ಕರ್ತೃ ಪೂಜ್ಯ ಶ್ರೀ ಮಹಾಂತೇಶ್ವರ ಶಿವಾಛಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಮುಗುಳನಾಗಾವಿ ಗ್ರಾಮದ ಹೊರಭಾಗದಲ್ಲಿ ಶ್ರೀ ಕಟ್ಟಿಮನಿಸಂಸ್ಥಾನ ಹಿರೇಮಠವು ಸ್ಥಾಪಿತಗೊಂಡಿದ್ದು ಈ ಭಾಗದ ಧಾರ್ಮಿಕ ಚಟುವಟಿಕೆಗಳಕೇಂದ್ರಬಿಂದುವಾಗಿ ಬೆಳೆದಿದೆ. ಪುರಾತನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಕಟ್ಟಿಮನಿಸಂಸ್ಥಾನ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪಂಚಪೀಠಗಳಸಂಪ್ರದಾಯವನ್ನು ರೂಡಿಸಿಕೊಂಡು ಬಂದಿದೆ. ಶ್ರೀ ಮಠದ ಕರ್ತೃಗುರುಗಳೆಂದು ಶ್ರೀಮಹಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಸುಮಾರು 14ನೇ ಶತಮಾನದಲ್ಲೇ ಪ್ರಾರಂಭಗೊಂಡಿರುವ ಶ್ರೀಮಠದಪರಂಪರೆಯಲ್ಲಿ ಅನೇಕ ಮಹಾಮಹಿಮರು ಅಧಿಕಾರ ನಡೆಸಿದ್ದಾರೆ. ಕರ್ತೃಗುರುಗಳನಂತರದ ಶ್ರೀ ಕರಿಬಸವ ಶಿವಾಚಾರ್ಯರು, ನಂತರದ ಪರಂಪರೆಯ ಶ್ರೀ ಸಿದ್ದೇಶ್ವರಶಿವಾಚಾರ್ಯರು ಇದರಲ್ಲಿ ಪ್ರಮುಖರು. ಶ್ರೀಮಠದ ಎಲ್ಲಾ ಗುರುಗಳು ಶಿವಪೂಜಾನಿಷ್ಠರಾಗಿತಮ್ಮ ಅನುಷ್ಠಾನಗಳ ಮೂಲಕ ಲೋಕೊದ್ದಾರಕ್ಕಾಗಿ ಶ್ರಮಿಸಿದ್ದಾರೆ.ಪರಂಪರೆಯ ಹಿಂದಿನ ಗುರುಗಳಾದ ಶ್ರೀ. ಷ.ಬ್ರ. ಮಳೇಂದ್ರ ಶಿವಾಚಾರ್ಯಮಹಾಸ್ವಾಮಿಗಳು ತಪೋನಿಧಿಗಳಾಗಿ, ಆಯುರ್ವೇದ ಪಂಡಿತರಾಗಿ ನಾಡಿ ಶಾಸ್ತ್ರವನ್ನುಬಲ್ಲಂತಹ ಮಹಾಮೇಧಾವಿಗಳಾಗಿದ್ದರು. ವಾಕ್ಸಿದ್ದಿ ಪುರುಷರಾದ ಶ್ರೀಗಳು ಕೊಟ್ಟಆಶೀರ್ವಾದ ಎಂದು ಸುಳ್ಳಾಗಿರಲಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿತ್ತು. ಶ್ರೀಮಠವನ್ನುತಮ್ಮ ಆಚರಣೆಗಳ ಮೂಲಕ ಪ್ರಚಲಿತಕ್ಕೆ ತಂದ ಶ್ರೀಗಳು ಅಸಂಖ್ಯ ಭಕ್ತಬಳಗವನ್ನುಹೊಂದಿದ್ದು 1988ರ ಆಗಸ್ಟ್ 09ರಂದು ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ. ಮ.ಘ.ಚ. ಅಭಿನವ ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳು 1989ರ ಮೇ 21 ರಂದು ತಮ್ಮ 12ನೇ ವಯಸ್ಸಿನಲ್ಲಿಯೇ ಶ್ರೀಮಠದಪಟ್ಟಾಧಿಕಾರ ಸ್ವೀಕರಿಸಿದ್ದು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸುತ್ತಿದ್ದಾರೆ.ಗುರುಗಳು ಶಿವಯೋಗ ಮಂದಿರದಲ್ಲಿ ಯೋಗ ಹಾಗೂ ಆದ್ಯಾತ್ಮ ಶಿಕ್ಷಣದ ಬಗ್ಗೆ ಆಳವಾದಅರಿವನ್ನು ಹೊಂದಿ ಶ್ರೀಮಠಕ್ಕೆ ಮರಳಿ ಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದರು. ಶ್ರೀಗಳು ಮಠದ ಕಟ್ಟಡವನ್ನು ಜೀರ್ಣೋದ್ದಾರಗೊಳಿಸಿದ್ದುಕಲ್ಯಾಣಮಂಟಪ, ಅತಿಥಿಗೃಹ ಹಾಗೂ ದಾಸೋಹ ಭವನಗಳನ್ನು ಕಟ್ಟಿಸಿದ್ದಾರೆ ಮತ್ತುಶ್ರೀಮಠಕ್ಕೆ ನೂತನ ರಥವನ್ನು ನಿರ್ಮಿಸಿದ್ದಾರೆ.
Swamiji
Swamiji Name :
ಶ್ರೀ ಮ.ಘ.ಚ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
25-1-1977
Place :
ಅಂಕಲಗಿ, ಕಲಬುರಗಿ ಜಿ||
Pattadikara :
21-5-1989
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಪ್ರತಿ ವರ್ಷ ಜನವರಿ ತಿಂಗಳಲ್ಲಿ ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ,
ನೇತ್ರದಾನ ಶಿಬಿರ ಹಾಗೂ ಸಾಮಾಜಿಕ ಜಾಗೃತ ಮೂಡಿಸುವ ಕಾರ್ಯಕ್ರಮಗಳು
ಪ್ರತಿ ವರ್ಷ ಶ್ರೀಮಠದಿಂದ ಶ್ರೀಗಳ ಮಾರ್ಗದರ್ಶನದಲ್ಲಿ ಕೊರಕೊಳ್ಳ ಗುಡ್ಡದೆಡೆಗೆ ನಡೆಯುವ ಪಾದಯಾತ್ರೆಯಲ್ಲಿ ಭಕ್ತರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಳ್ಳುವ ಕಾರ್ಯಕ್ರಮ
Photos
Full Address Kannada
ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠ
ಮುಗುಳನಾಗಾವಿ, ಶಹಬಾದ್ ಪೋ. - 585 228
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ