Shree Roja Hirematha – Kalaburgi

Shree Roja Hirematha – Kalaburgi Claimed

ಶ್ರೀ ರೋಜಾ ಹಿರೇಮಠ - ಕಲಬುರಗಿ

Average Reviews

Description

ಶ್ರೀ ರೋಜಾ ಹಿರೇಮಠ – ಕಲಬುರಗಿ

ಕರ್ತೃ ಶ್ರೀ ಷ.ಬ್ರ. ಕೆಂಚಬಸವ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ನಗರದ ಬಡರೋಜಾಗಲ್ಲಿಯಲ್ಲಿ ಅಸ್ತಿತ್ವದಲ್ಲಿರುವ ಶ್ರೀ ರೋಜಾಹಿರೇಮಠವು ಶ್ರೀಮದ್ ರಂಭಾಪುರಿ ಶಾಖಾಮಠವಾಗಿ ಪಂಚಪೀಠಗಳ ಸಂಪ್ರದಾಯವನ್ನುಪಾಲಿಸಿಕೊಂಡು ಬರುತ್ತಿದೆ. ಶ್ರೀಮಠದ ಸ್ಥಾಪಿತ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲವಾದರೂಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ.ಕೆಂಚಬಸವ ಶಿವಾಚಾರ್ಯ ಮಹಾಸ್ವಾಮಿಗಳನ್ನುಗುರುತಿಸಲಾಗಿದೆ. ಕರ್ತೃಗುರುಗಳು ಪವಾಡ ಪುರುಷರಾಗಿದ್ದು ತಮ್ಮ ಧಾರ್ಮಿಕಆಚರಣೆಗಳ ಮೂಲಕ, ಪವಾಡಗಳಿಂದ ಮನೆ ಮಾತಾಗಿದ್ದರು. ಶ್ರೀಗಳ ಮಹಿಮೆಯನ್ನರಿತಹೈದರಾಬಾದ್ ನಿಜಾಮನು ಗುರುಗಳ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗಬಾರದೆಂದು ಮಠವನ್ನು ಸ್ಥಾಪಿಸಿ ಇನಾಂ ನೀಡಿದ್ದರೆಂದು ಹೇಳಲಾಗುತ್ತದೆ. ಈಕಾರಣದಿಂದಾಗಿ ಶ್ರೀಮಠಕ್ಕೆ ಅಂದಿನಿಂದ ಇಂದಿನವರೆಗೂ ಹಿಂದೂ ಭಕ್ತರ ಜೊತೆಯಲ್ಲಿಮುಸಲ್ಮಾನ ಭಕ್ತರೂ ಇದ್ದು ಭಾವೈಕ್ಯತೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ.ಕರ್ತೃಗುರುಗಳಿಂದಾಗಿ ಪ್ರಸಿದ್ದಿಗೆ ಬಂದ ಶ್ರೀಮಠದ ನಂತರದ ಪರಂಪರೆಯ ಬಗ್ಗೆನಿಖರ ಮಾಹಿತಿಗಳ ಕೊರತೆಯಿದೆ. ಶ್ರೀ ಮಠವು ಬಹುಕಾಲ ಖಾಲಿ ಉಳಿದಂತೆತೋರುತ್ತಿದ್ದು ಈ ಕಾರಣದಿಂದಾಗಿ ಪರಂಪರೆಯನ್ನು ಸ್ಪಷ್ಟವಾಗಿ ಗುರುತಿಸಲುಸಾಧ್ಯವಾಗುವುದಿಲ್ಲ. ಕರ್ತೃಗಳ ನಂತರದ ಪರಂಪರೆಯಲ್ಲಿ ಶ್ರೀ.ಷ.ಬ್ರ. ನಾಗಬಸವೇಶ್ವರಶಿವಾಚಾರ್ಯ ಮಹಾಸ್ವಾಮಿಗಳು ಮಠವನ್ನು ಮುನ್ನಡೆಸಿದ್ದಾರೆಂದು ತಿಳಿದುಬರುತ್ತದೆ. ಕೆಲಕಾಲದ ನಂತರ ಶ್ರೀಮಠವು ಯಾವುದೇ ಉತ್ತರಾಧಿಕಾರಿಗಳಿಲ್ಲದೇ ಖಾಲಿ ಉಳಿದ್ದಿದ್ದನ್ನುಕಂಡ ಶ್ರೀ ಮುಪ್ಪಯ್ಯ ಎಂಬುವವರು ಶ್ರೀಮಠದಲ್ಲಿ ವಾಸ್ತವ್ಯ ಹೂಡಿ ಈ ಮಠದ ಧಾರ್ಮಿಕಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಕೆಂಚಬಸವ ಶಿವಾಚಾರ್ಯ ಸ್ವಾಮಿಗಳು ಖಾಲಿಉಳಿದ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಬಂದ ನಂತರ ಶ್ರೀಮಠವು ಅಭಿವೃದ್ಧಿ ಪಥದತ್ತಮುನ್ನಡೆದಿದೆ. ಶ್ರೀಗಳು ಶಿಥಿಲಗೊಂಡಿದ್ದ ಮಠದ ಕಟ್ಟಡವನ್ನು ಅಭಿವೃದ್ಧಿಪಡಿಸಿ ಪೂಜಾಕಾರ್ಯಕ್ರಮಗಳು ಸಾಂಗವಾಗಿ ನಡೆಯುವಂತೆ ಮಾಡಿದರು. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡುಬಂದಿರುವ ಶ್ರೀಗಳು ಸಮಷ್ಠಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಕೆಂಚಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
1972
Place :
ಕೋಳಕೊಡು, ಜೀವರ್ಗಿ ತಾ||
Photo :

Programs

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ - ಭಜನಾ ಕಾರ್ಯಕ್ರಮ
ಆಷಾಢ ಮಾಸದಲ್ಲಿ ಹನ್ನೊಂದು ದಿನಗಳ ಕಾಲ ಪುರಾಣ ಪಾರಾಯಣ

Photos

Full Address Kannada

ಶ್ರೀ ರೋಜಾ ಹಿರೇಮಠ
ಬಡ ರೋಜಾಗಲ್ಲಿ ಕಲಬುರಗಿ - 582 101

Map

Near by Places

ಬಸ್ ಸ್ಟ್ಯಾಂಡ್ - 4 ಕಿ.ಮೀ.
ರೈಲ್ವೆ ಸ್ಟೇಷನ್ - 4 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!