Shree Gurubasava Brahanmatha – Kalaburgi

Shree Gurubasava Brahanmatha – Kalaburgi Claimed

ಶ್ರೀ ಗುರುಬಸವ ಬೃಹನ್ಮಠ - ಕಲಬುರಗಿ

Average Reviews

Description

ಶ್ರೀ ಗುರುಬಸವ ಬೃಹನ್ಮಠ – ಕಲಬುರಗಿ

ಕರ್ತೃ – ಶ್ರೀ.ಮ.ನಿ.ಪ್ರ. ಗುರು ಬಸವೇಶ್ವರ ಮಹಾಸ್ವಾಮಿಗಳು

ಹನ್ನೆರಡನೇ ಶತಮಾನದಲ್ಲಿ ಪೂಜ್ಯ ಶ್ರೀ.ಮ.ನಿ.ಪ್ರ. ಗುರುಬಸವೇಶ್ವರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡ ಶ್ರೀ ಗುರುಬಸವ ಬೃಹನ್ಮಠವು ಈವರೆಗೂ ತನ್ನಶ್ರೀಮಂತ ಪರಂಪರೆಯ ಮುಖೇನ ಬೆಳೆದುಬಂದಿದೆ. ಹನ್ನೆರಡನೇ ಶತಮಾನದ ಕಲ್ಯಾಣಕ್ರಾಂತಿಯ ನಂತರ ಶರಣರು ದೇಶದ ನಾನಾಭಾಗಗಳಿಗೆ ಚದುರಿ ಹೋದಾಗ ಶರಣ ಶ್ರೀಗುರುಬಸವೇಶ್ವರರು ತಮ್ಮ ಸಂಗಡಿಗರೊಂದಿಗೆ ಇಲ್ಲಿಗೆ ಬಂದು ನೆಲೆಸಿ ಧಾರ್ಮಿಕಆಚರಣೆಗಳನ್ನು ನಡೆಸಿ ನಂತರ ಬೇರೆಡೆಗೆ ಹೋದರೆಂದು ಹೇಳಲಾಗುತ್ತದೆ. ಶರಣರನೆನಪನ್ನು ಉಳಿಸಿಕೊಂಡು ಶರಣತತ್ತ್ವದ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಈ ಮಠ ಸಲ್ಲಿಸಿರುವಸೇವೆ ಅಪಾರವಾಗಿದೆ. ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದರೂಪರಂಪರೆಯಲ್ಲಿ ಈವರೆಗೂ 21 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದು ಹೇಳಲಾಗಿದೆ.ಕರ್ತೃಗುರುಗಳ ನಂತರದ ಎಲ್ಲಾ ಗುರುಗಳು ಬಸವಾದಿ ಶಿವಶರಣರತತ್ತ್ವಾದರ್ಶಗಳನ್ನು ಜನರಿಗೆ ತಲುಪಿಸುತ್ತ ಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು ಧಾರವಾಡ ಶ್ರೀ ಶ್ರೀಮುರುಘ ಮಠದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಕೃಪಾದೃಷ್ಟಿಯಲ್ಲಿ ಬೆಳೆದುಸೊಲ್ಲಾಪುರ, ಯಾದಗಿರಿ, ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜು ಹಾಗೂವಾರಣಾಸಿಯ ಹಿಂದೂ ವಿಶ್ವವಿದ್ಯಾನಿಲಯಗಳಲ್ಲಿ ಅದ್ವೈತ ಶಿಕ್ಷಣವನ್ನು ಪಡೆದು ನಂತರಶ್ರೀಮಠದ ಅಧಿಕಾರ ಸ್ವೀಕರಿಸಿದರು. ಶ್ರೀಗಳು ಶಿಕ್ಷಣ ಪ್ರೇಮಿಗಳಾಗಿದ್ದು 1965ರಲ್ಲಿ ಶ್ರೀಗುರುಬಸವೇಶ್ವರ ಶಿಕ್ಷಣ ಸಂಸ್ಥೆಯನ್ನು ಪ್ರಾರಂಬಿಸಿ ಅದರಡಿಯಲ್ಲಿ ಅನೇಕ ಶಾಲಾಕಾಲೇಜುಗಳನ್ನು ತೆರೆದರು. ಶಿವಪೂಜಾನಿಷ್ಠರಾಗಿ, ಜ್ಞಾನ – ಅನ್ನ ದಾಸೋಹಿಗಳಾಗಿಮಠವನ್ನು ಸರ್ವ ರೀತಿಯಲ್ಲಿ ಬೆಳೆಸಿದ ಶ್ರೀಗಳು 1995ರ ಏಪ್ರಿಲ್ 08ರಂದುಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಶಿವಾನಂದ ಸ್ವಾಮಿಗಳು 2000ದ ಜೂನ್24ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠದಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಗಳು ಶಿವಯೋಗಿ ಮಂದಿರದಲ್ಲಿ ಆದ್ಯಾತ್ಮಶಿಕ್ಷಣವನ್ನು ಪಡೆದವರಾಗಿದ್ದು ಉತ್ತಮ ವಾಗ್ಮಿಗಳಾಗಿದ್ದಾರೆ. ಶ್ರೀಗಳು ಶ್ರೀಮಠದ ಜೊತೆಯಲ್ಲಿಎಲ್ಲಾ ಶಾಖಾಮಠಗಳ ಅಭಿವೃದ್ದಿಯೆಡೆಗೂ ಗಮನಹರಿಸುತ್ತಿದ್ದು ಕಾರ್ತೀಕ ಮಾಸದಲ್ಲಿಅರ್ಥಪೂರ್ಣ ಧಾರ್ಮಿಕ ಸಮಾವೇಶವನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ.ಮ.ನಿ.ಪ್ರ. ಶಿವಾನಂದ ಸ್ವಾಮಿಗಳು
Date of Birth :
1967
Place :
ಯಂಕಂಚಿ, ಸಿಂದಗಿ ತಾ||
Pattadikara :
24-06-2000
Photo :

Programs

ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ.
ಕಾರ್ತಿಕ ಮಾಸದಲ್ಲಿ ಧಾರ್ಮಿಕ ಸಮಾವೇಶ ಹಾಗೂ 20 ದಿನಗಳ ಕಾಲ ಪುರಾಣ ಪ್ರವಚನ

Institutions

ಕಿರಿಯ / ಹಿರಿಯ ಪ್ರಾಥಮಿಕ /ಪ್ರೌಢಶಾಲೆ
ಸಂಸ್ಕøತ ಪಾಠಶಾಲೆ ಪದವಿ ಪೂರ್ವ / ಮಹಿಳಾ ಪದವಿ ಪೂರ್ವ ಕಾಲೇಜುಗಳು
ವಿದ್ಯಾರ್ಥಿ ನಿಲಯ / ಅನಾಥ ನಿಲಯ

Photos

Full Address Kannada

ಶ್ರೀ ಗುರು ಬಸವ ಬೃಹನ್ಮಠ
ಮುಕ್ತಂಪುರ, ಕಲಬುರಗಿ - 585 101

Map

Near by Places

ಆಳಂದ - 49 ಕಿ.ಮೀ.
ಚಿಂಚೋಳಿ - 90 ಕಿ.ಮೀ.
ರೈಲ್ವೆ ಸ್ಟೇಷನ್ - 4 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!