ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ.ದೂರದಲ್ಲಿರುವ ಚಂದನಕೇರಾ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಬೃಂಗಿಪಾಚೇಶ್ವರ 108 ಸಂಸ್ಥಾನ ಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಪುರಾತನ ಪರಂಪರೆಯ ಶ್ರೀಮಠದಕರ್ತೃಗುರುಗಳು ಪೂಜ್ಯ ಶ್ರೀ ಬೃಂಗಿ ಪಾಚೇಶ್ವರ ಮಹಾಸ್ವಾಮಿಗಳು.ಕರ್ತೃಗುರುಗಳಾದ ಶ್ರೀ ಬೃಂಗಿ ಪಾಚೇಶ್ವರ ಮಹಾಸ್ವಾಮಿಗಳ ನಂತರದಲ್ಲಿಶ್ರೀ ಷ.ಬ್ರ. ರಾಚೋಚೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಠದ ಆಡಳಿತವನ್ನುಮುನ್ನಡೆಸಿದ್ದು ಇವರ ನಂತರದಲ್ಲಿ ಶ್ರೀ ಷ.ಬ್ರ. 2ನೇ ರಾಚೋಚೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸಿದ್ದರು. ಇವರ ನಂತರ ಕೆಲಕಾಲಶ್ರೀ ಷ.ಬ್ರ. ಪರ್ವತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಡಳಿತ ನಡೆಸಿದ್ದಾರೆ.ಪ್ರಸ್ತುತ ಶ್ರೀ ಷ.ಬ್ರ. ಅಭಿನವ ರಾಚೋಚೇಶ್ವರ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಐದನೇ ಪೀಠಾಧಿಪತಿಗಳಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ. ಮೈಸೂರಿನಸುತ್ತೂರು ಮಠದಲ್ಲಿ ಬಿ.ಎ. ಪದವಿ ಪೂರೈಸಿದ ಶ್ರೀಗಳು ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ2 ಸ್ವರ್ಣ ಪದಕಗಳೊಂದಿಗೆ ಸಂಸ್ಕøತ ಎಂ.ಎ. ಸ್ನಾತಕ ಪದವಿ ಪೂರೈಸಿದ್ದಾರೆ. ತದನಂತರ2015ರ ಏಪ್ರಿಲ್ 04 ರಲ್ಲಿ ಶ್ರೀ ರಂಭಾಪುರಿ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯಭಗವತ್ಪಾದರ ಸಮ್ಮುಖದಲ್ಲಿ ಶ್ರೀಮಠದ ಪಟ್ಟಾಧಿಕಾರದ ಅನುಗ್ರಹ ಪಡೆದಿದ್ದಾರೆ. ಇದೀಗಶ್ರೀಗಳು ಶ್ರೀ ಸಿದ್ದಾಂತ ಶಿಖಾಮಣಿ : ಅಲ್ಲಮ ಪ್ರಭುದೇವ ವಚನಾತಿಚ – ತೌಲನಿಕಾದ್ಯಯನಎಂಬ ವಿಷಯದ ಮೇಲೆ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪ್ರಬಂಧರಚನೆಯಲ್ಲಿ ನಿರತರಾಗಿದ್ದಾರೆ.ಪ್ರಸ್ತುತ ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದುಮಠದಲ್ಲಿರುವ 3 ಗದ್ದುಗೆಗಳಿಗೆ ನಿತ್ಯಪೂಜೆಯ ವ್ಯವಸ್ಥೆ ಮಾಡಿದ್ದಾರೆ ಹಾಗೂ ಭಕ್ತರಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸುತ್ತಿರುವ ಶ್ರೀಗಳು ಆನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಶ್ರೀಮಠದವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ರಾಚೋರೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
01-03-1985
Place :
ಅಳಗಿ, ಅಕ್ಕಲಕೋಟೆ ತಾ||
Pattadikara :
02-04-2015
Photo :
Programs
ಪ್ರತಿ ಅಮವಾಸೆಗೆ ಭಜನೆ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ಒಂದು ತಿಂಗಳು ಶ್ರೀ ಮಠದಲ್ಲಿ ಶ್ರೀಗಳ ಅನುಷ್ಠಾನ ಮತ್ತು ಭಜನೆ ಕಾರ್ಯಕ್ರಮ ಡಿಸೆಂಬರ್ನಲ್ಲಿ ಶ್ರೀ ಮಠದ ವಾರ್ಷಿಕೋತ್ಸವ
Photos
Full Address Kannada
ಶ್ರೀ ಬೃಂಗಿ ಪಾಚೇಶ್ವರ 108 ಸಂಸ್ಥಾನ ಹಿರೇಮಠ
ಚಂದನಕೇರಾ - 565313
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ