Shree Hirematha Hosalli

Shree Hirematha Hosalli Claimed

ಶ್ರೀ ಹಿರೇಮಠ - ಹೊಸಳ್ಳಿ

Average Reviews

Description

ಶ್ರೀ ಹಿರೇಮಠ – ಹೊಸಳ್ಳಿ

ಕರ್ತೃ ಶ್ರೀ ಷ.ಬ್ರ. ನಿರಂಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವಶ್ರೀ ಹಿರೇಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಸಂಸ್ಕಾರವಂತಸಮಾಜವನ್ನು ಸೃಷ್ಠಿಸುವಲ್ಲಿ ಶ್ರಮಿಸುತ್ತಿದೆ. ಪುರಾತನ ಕಾಲದ ಶ್ರೀ ಹಿರೇಮಠದ ಸ್ಥಾಪಕಗುರುಗಳು ಶ್ರೀ ಷ.ಬ್ರ. ನಿರಂಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ. ನಿರಂಜೇಶ್ವರ ಶಿವಾಚಾರ್ಯರುಮಹಾರಾಷ್ಟ್ರ ಕಡೆಯಿಂದ ಸಂಚಾರ ಕೈಗೊಂಡು ಅಲ್ಲಲ್ಲಿ ಅನುಷ್ಠಾನಗೊಂಡು ಭಕ್ತರನ್ನುಹರಸುತ್ತಾ ಧರ್ಮಜಾಗೃತಿಯನ್ನುಂಟು ಮಾಡಿ ಹೊಸಳ್ಳಿ ಗ್ರಾಮಕ್ಕೆ ಆಗಮಿಸಿ ಮಠವನ್ನುಸ್ಥಾಪನೆ ಮಾಡಿರುತ್ತಾರೆ. ಇವರ ಕಾರಣದಿಂದಾಗಿ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳುನಿರಂತರವಾಗಿ ನಡೆಯುತ್ತಾ ಬಂದಿದ್ದು ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸಿದೆ.ಕರ್ತೃಗುರುಗಳ ನಂತರದಲ್ಲಿ 4 ಜನ ಶ್ರೀಗಳು ಆಡಳಿತ ನಡೆಸಿದ್ದು ಶ್ರೀಮಠದಲ್ಲಿ 4ಗದ್ದುಗೆಗಳನ್ನು ಕಾಣಬಹುದಾಗಿದೆ. ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಸಿದ್ಧಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದು ಕರ್ನಾಟಕಮಹಾರಾಷ್ಟ್ರದಾದ್ಯಂತ ಭಕ್ತರನ್ನು ಹೊಂದಿದ್ದರು. ಶ್ರೀಗಳು ತಮ್ಮ ಅನುಷ್ಠಾನಗಳ ಮೂಲಕಪ್ರಸಿದ್ಧಿಗೊಂಡಿದ್ದು ಶ್ರೀಮಠದ ಪರಂಪರೆಯನ್ನು ಉಳಿಸಿ ಬೆಳೆಸಿದ್ದರು.ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಐಕ್ಯಾನಂತರ ಶ್ರೀಮಠವು ಖಾಲಿ ಉಳಿದಿದ್ದು ಈಕಾರಣದಿಂದಾಗಿ ಶ್ರೀಮಠದ ಇತಿಹಾಸವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.ಹಿಂದಿನ ಶ್ರೀಗಳ ಐಕ್ಯಾನಂತರ 45 ವರ್ಷ ಕಳೆದ ಮೇಲೆ ಶ್ರೀಮಠದ ಪಟ್ಟಕ್ಕೆ ಬಂದವರುಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ಬೆಂಗಳೂರುಮಹಾಂತಿನ ಮಠ ಹಾಗೂ ಗದಗದ ವೀರೇಶ್ವರ ಪುಣ್ಯಾಶ್ರಮಗಳಲ್ಲಿ ಆಧ್ಯಾತ್ಮದ ಆಳವಾದಅರಿವನ್ನು ಹೊಂದಿ ಮಠಕ್ಕೆ ಮರಳಿ 2006ರ ಮಾರ್ಚ್ 24ರಲ್ಲಿ ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿದರು. ಗುರುಗಳು ಅಧಿಕಾರ ನಡೆಸಿದ ಕಳೆದೊಂದು ದಶಕದಲ್ಲಿ ಶ್ರೀಮಠವುಪ್ರಗತಿಪಥದತ್ತ ಸಾಗಿಬಂದಿದೆ. ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬಂದಿರುವ ಶ್ರೀಗಳು ಪ್ರತಿ ವರ್ಷ ಶಿವರಾತ್ರಿಯಲ್ಲಿ ವಿಶೇಷ ಧಾರ್ಮಿಕಆಚರಣೆಗಳನ್ನು ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1968
Place :
ಹೊಸಳ್ಳಿ, ಚಿಂಚೋಳಿ ತಾ||
Pattadikara :
24-03-2006
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಪ್ರತಿ ವರ್ಷ ಶಿವರಾತ್ರಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಹಿರೇಮಠ
ಹೊಸಳ್ಳಿ - 585324
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ

Map

Near by Places

ಕೋಡ್ಲಿ ಕ್ರಾಸ್ 5 ಕಿ.ಮೀ.
ಮಹಾಗಾಂವ ಕ್ರಾಸ್ - 43 ಕಿ.ಮೀ.
ಚಿಂಚೋಳಿ 30 ಕಿ.ಮೀ.
ಕಲಬುರಗಿ 60 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!