Shree Mahanteshwara Virakta Matha – Narona

Shree Mahanteshwara Virakta Matha – Narona Claimed

ಶ್ರೀ ಮಹಾಂತೇಶ್ವರ ವಿರಕ್ತ ಮಠ - ನರೋಣ

Average Reviews

Description

ಶ್ರೀ ಮಹಾಂತೇಶ್ವರ ವಿರಕ್ತ ಮಠ – ನರೋಣ

ಕರ್ತೃ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳು

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ನರೋಣ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಮಹಾಂತೇಶ್ವರ ವಿರಕ್ತಮಠವು ಪುರಾತನ ಪರಂಪರೆಯನ್ನುಹೊಂದಿದ್ದು ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳಿಂದ ಸ್ಥಾಪಿಸಲ್ಪಟ್ಟಿದೆ. ಶ್ರೀ ಮಹಾಂತಶಿವಯೋಗಿಗಳು ಸಂಚಾರದಲ್ಲಿ ನರೋಣ ಗ್ರಾಮಕ್ಕೆ ಆಗಮಿಸಿ ಅನುಷ್ಠಾನ ಕೈಗೊಂಡು ಈಸ್ಥಳವನ್ನು ಜಾಗೃತಗೊಳಿಸಿದರು. ಗುರುಗಳು ನೆಲೆ ನಿಂತ ಸ್ಥಳದಲ್ಲಿ ಮಠವುಸ್ಥಾಪಿತಗೊಂಡಿದ್ದು ಅಸಂಖ್ಯಾತ ಭಕ್ತರನ್ನು ಪೊರೆಯುತ್ತಿದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಐದು ಜನ ಗುರುಗಳು ಅಧಿಕಾರನಡೆಸಿದ್ದು ಶ್ರೀಮಠದಲ್ಲಿ ಐದು ಗದ್ದುಗೆಗಳನ್ನು ಕಾಣಬಹುದಾಗಿದೆ. ಪರಂಪರೆಯ ಎಲ್ಲಾಗುರುಗಳು ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು ಹಾಗೂ ಶ್ರೀ ಮ.ನಿ.ಪ್ರ.ಗುರುಮಹಾಂತ ಮಹಾಸ್ವಾಮಿಗಳೆಂಬ ಅಭಿದಾನದೊಂದಿಗೆ ಅಧಿಕಾರ ಸ್ವೀಕರಿಸುತ್ತಾಬಂದಿರುವುದು ವಿಶೇಷ. ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಮಹಾಂತಮಹಾಸ್ವಾಮಿಗಳು ಈಗ್ಗೆ 60 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದು ಅವರು ಲಿಂಗೈಕ್ಯರಾದನಂತರ ಶ್ರೀಮಠವು ಮೂರೂವರೆ ದಶಕಗಳ ಕಾಲ ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಮಹಾಂತ ಮಹಾಸ್ವಾಮಿಗಳು 1989ರಏಪ್ರಿಲ್ 10ರಲ್ಲಿ ಶ್ರೀಮಠದ ಅಧಿಕಾರಕ್ಕೆ ಬಂದಿದ್ದು ಶ್ರೀಗಳಿಗೆ ಪಟ್ಟಾಧಿಕಾರದ ಅನುಗ್ರಹನೀಡಿದವರು ಬಾಗಲಕೋಟೆ ಶ್ರೀ ಚರಂತಿ ಮಠದ ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳು.ಶ್ರೀಗಳು ಗದಗದ ತೋಂಟದಾರ್ಯ ಮಠ ಹಾಗೂ ಹುಬ್ಬಳ್ಳಿಯ ಶ್ರೀ ಮೂರು ಸಾವಿರಮಠಗಳಲ್ಲಿ ಸಂಸ್ಕøತ, ಆಧ್ಯಾತ್ಮ ಶಿಕ್ಷಣವನ್ನು ಅಧ್ಯಯನ ಮಾಡಿದ್ದು ಪುರಾಣ ಪ್ರವಚನಕಲೆಯನ್ನು ಕರಗತ ಮಾಡಿಕೊಂಡರು.ಶ್ರೀ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ದೀರ್ಘ ಕಾಲದಿಂದ ಖಾಲಿ ಉಳಿದಶ್ರೀಮಠದ ಅಧಿಕಾರ ವಹಿಸಿಕೊಂಡು ಮಠವನ್ನು ಜೀರ್ಣಾಭಿವೃದ್ಧಿಗೊಳಿಸಿದ್ದಾರೆ.ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ ಶಿವಾನುಭವಗೋಷ್ಠಿಗಳನ್ನು ಆಯೋಜಿಸಿ ಆ ಮೂಲಕಭಕ್ತಜನರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುತ್ತಿದ್ದಾರೆ. ಊರಿನ ಯಾವುದೇ ಹಬ್ಬಗಳುಹಾಗೂ ಸಮಾರಂಭಗಳು ಶ್ರೀಗಳ ಅಮೃತಹಸ್ತದಿಂದಲೇ ಪ್ರಾರಂಭಗೊಳ್ಳುತ್ತಿದ್ದು ಗುರುಗಳುಒಂದು ಸಾವಿರ ಜನರಿಗೆ ಲಿಂಗದೀಕ್ಷೆಯನ್ನು ನೀಡಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಮಹಾಂತ ಮಹಾಸ್ವಾಮಿಗಳು
Date of Birth :
01-06-1965
Place :
ದೇವಣಗಾಂ, ಸಿಂದಗಿ ತಾ||
Pattadikara :
10-04-1989
Photo :

Programs

ಪ್ರತಿ ಅಮವಾಸೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ,
ಶಿವಾನುಭವಗೋಷ್ಠಿ ಯುಗಾದಿ ಪಾಡ್ಯಕ್ಕೆ ಲಿಂ|| ಶ್ರೀ ಮಹಾಂತ ಶಿವಯೊಗಿಗಳ ಪುಣ್ಯ ಸ್ಮರಣೋತ್ಸವ

Photos

Full Address Kannada

ಶ್ರೀ ಮಹಾಂತೇಶ್ವರ ವಿರಕ್ತ ಮಠ
ನರೋಣ - 585311
ಆಳಂದ ತಾ||, ಕಲಬುರಗಿ ಜಿಲ್ಲೆ

Map

Near by Places

ಕಡಗಂಚಿ - 10 ಕಿ.ಮೀ.
ಆಳಂದ - 30 ಕಿ.ಮೀ.
ಕಲಬುರಗಿ - 25 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!