ಕಲಬುರಗಿ ಜಿಲ್ಲೆಯ ರಟಗಲ್ ಗ್ರಾಮವು ತಾಲ್ಲೂಕು ಕೇಂದ್ರದಿಂದ 42 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಪ್ರಾಚೀನ ಪರಂಪರೆಯ ಶ್ರೀ ಮುರುಘೇಂದ್ರಸ್ವಾಮಿ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮುಖೇನ ಪ್ರಸಿದ್ಧಿಯಲ್ಲಿದೆ. 17ನೇ ಶತಮಾನದಲ್ಲಿ ಪ್ರಕೃತಿ ಸೊಬಗಿನ ಕೊಡಗಿನಿಂದ ಸಂಚಾರಮಾಡುತ್ತಾ ಈ ಭಾಗಕ್ಕೆ ಬಂದ ಶ್ರೀ ಮ.ನಿ.ಪ್ರ. ರುದ್ರ ಮಹಾಸ್ವಾಮಿಗಳು ಇಲ್ಲಿಗೆ ಸಮೀಪದಗೌರಿಗುಡ್ಡದ ಪ್ರಶಾಂತ ವಾತಾವರಣಕ್ಕೆ ಮನಸೋತು ಅನುಷ್ಠಾನಗೊಳ್ಳುತ್ತಾರೆ. ಗುರುಗಳುಗುಡ್ಡದಲ್ಲಿ ನೆಲೆನಿಂತಿದ್ದ ಸಂದರ್ಭದಲ್ಲಿ ರಟಗಲ್ ಗ್ರಾಮದ ಭಕ್ತರು ಗುರುಗಳನ್ನು¨s Àಕ್ತಿಪೂರ್ವಕವಾಗಿ ರಟಗಲ್ ಗ್ರಾಮಕ್ಕೆ ಕರೆತಂದು ಶ್ರೀಮಠದ ಸಾ್ಥಪನೆಗೆಸಹಾಯಕರಾಗುತ್ತಾರೆ.ಈ ರೀತಿ ಕರ್ತೃಗುರುಗಳಿಂದಾಗಿ ಜಾಗೃತಗೊಂಡಿದ್ದ ಶ್ರೀಮಠದ ಪರಂಪರೆಯಲ್ಲಿಈವರೆಗೂ 9 ಜನ ಶ್ರೀಗಳು ಅಧಿಕಾರ ನಡೆಸಿದ್ದು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಶ್ರೀ ಮ.ನಿ.ಪ್ರ. ಮುರುಘೇಂದ್ರ ಶಿವಯೋಗಿಗಳಕಾರಣದಿಂದಾಗಿ ಶ್ರೀಮಠವು ಹೆಚ್ಚು ಪ್ರಚಲಿತಕ್ಕೆ ಬಂದು ಶ್ರೀ ಮುರುಘೇಂದ್ರ ಸ್ವಾಮಿಮಠವೆಂದೇ ಹೆಸರಾಯಿತು. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮುರುಘೇಂದ್ರ ಸ್ವಾಮಿಗಳು1923ರಲ್ಲಿ ಅಧಿಕಾರ ಸ್ವೀಕರಿಸಿ ಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದರುಮಹಾತಪಸ್ವಿಗಳೆನಿಸಿದ್ದ ಶ್ರೀಗಳು ಅಧಣಿಯ ಶಿವಯೋಗಿಗಳ ಆಶೀರ್ವಾದ ಹಾಗೂಒಡನಾಟದಲ್ಲಿ ಪರಿಪಕ್ವಗೊಂಡು ಅಪಾರವಾದುದ್ದನ್ನು ಸಾಧಿಸಿ 1964ರಲ್ಲಿ ಲಿಂಗೈಕ್ಯರಾದರು.ಹಿಂದಿನ ಶ್ರೀಗಳಿರುವಾಗಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳು ಶಿವಯೋಗ ಮಂದಿರದಲ್ಲಿ ಆಧ್ಯಾತ್ಮ ಶಿಕ್ಷಣವನ್ನುಪಡೆದು 1982ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದರು. ಶ್ರೀಗಳುಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಅಪಾರಭಕ್ತಸಂಪತ್ತನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನುಸರ್ವತೋಮುಖವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಎಳ್ಳುಅಮವಾಸ್ಯೆಗೆ ಶ್ರೀ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಜರುಗುತ್ತಿದ್ದುವಿಜೃಂಭಣೆಯಿಂದ ನಡೆಯುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳು
Date of Birth :
1953
Place :
ರಟಗಲ್, ಚಿಂಚೋಳಿ ತಾ||
Pattadikara :
1982
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಎಳ್ಳು ಅಮವಾಸ್ಯೆಗೆ ಶ್ರೀ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಹಾಗೂ ಶಿವಾನುಭವಗೋಷ್ಠಿ, ಪುರಾಣ ಪ್ರವಚನ
Institutions
ಶಿಶು ವಿಹಾರ
Photos
Full Address Kannada
ಶ್ರೀ ಮುರುಘೇಂದ್ರ ಸ್ವಾಮಿ ಮಠ
ರಟಗಲ್ - 585322 ಚಿಂಚೋಳಿ
ತಾ||, ಕಲಬುರಗಿ ಜಿಲ್ಲೆ