ಕರ್ತೃ – ಶ್ರೀ ಷ.ಬ್ರ. ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲಾ ಕೇಂದ್ರದಿಂದ 45 ಕಿ.ಮೀ. ದೂರದಲ್ಲಿರುವ ರಾಯಕೋಡುಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಕಟ್ಟಿಮನಿ ಹಿರೇಮಠವು ಶ್ರೀಮದ್ ಉಜ್ಜಯಿನಿಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಪುರಾತನಕಾಲದ ಶ್ರೀಮಠದ ಸ್ಥಾಪಕರೆಂದು ಶ್ರೀ ಷ.ಬ್ರ. ಶಿವಲಿಂಗೇಶ್ವರ ಶಿವಾಚಾರ್ಯಮಹಾಸ್ವಾಮಿಗಳನ್ನು ಹೆಸರಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಕರ್ತೃಗುರುಗಳು ಅನುಷ್ಠಾನ ಪ್ರಿಯರಾಗಿದ್ದು ಆಧ್ಯಾತ್ಮ ಚಿಂತನೆಯಸಾಕಾರಮೂರ್ತಿಯಾಗಿ ಬೆಳೆದು ವೀರಶೈವ ಧರ್ಮದ ಪ್ರಚಾರಕ್ಕಾಗಿ ನಾಡನ್ನೆಲ್ಲಾಸುತ್ತಿದರು.ಗುರುಗಳು ಎಲ್ಲೆಲ್ಲಿ ನೆಲೆನಿಂತು ಅನುಷ್ಠಾನಗೊಂಡರೋ ಅಲ್ಲೆಲ್ಲಾ ಜಾಗೃತಸ್ಥಳಗಳಾಗಿರೂಪುಗೊಂಡು ಮಠಗಳು ಸ್ಥಾಪನೆಯಾದವು. ಹೀಗೆ ಗುರುಗಳು ರಾಯಕೋಡುಗ್ರಾಮದಲ್ಲಿ ಅನುಷ್ಠಾನಗೊಂಡು ಅನೇಕ ಪವಾಡಗಳನ್ನು ಮಾಡುತ್ತಾ ಮಠವನ್ನು ಸ್ಥಾಪಿಸಿದ್ದುಇವರ ಕಾಲದಲ್ಲಿ ವೀರಶೈವ ಧರ್ಮವು ಈ ಭಾಗದಲ್ಲಿ ಪ್ರಗತಿದಾಯಕವಾಗಿ ಬೆಳೆಯಿತು.ತಮ್ಮ ಜೀವನಕ್ರಮದಿಂದ ಸಮಾಜವನ್ನು ಶ್ರೀಮಂತಗೊಳಿಸಿದ ಗುರುಗಳು ಜೀವಂತಸಮಾಧಿಯಾಗಿ ಶ್ರೀಕ್ಷೇತ್ರವನ್ನು ಸುಕ್ಷೇತ್ರಗೊಳಿಸಿದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಈವರೆಗೂ ಮೂವತ್ತೈದು ಜನಶ್ರೀಗಳು ಪಟ್ಟಕ್ಕೆ ಬಂದಿದ್ದಾರೆಂದು ಈಗಿನ ಶ್ರೀಗಳು ಅಭಿಪ್ರಾಯ ಪಡುತ್ತಾರೆ. ಆದರೆನಿಖರವಾದ ದಾಖಲೆಗಳ ಕೊರತೆಯಿಂದಾಗಿ ಮಠದ ಪರಂಪರೆಯನ್ನು ಸ್ಪಷ್ಟವಾಗಿದಾಖಲಿಸಲು ಸಾಧ್ಯವಿಲ್ಲ. ಹಿಂದಿನ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ರೇವಣಸಿದ್ಧಯ್ಯ ದೇಶಿಕರು1973ರ ಜುಲೈ 27ರಲ್ಲಿ ಲಿಂಗೈಕ್ಯರಾಗಿದ್ದು ಹಿಂದಿನ ಶ್ರೀಗಳಿರುವಾಗಲೇ ಈಗಿನ ಗುರುಗಳನೇಮಕವಾಗಿದೆ.ಪ್ರಸ್ತುತ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು 2000ನೇ ಇಸವಿಯಲ್ಲಿಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಶ್ರೀಗಳು ತಮ್ಮಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಧರ್ಮಶಾಸ್ತ್ರಗಳಬಗ್ಗೆ ಆಳವಾದ ಅಧ್ಯಯನ ಕೈಗೊಂಡು ತದನಂತರ ಪಟ್ಟಾಧಿಕಾರ ಸ್ವೀಕರಿಸಿದರು. ಶ್ರೀಗಳುಮಠದ ಚಟುವಟಿಕೆಗಳನ್ನು ಶಿಸ್ತುಬದ್ಧಗೊಳಿಸಿದ್ದು ಪುರಾತನ ಕಾಲದ ಮಠದ ಕಟ್ಟಡವನ್ನುನವೀಕರಿಸಿದರು. ಕಾಯಕಯೋಗಿಗಳಾದ ಶ್ರೀಗಳು ಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿದ್ದುಶ್ರೀಮಠಕ್ಕೆ ಆದಾಯ ಮೂಲಗಳನ್ನು ಹೆಚ್ಚಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು
Date of Birth :
05-05-1968
Place :
ಕೋಡಂಗಲ್, ಮಹಬೂಬ್ನಗರ ತಾ||
Pattadikara :
2000
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ಭಜನೆ
ಪ್ರತಿ ವರ್ಷ ಅಕ್ಟೋಬರ್ 12ರಂದು ಕರ್ತೃ ಶ್ರೀ ಷ.ಬ್ರ. ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಹಾಗೂ 11 ದಿನಗಳ ಕಾಲ ಪುರಾಣ ಪ್ರವಚನ ಮತ್ತು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ಪ್ರತಿ ವರ್ಷ ಜುಲೈ 27ರಂದು ಲಿಂ|| ಪೂಜ್ಯ ಶ್ರೀ ರೇವಣಸಿದ್ದಯ್ಯ ದೇಶಿಕರ ಪುಣ್ಯಾರಾಧನೆ
Photos
Full Address Kannada
ಶ್ರೀ ಕಟ್ಟಿಮನಿ ಹಿರೇಮಠ
ರಾಯಕೋಡು, ಚಿಂತಪಳ್ಳಿ ಪೋಸ್ಟ್ - 585222
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ