Shree Kallimatha Samthana – Mahagav

Shree Kallimatha Samthana – Mahagav Claimed

ಶ್ರೀ ಕಳ್ಳಿಮಠ ಸಂಸ್ಥಾನ - ಮಹಾಗಾಂವ್

Average Reviews

Description

ಶ್ರೀ ಕಳ್ಳಿಮಠ ಸಂಸ್ಥಾನ – ಮಹಾಗಾಂವ್

ಕರ್ತೃ ಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ತಾಲ್ಲೂಕಿನ ಮಹಾಗಾಂವ್ ಗ್ರಾಮವು ತಾಲ್ಲೂಕು ಕೇಂದ್ರದಿಂದ 25ಕಿ.ಮಿ. ದೂರದಲ್ಲಿದ್ದು ಪುರಾತನ ವೀರಶೈವ ಧಾರ್ಮಿಕ ಕೇಂದ್ರವಾಗಿದೆ. ಇಂತಹ ಪುರಾತನವೀರಶೈವ ಕೇಂದ್ರದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಕಳ್ಳಿಮಠ ಸಂಸ್ಥಾನವುಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿದೆ. ಪ್ರಾಚೀನ ಇತಿಹಾಸವನ್ನು ಹೊಂದಿರುವ ಶ್ರೀ ಕಳ್ಳಿಮಠದ ಸ್ಥಾಪಕರು ಶ್ರೀಷ.ಬ್ರ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃಗುರುಗಳು ಸಂಚಾರದಲ್ಲಿ ಮಹಾಗಾಂವ್ ಪ್ರಾಂತ್ಯಕ್ಕೆ ಬಂದು ನೆಲೆನಿಂತಾಗಇಲ್ಲಿ ಸುತ್ತಮುತ್ತಲಲ್ಲಿ ಕಳ್ಳಿಯು ಬೆಳೆದಿದ್ದ ಕಾರಣ ಈ ಮಠಕ್ಕೆ ರೂಡಿಗತವಾಗಿ ಶ್ರೀಕಳ್ಳಿಮಠವೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಗುರುಗಳು ಕ್ರಮೇಣ ಸುತ್ತಲಿನಸ್ಥಳವನ್ನು ಸ್ವಚ್ಛಗೊಳಿಸಿ ಶ್ರೀಮಠವನ್ನು ಸ್ಥಾಪಿಸಿದ್ದು ಅಪಾರ ಭಕ್ತ ಬಳಗವನ್ನುಸಂಪಾದಿಸಿಕೊಂಡಿದ್ದರು. ಬಹುಶಃ ಮಠದ ಸುತ್ತಮುತ್ತಲಲ್ಲಿ ಕ್ರಮೇಣ ಗ್ರಾಮವುಬೆಳೆದಿರಬಹುದು. ಕರ್ತೃಗುರುಗಳು ಮಹಾತಪಸ್ವಿಗಳಾಗಿದ್ದು ವೀರಶೈವ ಧರ್ಮದಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತದ ಅನ್ವಯ ವೀರಶೈವ ಧರ್ಮವನ್ನುಪ್ರಚುರಪಡಿಸಿ ಭಕ್ತರಲ್ಲಿ ಧರ್ಮಜಾಗೃತಿಯನ್ನುಂಟು ಮಾಡುತ್ತಿದ್ದರು. ಗುರುಗಳು ಮಠವನ್ನುಸ್ಥಾಪನೆ ಮಾಡಿದ ಮೇಲೆ ಮಠದಲ್ಲಿ ನಿತ್ಯ ಶಿವಾನುಭವಗೋಷ್ಠಿಗಳ ಮೂಲಕ ಸಮಾಜದಲ್ಲಿನಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಅಲ್ಲದೇ ಭಕ್ತರಲ್ಲಿ ಮಾನಸಿಕ ಧೈರ್ಯ ತುಂಬಿಕಾಯಕದಲ್ಲಿ ತೊಡಗಿಸುತ್ತಿದ್ದರು.ಇಂತಹ ತಪೋನಿಷ್ಠ, ಪ್ರಗತಿಪರ ಚಿಂತಕ ಕರ್ತೃಗುರುಗಳ ಕಾರಣದಿಂದಾಗಿಶ್ರೀಮಠ ಹಾಗೂ ಗ್ರಾಮವು ಸುಭಿಕ್ಷವನ್ನು ಕಂಡಿತು. ಆದರೆ ಕರ್ತೃಗುರುಗಳ ನಂತರದಪರಂಪರೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಪರಂಪರೆಯ ಎಲ್ಲಾ ಗುರುಗಳೂಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿದ್ದು, ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ದಿದ್ದಾರೆ. ಆದರೆ ಈಗುರುಗಳೆಲ್ಲರ ಬಗ್ಗೆ ದಾಖಲೆಗಳನ್ನು ದಾಖಲಿಸಿಡದ ಕಾರಣ ಪರಂಪರೆಯು ನಿಖರವಾಗಿದೊರೆಯುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿ ಈವರೆಗೂ 10 ಜನ ಶ್ರೀಗಳು ಅಧಿಕಾರನಡೆಸಿದ್ದಾರೆಂದು ಲಭ್ಯವಿರುವ ಗದ್ದುಗೆಗಳ ಆಧಾರದ ಮೇಲೆ ತಿಳಿಯಬಹುದು.ಪರಂಪರೆಯ 4 ಜನ ಶ್ರೀಗಳ ಗದ್ದುಗೆಗಳು ಶ್ರೀಮಠದಲ್ಲಿದ್ದು ಉಳಿದ ಶ್ರೀಗಳ ಗದ್ದುಗೆಗಳಲ್ಲಿಕಲಬುರಗಿ ತಾ|| ದಾಸ್ತಾಪುರ, ಬೀದರ್ ತಾ||, ಬೆಳಕೋಡಗಳಲ್ಲಿ ಒಂದೊಂದು ಗದ್ದುಗೆಗಳಿವೆ.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯಮಹಾಸ್ವಾಮಿಗಳು ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದು ಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ವೀರಶೈವ ಧರ್ಮದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತದ ಅನ್ವಯವೀರಶೈವ ಧರ್ಮವನ್ನು ಪ್ರಚುರಪಡಿಸಿದ ಶ್ರೀಗಳು 1980ರ ಡಿಸೆಂಬರ್ 25 ರಂದುಲಿಂಗೈಕ್ಯರಾಗಿದ್ದಾರೆ. ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳುಹಿಂದಿನ ಗುರುಗಳಿರುವಾಗಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡುಧಾರವಾಡದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಪಾಂಡಿತ್ಯವನ್ನು ಸಂಪಾದಿಸಿಕೊಂಡವರು.ಗುರುಗಳು ತಮ್ಮ ಹಿಂದಿನ ಗುರುಗಳ ಐಕ್ಯಾ ನಂತರ 1980ರ ಡಿಸೆಂಬರ್ 29ರಲ್ಲಿ ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡು ಕಳೆದ ಮೂರುವರೆ ದಶಕಗಳಲ್ಲಿ ಶ್ರೀಮಠವನ್ನುಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಗುರುಗಳು ಉತ್ತಮ ವಾಗ್ಮಿಗಳಾಗಿದ್ದುವೀರಶೈವ ಸಿದ್ಧಾಂತದ ಬಗ್ಗೆ ಅಪಾರ ಜ್ಞಾನ ಉಳ್ಳವರಾಗಿ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶಿವರಾತ್ರಿಯಲ್ಲಿವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ದಸರಾದಲ್ಲಿ ಶ್ರೀದೇವಿ ಆರಾಧನೆಕಾರ್ಯಕ್ರಮ ಹಾಗೂ ಶ್ರೀಗಳ ಅನುಷ್ಠಾನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ.ಶ್ರಾವಣಮಾಸದಲ್ಲಿ ನಿತ್ಯ ಪ್ರವಚನವನ್ನು ಸ್ವತಃ ಶ್ರೀಗಳೇ ಮಾಡುತ್ತಿದ್ದು ಈ ಸಮಯದಲ್ಲಿತುಲಾಭಾರ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಹಾಗೆಯೇ ಪ್ರತಿ ವರ್ಷಡಿಸೆಂಬರ್ 25ರಲ್ಲಿ ಲಿಂ|| ಶ್ರೀ. ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ನಡೆಯುತ್ತದೆ.

Swamiji

Swamiji Name :
ಶ್ರೀ. ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-9-1964
Place :
ಮಹಾಗಾಂವ್, ಕಲಬುರಗಿ ಜಿ||
Pattadikara :
29-12-1980
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ
ಶಿವರಾತ್ರಿಗೆ ವಿಶೇಷಪೂಜೆ
ದಸರಾದಲ್ಲಿ ಶ್ರೀ ದೇವಿಯ ಆರಾಧನೆ ಮತ್ತು ಶ್ರೀಗಳ ಅನುಷ್ಠಾನ
ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ, ತುಲಾಬಾರ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ಡಿಸೆಂಬರ್ 25ರಂದು ಲಿಂ|| ಶ್ರೀ. ಷ.ಬ್ರ. ವಿರೂಪಾಕ್ಷ ಶಿವಾಚಾರ್ಯರ ಪುಣ್ಯಾರಾಧನೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಕಳ್ಳಿ ಮಠ ಸಂಸ್ಥಾನ
ಮಹಾಗಾಂವ್ - 585 316
ಕಲಬುರಗಿ ತಾ.||, ಜಿಲ್ಲೆ

Map

Near by Places

ಮಹಾಗಾಂವ ಕ್ರಾಸ್ - 3 ಕಿ.ಮೀ
ಕಲಬುರಗಿ - 25 ಕಿ.ಮೀ.
ಹುಮನಾಬಾದ್ - 45 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!