Shree Kattimani Hirematha – Halakarti

Shree Kattimani Hirematha – Halakarti Claimed

ಶ್ರೀ ಕಟ್ಟಿಮನಿ ಹಿರೇಮಠ - ಹಲಕರ್ಟಿ

Average Reviews

Description

ಶ್ರೀ ಕಟ್ಟಿಮನಿ ಹಿರೇಮಠ – ಹಲಕರ್ಟಿ

ಕರ್ತೃ ಶ್ರೀ.ಷ.ಬ್ರ. ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಮಧ್ಯಭಾಗದಲ್ಲಿಸ್ಥಾಪಿತಗೊಂಡಿರುವ ಶ್ರೀ ಕಟ್ಟಿಮನಿ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸುವಲ್ಲಿ ಶ್ರಮಿಸುತ್ತಿದೆ. ಶ್ರೀಮದ್ಕಾಶಿ ಪೀಠದ ಶಾಖಾಮಠವಾಗಿರುವ ಶ್ರೀ ಕಟ್ಟಿಮನಿ ಹಿರೇಮಠವು ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದ್ದು ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ಮುನೀಂದ್ರಶಿವಾಚಾರ್ಯರನ್ನು ಹೆಸರಸಲಾಗಿದೆ.ಕರ್ತೃಗುರುಗಳ ಕುರಿತಾಗಲೇ ಹಾಗೂ ನಂತರದ ಪರಂಪರೆಯ ಕುರಿತಾಗಲೀಸ್ಪಷ್ಠವಾಗಿ ತಿಳಿದುಬರುವುದಿಲ್ಲ. ಶ್ರೀಮಠದ ಆವರಣ ಹಾಗೂ ಸುತ್ತಮುತ್ತಲಿನಲ್ಲಿ 11ಗದ್ದುಗೆಗಳನ್ನು ಗುರುತಿಸಲಾಗಿದ್ದು ಅದರ ಆಧಾರದ ಮೇಲೆ ಶ್ರೀ ಮಠದಲ್ಲಿ 12 ಜನ ಶ್ರೀಗಳುಅಧಿಕಾರ ನಡೆಸಿದ್ದಾರೆಂದು ಹೇಳಬಹುದಾಗಿದೆ. ಈ ಭಾಗದಲ್ಲಿ ಕೇಳಿಬರುವ ಜನಪದಕಥೆಯಂತೆ ಶ್ರೀ ಪವಾಡ ಸ್ವಾಮಿಗಳೆಂಬ ಮಹಾತಪಸ್ವಿಗಳು ಇಲ್ಲಿದ್ದು ಇವರ ಪವಾಡಗಳನ್ನುನೋಡಿ ಈ ಪ್ರಾಂತ್ಯವೇ ಬೆರಗಾಗಿತ್ತಂತೆ. ಬಹುಶಃ ಮಠದ ಕರ್ತೃಗಳೇ ತಮ್ಮ ಪವಾಡಗಳಿಂದಈ ಹೆಸರನ್ನು ಪಡೆದಿರಬಹುದೆಂದು ಅಂದಾಜಿಸಬಹುದು.ಶ್ರೀಮಠದ ಕಳೆದ ನಾಲ್ಕು ತಲೆಮಾರಿನ ಗುರುಗಳ ಬಗ್ಗೆ ತಿಳಿದು ಬರುತ್ತಿದ್ದುಶ್ರೀ ಷ.ಬ್ರ. ದೊಡ್ಡೇಶ್ವರ ಮಹಾಸ್ವಾಮಿಗಳನ್ನು ಆಧುನಿಕ ಕರ್ತೃಗಳೆಂದು ಗುರುತಿಸಲಾಗಿದೆ.ಇವರ ಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಸಿದ್ದಿಗೆ ಬಂದಿದೆ. ಆನಂತರ ಶ್ರೀ ಷ.ಬ್ರ. ಮುನೀಂದ್ರಶಿವಾಚಾರ್ಯ ಮಹಾಸ್ವಾಮಿಗಳು ಅಧಿಕಾರಕ್ಕೆ ಬಂದಿದ್ದು ಪಂಚಪೀಠಾದೀಶರ ನಿಕಟಸಂಪರ್ಕವನ್ನು ಹೊಂದಿ ಸಮಾಜವನ್ನು ಸಂಘಟಿತರಾಗಿ ಬೆಳೆಸಿದರು. ಇವರ ನಂತರ ಬಂದಶ್ರೀ ಷ.ಬ್ರ. ಮುನೀಂದ್ರ ಶಿವಾಚಾರ್ಯರು ವೀರಶೈವ ಸಿದ್ದಾಂತದ ಆಚರಣೆಗಳನ್ನುಅನುಷ್ಠಾನಗೊಳಿಸಿ 2007ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ 2008ರ ನವೆಂಬರ್ನಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ.ಷ.ಬ್ರ. ಮುನೀಂದ್ರಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.ಶ್ರೀಗಳು ಬೆಂಗಳೂರಿನ ಜಯಚಾಮರಾಜೇಂದ್ರ ಸಂಸ್ಕøತ ಕಾಲೇಜಿನಲ್ಲಿ ಸಂಸ್ಕøತ ವಿದ್ವತ್ಪೂರೈಸಿದ್ದು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಮಠದಗುರುಗಳೇ ಪ್ರಸಿದ್ದ ಶ್ರೀ ಹಲಕರ್ಟಿ ವೀರಭದ್ರೇಶ್ವರ ದೇವಸ್ಥಾನದ ವಿಶ್ವಸ್ಥ ಸಮಿತಿ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಾ ಬಂದಿದ್ದು ಗೌರಿಹುಣ್ಣಿಮೆ ಆದ 5ನೇ ದಿನಕ್ಕೆ ಶ್ರೀಮಠದ ರಥೋತ್ಸವಜರುಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಮುನೀಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1980
Place :
ಹಲಕರ್ಟಿ, ಚಿತ್ತಾಪುರ ತಾ||
Pattadikara :
2008
Photo :

Programs

ಫೆಬ್ರವರಿಯಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ
ಗೌರಿಹುಣ್ಣಿಮೆ ಆದ 5ನೇ ದಿನಕ್ಕೆ ಶ್ರೀಮಠದ ರಥೋತ್ಸವ

Photos

Full Address Kannada

ಶ್ರೀ ಕಟ್ಟಿಮನಿ ಹಿರೇಮಠ
ಹಲಕರ್ಟಿ - 585 225
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಶಹಬಾದ್ - 20 ಕಿ.ಮೀ.
ಕಲಬುರಗಿ - 46 ಕಿ.ಮೀ.
ಯಾದಗಿರಿ - 45 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!