Shree Basaveshwara Hirematha – Kalagi

Shree Basaveshwara Hirematha – Kalagi Claimed

ಶ್ರೀ ಶಿವಬಸವೇಶ್ವರ ಹಿರೇಮಠ - ಕಾಳಗಿ

Average Reviews

Description

ಶ್ರೀ ಶಿವಬಸವೇಶ್ವರ ಹಿರೇಮಠ – ಕಾಳಗಿ

ಕರ್ತೃ ಪೂಜ್ಯ ಶ್ರೀ ಶಿವಬಸವ ಶಿವಯೋಗಿಗಳು

ಚಿತ್ತಾಪುರ ತಾಲ್ಲೂಕಿನ ಕಾಳಗಿ ಗ್ರಾಮದಲ್ಲಿ ಶ್ರೀ ಶಿವಬಸವೇಶ್ವರ ಹಿರೇಮಠವುಅಸ್ತಿತ್ವದಲ್ಲಿದ್ದು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ. ಪುರಾತನ ಕಾಲದಲ್ಲಿ ಪೂಜ್ಯ ಶ್ರೀ ಶಿವಬಸವಶಿವಯೋಗಿಗಳೆಂಬ ಮಹಾತಪಸ್ವಿಗಳು ಸಂಚಾರದಲ್ಲಿ ಕಾಳಗಿ ಗ್ರಾಮದ ಹೊರವಲಯಕ್ಕೆಬಂದು ಅನುಷ್ಠಾನದಲ್ಲಿದ್ದರು. ತಮ್ಮ ಬಳಿಗೆ ಬರುವ ಜನರ ಕಷ್ಟಕಾರ್ಪಣ್ಯಗಳನ್ನುನಿವಾರಿಸುತ್ತಾ ಆಶೀರ್ವದಿಸಿ ಕಳುಹಿಸುತ್ತಿದ್ದರು. ನಂತರದಲ್ಲಿ ಭಕ್ತರೇ ಮುಂದೆ ನಿಂತುಗುರುಗಳಿಗೆ ಮಠವನ್ನು ಕಟ್ಟಿಸಿದ್ದು ಗುರುಗಳು ಭಕ್ತರ ಬಿನ್ನಹಕ್ಕೆ ಮನ್ನಿಸಿ ಇಲ್ಲಿ ನೆಲೆನಿಲ್ಲುತ್ತಾರೆ.ಅಂದು ಪ್ರಾರಂಭಗೊಂಡ ಮಠದ ಪರಂಪರೆ ಇಂದಿನವರೆಗೂ ಮುಂದುವರೆದಿದೆ.ಕರ್ತೃಗುರುಗಳ ನಂತರ ಶ್ರೀ. ಷ.ಬ್ರ. ಗುರುನಂಜೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಧಾರ್ಮಿಕ ಕಾರ್ಯಗಳನ್ನು ವ್ಯವಸ್ಥಿತವಾಗಿನಡೆಸುತ್ತಾ ವೀರಶೈವ ಧರ್ಮದ ತತ್ತ್ವಾಚರಣೆಗಳನ್ನು ಜನರಿಗೆ ತಿಳಿಸಿಕೊಡುತ್ತಾ ಮಠವನ್ನುಸಮರ್ಥವಾಗಿ ಮುನ್ನಡೆಸಿದರು. ಆದರೆ ಇವರ ನಂತರ ಮಠವು ಬಹುಕಾಲ ಖಾಲಿಉಳಿದಂತೆ ತೋರುತ್ತಿದ್ದು ಮಠದ ನಿಖರ ಪರಂಪರೆ ಲಭ್ಯವಿಲ್ಲ. ಲಭ್ಯವಿರುವ ದಾಖಲೆಗಳಪ್ರಕಾರ ಶ್ರೀ ಮಠದ 3ನೇ ಗುರುಗಳಾಗಿ ಶ್ರೀ. ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿದ್ದಾರೆ.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ. ಷ.ಬ್ರ. ಶಿವಬಸವ ಶಿವಾಚಾರ್ಯಮಹಾಸ್ವಾಮಿಗಳು 1972ರಲ್ಲಿ ಲಿಂಗೈಕ್ಯರಾಗಿದ್ದು ಅಲ್ಲಿಂದ ಮುಂದೆ ಸುಮಾರು 2 ದಶಕಗಳಕಾಲ ಶ್ರೀಮಠವು ಮತ್ತೊಮ್ಮೆ ಖಾಲಿ ಉಳಿದಿದೆ. ಇದಾದ ನಂತರ 1995ರಲ್ಲಿ ತಮ್ಮ 18ನೇವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀ. ಷ.ಬ್ರ. ಶಿವಬಸವಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ಕಾಳಗಿಯಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದುಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಹೆಚ್ಚಿನ ವಿಧ್ಯಾಭ್ಯಾಸ ಹಾಗೂ ಆದ್ಯಾತ್ಮ ಶಿಕ್ಷಣ ಆಳವಾದಅರಿವನ್ನು ಪಡೆದು ಬಂದವರು. ಶ್ರೀಗಳು ಬಂದ ನಂತರ ಶ್ರೀಮಠದಕಾರ್ಯಚಟುವಟಿಕೆಗಳು ವಿಸ್ತಾರಗೊಂಡಿದ್ದು ಶ್ರೀಗಳು “ಅನುಷ್ಠಾನಮೂರ್ತಿ”ಗಳೆಂದೇಹೆಸರಾಗಿದ್ದಾರೆ. ಶ್ರೀಮಠದ ವತಿಯಿಂದ ಅರ್ಹಕಲಾವಿದರಿಗೆ “ಶಿವಬಸವ ಪ್ರಶಸ್ತಿ ಯನ್ನುಪ್ರದಾನ ಮಾಡಿ ಗೌರವಿಸಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
19-9-1977
Place :
ಕಾಳಗಿ, ಚಿತ್ತಾಪುರ ತಾ||
Pattadikara :
1995
Photo :

Programs

ಪ್ರತಿ ಅಮವಾಸ್ಯೆಗೆ ಶ್ರೀಗಳ ದರ್ಶನ ಹಾಗೂ ವಿಶೇಷ ಪೂಜೆ
ದೀಪಾವಳಿ ಪಾಡ್ಯದ ಮುರುದಿನ ಕರ್ತೃ - ಶ್ರೀ ಶಿವಬಸವ ಶಿವಯೋಗಿಗಳ ಪುಣ್ಯಸ್ಮರಣೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ಅಭಿಷೇಕ, ವಿಶೇಷ ಪೂಜೆ ಹಾಗೂ ನಡುವಿನ ಸೋಮವಾರ ಪಂಚಮಿ ತಿಥಿಗೆ ಲಿಂ|| ಶ್ರೀ.ಷ.ಬ್ರ. ಶಿವಬಸವ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ಶಿವಬಸವೇಶ್ವರ ಹಿರೇಮಠ
ಕಾಳಗಿ - 585 312
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಕೋಡ್ಲಿ ಕ್ರಾಸ್ - 5 ಕಿ.ಮೀ.
ಚಿಂಚೋಳಿ - 40 ಕಿ.ಮೀ.
ಕಲಬುರಗಿ - 47 ಕಿ.ಮೀ.
ಚಿತ್ತಾಪುರ - 27 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!