪ್ಪತ್ತೇಶ್ವರವಿರಕ್ತ ಮಠದ ಪೀಠಾಧಿಪತಿಗಳಾಗಿಯೂ ಅಧಿಕಾರದಲ್ಲಿದ್ದು ಉಭಯ ಮಠಗಳನ್ನುಸಮಾನವಾಗಿ ನೋಡಿಕೊಂಡು ಬರುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಸಾಮಾಜಿಕವಾಗಿಯೂಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಭಕ್ತರನ್ನು ಧಾರ್ಮಿಕ ಚಿಂತನೆಗೆ ಒಳಪಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಶರಣಬಸವ ಸ್ವಾಮಿಗಳು
Date of Birth :
01-10-1988
Place :
ಬಿಂಜಲ ಬಾವಿ, ಸಿಂದಗಿ ತಾ||
Pattadikara :
22-12-2011

Programs

ಶ್ರಾವಣ ಮಾಸ ಪರ್ಯಂತ ಶ್ರೀ ನಿರಂಜೇಶ್ವರ ಗದ್ದುಗೆಗೆ
ರುದ್ರಾಭಿಷೇಕ, ಪುರಾಣ ಪ್ರವಚನ, ಎರಡನೇ ಸೋಮವಾರ
ಲಿಂ.ಶ್ರೀ.ಮ.ನಿ.ಪ್ರ.ಪಂಚಾಕ್ಷರಿ ಸ್ವಾಮಿಗಳವರ ಪುಣ್ಯಾರಾಧನೆ
ಹಾಗೂ ಶ್ರೀ ನಿರಂಜೇಶ್ವರ ಜಾತ್ರೆ
ಬಸವಜಯಂತಿ ಆಚರಣೆ
ಪ್ರತಿವರ್ಷ ಡಿಸೆಂಬರ್ 22 ರಂದು ಈಗಿನ ಶ್ರೀಗಳ
ಪಟ್ಟಾಧಿಕಾರದ ವರ್ದಂತಿ ಮಹೋತ್ಸವ

Full Address Kannada

ಶ್ರೀ ನಿರಂಜೇಶ್ವರ ವಿರಕ್ತಮಠ
ಪಟವಾದ - 582 313
ಕಲಬುರಗಿ ತಾ||, ಜಿ.

Map

Near by Places

ಕಮಲಾಪುರ - 18 ಕಿ.ಮೀ.
ಚಿಟಗುಪ್ಪ - 12 ಕಿ.ಮೀ.
ಹುಮನಾಬಾದ್ - 18 ಕಿ.ಮೀ.
ಕಲಬುರಗಿ - 55 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!