ಚಿತ್ತಾಪುರ ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವದಂಡೋತಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ದೀವಟಿಗಿ ಮಠವು ಪುರಾತನಕಾಲದ ಮಠವಾಗಿದ್ದು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾ ಮಠವಾಗಿ ಪಂಚಪೀಠಗಳಸಂಪ್ರದಾಯದಲ್ಲಿ ಬೆಳೆದು ಬಂದಿದೆ. ಶ್ರೀಮಠದ ಕರ್ತೃಗುರುಗಳಾದ ಪೂಜ್ಯ ಶ್ರೀ ಶಿವಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಮಲೆನಾಡ ಪ್ರಾಂತ್ಯದಿಂದ ಲೋಕ ಸಂಚಾರ ಮಾಡುತ್ತಾದಂಡೋತಿ ಗ್ರಾಮಕ್ಕೆ ಆಗಮಿಸಿ ಇಲ್ಲಿ ತಮ್ಮ ಪವಾಡಗಳಿಂದ ಹೆಸರಾಗುತ್ತಾರೆ. ಇವರಪವಾಡಗಳಿಗೆ ಹಾಗೂ ಧರ್ಮನಿಷ್ಠತೆಗೆ ಮನಸೋತ ಭಕ್ತರು ಗುರುಗಳಿಗೆ ಶರಣಾಗಿ ಮಠದಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಲು ಸಹಾಯಕರಾದರಂತೆ. ಹೀಗೆಕರ್ತೃಗುರುಗಳಿಂದ ಜಾಗೃತಗೊಂಡು ಸ್ಥಾಪಿತಗೊಂಡ ಶ್ರೀಮಠದ ಪರಂಪರೆಯಲ್ಲಿಹಲವಾರು ಗುರುಗಳು ಅಧಿಕಾರ ನಡೆಸಿ ಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದಾರೆ.ಶ್ರೀಮಠದ ಪರಂಪರೆಯಲ್ಲಿ ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯಮಹಾಸ್ವಾಮಿಗಳು, ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ.ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ. ವೀರಭದ್ರಯ್ಯ ಮಹಾಸ್ವಾಮಿಗಳು,ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯರು, ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳು, ಶ್ರೀ ಷ.ಬ್ರ. ವೀರಭದ್ರಯ್ಯ ಮಹಾಸ್ವಾಮಿಗಳು ಹೆಸರುಗಳುಕೇಳಿಬರುತ್ತಿದ್ದು ಇವರುಗಳ ನಿಖರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಹಿಂದಿನ ಶ್ರೀಗಳಾದಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು 1925ರಲ್ಲಿ ಲಿಂಗೈಕ್ಯರಾಗಿದ್ದುಇವರ ಐಕ್ಯಾ ನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳುಬಹುಕಾಲ ಖಾಲಿ ಉಳಿದು ಶಿಥಿಲಗೊಂಡಿದ್ದ ಮಠದ ಅಧಿಕಾರವನ್ನು ವಹಿಸಿಕೊಂಡುಸರ್ವತೋಮುಖವಾಗಿ ಅಭಿವೃದ್ಧಿಪಡಿಸಿದ್ದಾರೆ. ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣದ ನಂತರಬೆಂಗಳೂರಿನ ಮಹಂತಿನ ಮಠದಲ್ಲಿ ಆಶ್ರಯ ಪಡೆದು ಸಂಸ್ಕøತ ಅಭ್ಯಾಸವನ್ನು ಮಾಡಿಬಂದವರು. ಶ್ರೀಗಳು ಶ್ರೀಮಠಕ್ಕೆ ಬಂದ ನಂತರ ಶ್ರೀಮಠವು ಹೆಚ್ಚು ಪ್ರಸಿದ್ಧಿಗೆ ಬಂದಿದ್ದುಶ್ರೀಮಠದ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆ ಭಕ್ತರು ಪಾಲ್ಗೊಳ್ಳುತ್ತಾರೆ. ಶ್ರೀಮಠದಲ್ಲಿದವನದ ಹುಣ್ಣಿಮೆಗೆ ಲಿಂ|| ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯರು ಹಾಗೂ ಲಿಂ|| ಶ್ರೀಷ.ಬ್ರ. ಕರಿಬಸವ ಶಿವಾಚಾರ್ಯರ ಪುಣ್ಯಾರಾಧನೆ ಮಹೋತ್ಸವ ನಡೆಯುತ್ತದೆ. ಶ್ರೀಗಳುಇತ್ತೀಚೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯರನ್ನುನೇಮಿಸಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
1932
Place :
ದಂಡೋತಿ, ಚಿತ್ತಾಪುರ ತಾ||
Photo :
Programs
ದಸರದಲ್ಲಿ ಶ್ರೀ ದೇವಿ ಪುರಾಣ ಪ್ರವಚನ ದೀಪಾವಳಿಗೆ ಶ್ರೀ ಲಕ್ಷ್ಮಿ ಪೂಜೆ
ಶಿವರಾತ್ರಿಗೆ ರುದ್ರಾಭಿಷೇಕ ಮತ್ತು ಲಿಂ|| ಷ.ಬ್ರ. ಶ್ರೀ ಸಿದ್ದಲಿಂಗ ಶಿವಾಚಾರ್ಯರ ಪುಣ್ಯಾರಾಧನೆ ಯುಗಾದಿಯಿಂದ 11 ದಿನಗಳ ಕಾಲ ಪುರಾಣ ದವನ ಹುಣ್ಣಿಮೆಗೆ ಲಿಂ|| ಷ.ಬ್ರ. ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮಿಗಳ ಮತ್ತು ಲಿಂ|| ಷ.ಬ್ರ. ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ದೀವಟಿಗಿ ಮಠ
ದಂಡೋತಿ - 585211
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ