ಚಿಂಚೋಳಿ ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಚಿಮ್ಮಾಇದಲಾಯಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಪುರಾತನ ಪರಂಪರೆಯ ಶ್ರೀ ಸಿದ್ದರಾಮೇಶ್ವರಹಿರೇಮಠವು ಈ ಭಾಗದಲ್ಲಿ ತನ್ನ ಧಾರ್ಮಿಕ ಆಚರಣೆಗಳ ಮುಖೇನ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ. ಶ್ರೀ ಶ್ರೀಶೈಲ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀಮಠದ ಕರ್ತೃಗುರುಗಳು ಪೂಜ್ಯ ಶ್ರೀ ಸೋಮಪ್ಪಮಹಾಸ್ವಾಮಿಗಳು.ಶ್ರೀಮಠದ ಪರಂಪರೆಯಲ್ಲಿ ಶ್ರೀ ಸೋಮಪ್ಪ ಮಹಾಸ್ವಾಮಿಗಳು ಹಾಗೂಶ್ರೀ ಸೋಮಶೇಖರ ಮಹಾಸ್ವಾಮಿಗಳು ಎಂಬ ಅಭಿದಾನವನ್ನೇ ಮೊದಲ ನಾಲ್ಕು ಜನಶ್ರೀಗಳು ಪಡೆದಿದ್ದು ಎಲ್ಲಾ ಶ್ರೀಗಳು ಧರ್ಮನಿಷ್ಠರಾಗಿ ವೀರಶೈವ ಧರ್ಮವನ್ನು ಬೆಳೆಸುವಲ್ಲಿಶ್ರಮವಹಿಸಿದ್ದಾರೆ. ಇವರ ನಂತರದಲ್ಲಿ ಬಂದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಕಾರಣದಿಂದಾಗಿ ಶ್ರೀಮಠವು ಹೆಚ್ಚುಪ್ರಸಿದ್ಧಿ ಬಂದಿದೆ.ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯರು ವಾಕ್ಸಿದ್ದಿಪುರುಷರಾಗಿದ್ದು ಶಿವಯೋಗಸಿದ್ದಿಯನ್ನು ಸಾಧಿಸಿಕೊಂಡಿದ್ದರು. ಸದಾ ಶಿವಪೂಜೆಯಲ್ಲಿ ನಿರತರಾಗಿ ಲೋಕೋದ್ಧಾರಕ್ಕಾಗಿಆಗಾಗ ಅನುಷ್ಠಾನದಲ್ಲಿರುತ್ತಿದ್ದ ಶ್ರೀಗಳು ಮಠದ ಭಕ್ತರಿಗೆ ಧರ್ಮೋಪದೇಶ ಮಾಡುತ್ತಾಸಂಸ್ಕಾರವಂತರನ್ನಾಗಿ ಮಾಡುತ್ತಿದ್ದರು. ಇವರ ಕಾಲದಲ್ಲಿ ಮಠವು ಪ್ರಚಲಿತಕ್ಕೆ ಬಂದಿದ್ದರಿಂದರೂಡಿಗತವಾಗಿ ಅವರ ಹೆಸರಿನಿಂದಲೇ ಶ್ರೀಮಠವನ್ನು ಕರೆಯತೊಡಗಿ ಶ್ರೀ ಸಿದ್ದರಾಮೇಶ್ವರಹಿರೇಮಠ ಎಂಬ ಹೆಸರು ಶಾಶ್ವತವಾಯಿತು. ಇಂತಹ ಗುರುಗಳು 1983ರಲ್ಲಿಲಿಂಗೈಕ್ಯರಾಗಿದ್ದು ತದನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿಯಿತು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ವಿಜಯ ಮಹಾಂತೇಶ್ವರ ಶಿವಾಚಾರ್ಯಸ್ವಾಮಿಗಳು 1994ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದರು. ಶಿವಯೋಗ ಮಂದಿರದಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪಡೆದ ಶ್ರೀಗಳುಉಜ್ಜಯಿನಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀಮಠದಲ್ಲಿ ಐದು ಗದ್ದುಗೆಗಳಿದ್ದು ನಿತ್ಯಪೂಜೆಗೆ ಒಳಪಟ್ಟಿವೆ. ಶ್ರೀಗಳು ಪ್ರತಿ ವರ್ಷ ಬನದಹುಣ್ಣಿಮೆಯಲ್ಲಿ ಲಿಂ|| ಶ್ರೀ ಷ.ಬ್ರ. ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳಪುಣ್ಯಾರಾಧನೆಯನ್ನು ಆಚರಿಸುತ್ತಿದ್ದು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳುಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ವಿಜಯ ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1966
Place :
ಖೇಡಗಿ, ಇಂಡಿ ತಾ||
Pattadikara :
1994
Photo :
Programs
ಎಳ್ಳು ಅಮವಾಸ್ಯೆ ನಂತರದ ಬನದ ಹುಣ್ಣಿಮೆಗೆ ಲಿಂ|| ಶ್ರೀ ಷ.ಬ್ರ. ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಸಿದ್ಧರಾಮೇಶ್ವರ ಹಿರೇಮಠ
ಚಿಮ್ಮಾಇದಲಾಯಿ - 585307
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ