ಚಿತ್ತಾಪುರ ತಾಲ್ಲೂಕು ಕೇಂದ್ರದಿಂದ 9 ಕಿ.ಮೀ. ದೂರದಲ್ಲಿರುವ ರಾವೂರುಗ್ರಾಮದಲ್ಲಿ ಸ್ಥಾಪನೆಯಾಗಿರುವ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠವು ಸುಮಾರು 300ವರ್ಷಗಳ ಹೊಂದಿದ್ದು ವಿರಕ್ತ ಸಂಪ್ರದಾಯದಲ್ಲಿ ಬೆಳೆದುಬಂದಿದೆ. ಶ್ರೀ ಮ.ನಿ.ಪ್ರ. ಸಿದ್ದಲಿಂಗಮಹಾಸ್ವಾಮಿಗಳು 300 ವರ್ಷಗಳ ಹಿಂದೆ ಸಂಚಾರದಲ್ಲಿ ರಾವೂರು ಗ್ರಾಮಕ್ಕೆ ಬಂದು ನೆಲೆಸಿಶ್ರೀಮಠವನ್ನು ಸಾ್ಥಪನೆ ಮಾಡುತ್ತಾರೆ. ಶ್ರೀಗಳು ಶ್ರೀಮಠದಲ್ಲಿ ನಿತ್ಯಶಿವಾನುಭವಗೋಷ್ಠಿಗಳನ್ನು ನಡೆಸುವುದರ ಮೂಲಕ ಧರ್ಮಜಾಗೃತಿಯನ್ನುಂಟುಮಾಡಿದರು. ಕಾಯಕ ಯೋಗದ ಮಹತ್ವವನ್ನು ಜನರಿಗೆ ವಿವರಿಸುತ್ತ ಬಸವಾದಿ ಶಿವಶರಣರತತ್ತ್ವಾದರ್ಶಗಳನ್ನು ಪ್ರಚುರಪಡಿಸಿದರು.ಕರ್ತೃಗುರುಗಳು ಸಮಷ್ಟಿ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಾ ಜಾತಿ ಬೇದವನ್ನುತೊಡೆದು ಹಾಕಲು ಪ್ರಯತ್ನಿಸಿದರು. ಆದರೆ ಇವರ ತರುವಾಯ ಅಧಿಕಾರಕ್ಕೆ ಬಂದಂತಹಗುರುಗಳ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿ ಅಧಿಕಾರಕ್ಕೆಬರುವ ಎಲ್ಲಾ ಶ್ರೀಗಳು ಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಬರುವುದು ಬಹುಶಃಇದಕ್ಕೆ ಕಾರಣವಾಗಿರಬಹುದು. ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಸಿದ್ದಲಿಂಗಮಹಾಸ್ವಾಮಿಗಳು 1946ರಲ್ಲಿ ಶ್ರೀಮಠದ ಪೀಠಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಶ್ರೀಮಠವನ್ನುಅಭಿವೃದ್ದಿ ಪಥದತ್ತ ಮುನ್ನಡೆಸಿದರು. ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು 1986ರಲ್ಲಿಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀಮಠದಉತ್ತರಾಧಿಕಾರಿಗಳಾಗಿ ನೇಮಕಗೊಂಡು ಶ್ರೀಮಠವನ್ನು ಜೀರ್ಣಾಭಿವೃದ್ದಿಗೊಳಿಸಿ ತದನಂತರ 1999ರ ಏಪ್ರಿಲ್ 10 ರಂದು ಪಟ್ಟಾಧಿಕಾರ ಸ್ವೀಕರಿಸಿದರು. ಶ್ರೀಗಳು ಧಾರವಾಡದಲ್ಲಿಕಾಲೇಜು ಶಿಕ್ಷಣ ಪೂರೈಸಿದ್ದು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತದಲ್ಲಿಎಂ.ಎ. ಪದವಿಯನ್ನು ಪಡೆದಿದ್ದಾರೆ. ಶ್ರೀಗಳು ಬಸವಾದಿ ಶರಣರು ಕಂಡಂತ ಜ್ಯಾತ್ಯಾತೀತಸಮಾಜವನ್ನು ನಿರ್ಮಿಸಬೇಕೆಂದು ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದ ವತಿಯಿಂದ ಶ್ರೀಸಿದ್ದೇಶ್ವರ ವಿದ್ಯಾ ಸಂಸ್ಥೆಯನ್ನು 1983ರಲ್ಲಿ ಸ್ಥಾಪಿಸಲಾಗಿದ್ದು ಅದರಡಿಯಲ್ಲಿ ಅನೇಕ ಶಾಲಾಕಾಲೇಜುಗಳನ್ನು ನಡೆಸಲಾಗುತ್ತಿದೆ
Swamiji
Swamiji Name :
ಶ್ರೀ.ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
1960
Place :
ರಾವೂರು, ಚಿತ್ತಾಪುರ ತಾ||
Pattadikara :
10-4-1999
Photo :
Programs
ಪ್ರತಿ ಸೋಮವಾರ, ಅಮವಾಸೆ ಮತ್ತು ಹುಣ್ಣಿಮೆಯಂದು ಭಜನೆ ಕಾರ್ಯಕ್ರಮ
ಯುಗಾದಿ ಹಾಗೂ ದಸರದಲ್ಲಿ ಪುರಾಣ ಪ್ರವಚನ
ಅಕ್ಕಮಹಾದೇವಿ ಜಯಂತಿಯಂದು ಶ್ರೀ ಮಠದ ಜಾತ್ರೆ
Institutions
ವಿದ್ಯಾರ್ಥಿ ನಿಲಯ - ಉಚಿತ ಪ್ರಸಾದ ನಿಲಯ
ಗೋ ಶಾಲೆ
ಕಿರಿಯ / ಹಿರಿಯ ಪ್ರಾಥಮಿಕ /ಪ್ರೌಢಶಾಲೆ
ಪದವಿಪೂರ್ವ ಕಾಲೇಜ್ ಸಂಗೀತ ಪಾಠಶಾಲೆ
Photos
Full Address Kannada
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠ
ರಾವೂರು - 585 225
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ