Shree Revanasiddeshwara HIrematha

Shree Revanasiddeshwara HIrematha Claimed

ಶ್ರೀ ರೇವಣಸಿದ್ಧೇಶ್ವರ ಹಿರೇಮಠ

Average Reviews

Description

ಶ್ರೀ ರೇವಣಸಿದ್ಧೇಶ್ವರ ಹಿರೇಮಠ

ಷ.ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು

ಚಿಂಚೋಳಿ ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ 40 ಕಿ.ಮೀ. ದೂರದಲ್ಲಿರುವಕೋಡ್ಲಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಹಿರೇಮಠವುಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿಬೆಳೆದುಬಂದಿದೆ. ಶ್ರೀಮಠವು ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿದ್ದು ಪರಂಪರೆಯನ್ನುದಾಖಲಿಸಿಡದ ಕಾರಣ ಮಠದ ಕರ್ತೃ ಗುರುಗಳು ಹಾಗೂ ನಂತರದ ಪರಂಪರೆಯ ಬಗ್ಗೆಸ್ಪಷ್ಟತೆಯಿಲ್ಲ.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯಸ್ವಾಮಿಗಳು ಕಾಯಕಯೋಗಿಗಳಾಗಿದ್ದು ಶಿವಾಚಾರ ಸಂಪನ್ನರಾಗಿದ್ದರು. ಶ್ರೀಮಠದಲ್ಲಿಪ್ರತಿನಿತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದ ಭಕ್ತರಿಗೆ ವೀರಶೈವ ಧರ್ಮದತತ್ವೋಪದೇಶಗಳನ್ನು ಮಾಡುತ್ತಾ ಸಂಸ್ಕಾರವಂತ ಸಮಾಜದ ಸೃಷ್ಠಿಗೆ ಕಾರಣರಾಗಿದ್ದರು.ಶ್ರೀಗಳ ಕಾಲದಲ್ಲಿ ಮಠವು ಅಭಿವೃದ್ಧಿ ಹೊಂದಿದ್ದು ಮಠಕ್ಕೆ ಕಟ್ಟಡವನ್ನು ಕಟ್ಟಿಸಲಾಗಿದೆ. ಆದರೆಗುರುಗಳು ಲಿಂಗೈಕ್ಯರಾದ ನಂತರ ದಶಕಗಳ ಕಾಲ ಮಠವು ಖಾಲಿ ಉಳಿದು ಧಾರ್ಮಿಕಆಚರಣೆಗಳು ಕುಂಠಿತಗೊಂಡವು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು 1971ರಲ್ಲಿಜನಿಸಿದವರಾಗಿದ್ದು ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಸೊಲ್ಲಾಪುರದ ಶ್ರೀ ರೇವಣಸಿದ್ಧೇಶ್ವರಆಶ್ರಮದಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪಡೆದರು. ತದ ನಂತರ ಶಿಷ್ಯವರ್ಗದ ಪರಂಪರೆಯಶ್ರೀಮಠಕ್ಕೆ ಆಗಮಿಸಿದ ಶ್ರೀಗಳು 1997ರಲ್ಲಿ ಮಹಾಗಾಂವದ ಶ್ರೀ ಷ.ಬ್ರ. ಗುರುಲಿಂಗಶಿವಾಚಾರ್ಯ ಸ್ವಾಮಿಗಳಿಂದ ಪಟ್ಟಾಧಿಕಾರದ ಅನುಗ್ರಹ ಪಡೆದು ಶ್ರೀ ರೇಷಣಸಿದ್ಧೇಶ್ವರಹಿರೇಮಠಕ್ಕೆ ಪಟ್ಟಾಧಿಕಾರಗೊಂಡರು. ಇದಕ್ಕೂ ಪೂರ್ವದಲ್ಲಿ 1981ರಲ್ಲಿ ಚಿಂಚೋಳಿತಾಲ್ಲೂಕು ಪಂಗರಗದ ಹಿರೇಮಠಕ್ಕೂ ಪಟ್ಟಾಧಿಕಾರಗೊಂಡಿದ್ದ ಶ್ರೀಗಳು ಉಭಯಮಠಗಳನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಮಾರ್ಚ್ತಿಂಗಳಲ್ಲಿ ಶ್ರೀ ರೇಣುಕ ಜಯಂತಿ ಪ್ರಯುಕ್ತ ಹನ್ನೊಂದು ದಿನಗಳ ಕಾಲ ಧಾರ್ಮಿಕಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಹಾಗೂ ಶ್ರಾವಣ ಮಾಸದಲ್ಲಿ ನಿತ್ಯರುದ್ರಾಭಿಷೇಕ ನಡೆಸುತ್ತಿದ್ದು ಕೊನೆಯ ದಿವಸ ಮಂಗಳ ಸಮಾರಂಭವನ್ನು ಆಯೋಜಿಸಿವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1971
Place :
ಪಂಗರಗ, ಚಿಂಚೋಳಿ ತಾ||
Pattadikara :
1994
Photo :

Programs

ಮಾರ್ಚ್ ತಿಂಗಳಲ್ಲಿ 11 ದಿನಗಳ ಕಾಲ ಶ್ರೀ ರೇಣುಕಾ ಜಯಂತಿ ಮತ್ತು ವಿವಿಧ ಕಾರ್ಯಕ್ರಮಗಳು ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕೊನೆ ದಿನ ಮಂಗಳ ಕಾರ್ಯಕ್ರಮಗ

Photos

Full Address Kannada

ಶ್ರೀ ರೇವಣಸಿದ್ಧೇಶ್ವರ ಹಿರೇಮಠ
ಕೋಡ್ಲಿ - 585312
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ

Map

Near by Places

ಮಹಾಗಾಂವ ಕ್ರಾಸ್ - 30 ಕಿ.ಮೀ.
ಚಿಂಚೋಳಿ - 40 ಕಿ.ಮೀ.
ಕಲಬುರಗಿ - 55 ಕಿ.ಮೀ.
ಬೆಟ್ಟದ ಮೇಲೆ-ಶ್ರೀ ರಾಮಲಿಂಗೇಶ್ವರ ದೇವಸ್ಥಾನ - 1 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!