ಆಳಂದ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಲಾಡಮುಗಳಿಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀವಿರಕ್ತಮಠವು ತನ್ನ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಮಠದ ಸ್ಥಾಪಕಗುರುಗಳೆಂದು ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳನ್ನು ಗುರುತಿಸಿಲಾಗಿದ್ದು ಅವರಕಾಲಮಾನದ ಬಗ್ಗೆ ನಿಖರತೆಯಿಲ್ಲ. ಕರ್ತೃಗುರುಗಳು ಹಾಗೂ ನಂತರದ ಪರಂಪರೆಯಕುರಿತು ದಾಖಲೆಗಳ ಕೊರತೆಯಿಂದಾಗಿ ತಿಳಿದು ಬರುವುದಿಲ್ಲ.ಈಗಿನ ಹಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಸ್ವಾಮಿಗಳು ಮಠವನ್ನುಭಕ್ತರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳ ಮೂಲಕ ಭಕ್ತ ಬಾಂದವರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದಾರೆ.ಇತ್ತೀಚೆಗೆ ಹಿರಿಯ ಗುರುಗಳು 2007 ಫೆಬ್ರವರಿ 22ರಂದು ಈಗಿನ ಕಿರಿಯ ಶ್ರೀಗಳಾದಪೂಜ್ಯ ಶ್ರೀ ಕುಮಾರ ದೇವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕಮಾಡಿಕೊಂಡಿದ್ದಾರೆ.ಕಿರಿಯ ಶ್ರೀಗಳಾದ ಶ್ರೀ ಕುಮಾರ ದೇವರು ಶಿವಯೋಗಮಂದಿರದಲ್ಲಿ ಪ್ರಾರಂಭಿಕಶಿಕ್ಷಣವನ್ನು ಪಡೆದು ತದನಂತರ ಪಿ.ಯು.ಸಿ ಇಂದ ಎಂ.ಎ. ಸ್ನಾತಕ ಪದವಿಯವರೆಗೆಮೈಸೂರಿನ ಜೆ.ಎಸ್.ಎಸ್. ವಿದ್ಯಾಪೀಠ ಹಾಗೂ ಮಹಾರಾಜ ಕಾಲೇಜುಗಳಲ್ಲಿಅಭ್ಯಸಿಸಿದ್ದಾರೆ. 2007ರಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿರುವ ಶ್ರೀಗಳುಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ದಿನನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮಾವಾಸ್ಯೆಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಗೌರಿ ಹುಣ್ಣಿಮೆಗೆ ಮುತ್ತೈದೆಯರಿಗೆ ಉಡಿ ತುಂಬುವಕಾರ್ಯಕ್ರಮ ಹಾಗೂ ದಸರಾದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಗಳು ನಡೆಯುತ್ತವೆ.ಶ್ರೀಮಠದ ರಥೋತ್ಸವವು ಯುಗಾದಿ ಅಮಾವಾಸ್ಯೆ ನಂತರ ಹುಣ್ಣಿಮೆ ಆದ 3ನೇ ದಿನಕ್ಕೆಜರುಗುತ್ತಿದ್ದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವಿರೂಪಾಕ್ಷ ಸ್ವಾಮಿಗಳು
Date of Birth :
1913
Place :
ಲಾಡ ಮುಗಳಿ, ಆಳಂದ ತಾ||
Photo :
Programs
ಯುಗಾದಿ ಅಮವಾಸ್ಯೆ ನಂತರ ಹುಣ್ಣಿಮೆಯ 3ನೇ ದಿನಕ್ಕೆ ಶ್ರೀಮಠದ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಗೌರಿ ಹುಣ್ಣಿಮೆಗೆ ಶ್ರೀ ಮಠದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ
ದಸರಾದಲ್ಲಿ ಶ್ರೀಮಠದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ
Photos
Full Address Kannada
ಶ್ರೀ ವಿರಕ್ತ ಮಠ
ಲಾಡಮುಗಳಿ - 585316
ಆಳಂದ ತಾ||, ಕಲಬುರಗಿ ಜಿಲ್ಲೆ