Shree Rachoteshwara Matha Honna Kiranagi

Shree Rachoteshwara Matha Honna Kiranagi Claimed

ಶ್ರೀ ರಾಚೋಟೇಶ್ವರ ಮಠ ಹೊನ್ನಕಿರಣಗಿ

Average Reviews

Description

ಶ್ರೀ ರಾಚೋಟೇಶ್ವರ ಮಠ ಹೊನ್ನಕಿರಣಗಿ

ಕರ್ತೃ ಶ್ರೀ.ಷ.ಬ್ರ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಹೊನ್ನಕಿರಣಗಿ ಗ್ರಾಮವು ಜಿಲ್ಲಾ ಕೇಂದ್ರದಿಂದ 30 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ರಾಚೋಟೇಶ್ವರ ಮಠವು ಸ್ಥಾಪಿತಗೊಂಡುತನ್ನ ಧಾರ್ಮಿಕ ಆಚರಣೆಗಳ ಮೂಲಕ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನುಸೃಷ್ಠಿಸುತ್ತಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ರಾಚೋಟೇಶ್ವರ ಮಠದ ಕರ್ತೃಗುರುಗಳುಶ್ರೀ.ಷ.ಬ್ರ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳುಪುರಾತನ ಕಾಲದಲ್ಲಿ ಸ್ಥಾಪಿತಗೊಂಡು ಅಸ್ತಿತ್ತ್ವಕ್ಕೆ ಬಂದಿರುವ ಶ್ರೀಮಠದಪೂರ್ವೇತಿಹಾಸದ ಬಗ್ಗೆ ನಿಖರ ದಾಖಲೆಗಳ ಕೊರತೆಯಿದೆ. ಶ್ರೀಮಠದ ಹಾಗೂ ಶಾಖಾಮಠಗಳಲ್ಲಿರುವ ಗದ್ದುಗೆಗಳ ಆಧಾರದ ಮೇಲೆ ಶ್ರೀಮಠದ ಪರಂಪರೆಯಲ್ಲಿ ಈವರೆಗೂ 11ಜನ ಶ್ರೀಗಳು ಅಧಿಕಾರ ನಡೆಸಿ ಲಿಂಗೈಕ್ಯರಾಗಿದ್ದು ಈಗಿನ ಹಿರಿಯ ಗುರುಗಳು 12ನೇಯವರುಹಾಗೂ ಕಿರಿಯ ಗುರುಗಳು 13ನೇಯವರೆಂದು ಹೇಳಲಾಗುತ್ತದೆ. ಶ್ರೀಮಠದ ಪರಂಪರೆಯಎಲ್ಲಾ ಗುರುಗಳು ತಮ್ಮ ತಮ್ಮ ಕಾಲಾವದಿಯಲ್ಲಿ ಮಠದ ಅಭಿವೃದ್ದಿಗೆ ಶ್ರಮಿಸಿದ್ದಾರೆ.ಈಗಿನ ಹಿರಿಯ ಶ್ರೀಗಳಾದ ಶ್ರೀ.ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ಚಿಂಚೋಳಿ ತಾ|| ಕೋಡ್ಲಿ ಗ್ರಾಮದಲ್ಲಿ ಜನಿಸಿದವರಾಗಿದ್ದುಭಾಲ್ಯದಿಂದಲೂ ಆದ್ಯಾತ್ಮದತ್ತ ಒಲವು ಹೊಂದಿ ಶಿವಯೋಗ ಸಿದ್ದಿಯನ್ನು ಸಾದಿಸಿದರು. ಶ್ರೀರಾಚೋಟೇಶ್ವರ ಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸುವುದರೊಂದಿಗೆ ಶ್ರೀಮಠದ ಚಿತ ್ರಣವನ್ನೇಬದಲಾಯಿಸಿದರು. ಶತಾಯುಷಿಗಳಾಗಿರುವ ಶ್ರೀಗಳು ಈಗಲೂ ಕುಂದದ ಉತ್ಸಹದೊಂದಿಗೆಮಠದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.ಈಗಿನ ಕಿರಿಯ ಶ್ರೀಗಳಾದ ಶ್ರೀ.ಷ.ಬ್ರ. ಚಂದ್ರಗುಂಡ ಶಿವಾಚಾರ್ಯಮಹಾಸ್ವಾಮಿಗಳು 1986ರ ಏಪ್ರಿಲ್ 28ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡುಬಂದಿದ್ದು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡವರು. ಶ್ರೀಮಠದಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ವಿಸ್ತಾರಗೊಳಿಸಿರುವ ಶ್ರೀಗಳು ಶ್ರೀಮಠದಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಚೈತ್ರಶುದ್ದಪ್ರತಿಪದದಂದು ಹಿರಿಯ ಗುರುಗಳಾದ ಶ್ರೀ.ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯರ ಹುಟ್ಟುಹಬ್ಬ ಆಚರಿಸಲಾಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1912
Place :
ಕೋಡ್ಲಿ, ಚಿಂಚೋಳಿ ತಾ||
Photo :
Swamiji Name :
ಶ್ರೀ ಷ.ಬ್ರ. ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-10-1958
Place :
ಕೋಡ್ಲಿ, ಚಿಂಚೋಳಿ ತಾ||
Pattadikara :
28-04-1986
Photo :

Programs

ಯುಗಾದಿ ಚೈತ್ರ ಶುದ್ದ ಪ್ರತಿಪದಕ್ಕೆ ಶ್ರೀ.ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯರ ಹುಟ್ಟು ಹಬ್ಬ
ಶ್ರಾವಣ ಮಾಸದಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಪುರಾಣ ಪ್ರವಚನ
ದಸರಾದಲ್ಲಿ ಶ್ರೀ ದೇವಿ ಪುರಾಣ ಪಾರಾಯಣ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿ ನಿಲಯ ಗೋ ಶಾಲೆ

Full Address Kannada

ಶ್ರೀ ರಾಚೋಟೇಶ್ವರ ಮಠ
ಹೊನ್ನಕಿರಣಗಿ - 585 338
ಕುಲಬುರಗಿ ತಾ||, ಜಿಲ್ಲೆ

Map

Near by Places

ತೋನಸನಹಳ್ಳಿ - 4 ಕಿ.ಮೀ.
ಜೇವರ್ಗಿ - 30 ಕಿ.ಮೀ.
ಶಹಬಾದ್ - 10 ಕಿ.ಮೀ.
ಕಲಬುರಗಿ - 30 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!