Shree Shantalingeshwara Kattimani – Kadaganchi

Shree Shantalingeshwara Kattimani – Kadaganchi Claimed

ಶ್ರೀ ಶಾಂತಲಿಂಗೇಶ್ವರ ಕಟ್ಟಿಮಠ - ಕಡಗಂಚಿ

Average Reviews

Description

ಶ್ರೀ ಶಾಂತಲಿಂಗೇಶ್ವರ ಕಟ್ಟಿಮಠ – ಕಡಗಂಚಿ

ಕರ್ತೃ ಶ್ರೀ ಷ.ಬ್ರ. ಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಆಳಂದ ತಾಲ್ಲೂಕು ಕಡಗಂಚಿ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿರುವ ಶ್ರೀಶಾಂತಲಿಂಗೇಶ್ವರ ಕಟ್ಟಿಮಠವು ಪುರಾತನ ಕಾಲದ ಮಠವಾಗಿದ್ದು ಶ್ರೀಮದ್ ಉಜ್ಜಯಿನಿಮಠದ ಶಾಖಾಮಠವಾಗಿದೆ. ಶ್ರೀಮಠದ ಸ್ಥಾಪಕ ಗುರುಗಳು ಶ್ರೀ ಷ.ಬ್ರ. ಶಾಂತಲಿಂಗೇಶ್ವರಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀಗಳು ಪವಾಡ ಪುರುಷರಾಗಿ ವೀರಶೈವ ಧರ್ಮವನ್ನುಪ್ರಚುರಪಡಿಸಿ ಭಕ್ತರ ಉದ್ದಾರಕ್ಕಾಗಿ ಶ್ರಮಿಸಿದರು. ಇಲ್ಲಿನ ಅಜ್ಞಾನ, ಅಂಧಕಾರವನ್ನುತೊಡೆದುಹಾಕಿ ಧಾರ್ಮಿಕ ವಾತಾವರಣ ಬೆಳೆಯಲು ಕಾರಣರಾದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಸಾಗಿ ಬಂದಿರುವ ಶ್ರೀಗಳೆಲ್ಲರೂಧರ್ಮವನ್ನು ಸಮರ್ಥವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಪರಂಪರೆಯ ಕೆಲವುಗುರುಗಳ ಬಗ್ಗೆ ಮಾತ್ರ ತಿಳಿದುಬರುತ್ತಿದ್ದು ಪೂರ್ಣ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಕರ್ತೃಗುರುಗಳ ನಂತರ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು ಹಾಗೂ ಶ್ರೀ ಶಾಂತಲಿಂಗೇಶ್ವರಶಿವಾಚಾರ್ಯರ ಕುರಿತಾಗಿ ಮಾಹಿತಿಗಳಿವೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳುಮಠವನ್ನು ಬೆಳೆಸಿ ಅಭಿವೃದ್ಧಿ ಪಥದತ್ತ ಮುನ್ನಡೆಸಿ 1970ರಲ್ಲಿ ಲಿಂಗೈಕ್ಯರಾಗಿದ್ದು ಇವರನಂತರ ಅಧಿಕಾರ ವಹಿಸಿಕೊಂಡ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯಮಹಾಸ್ವಾಮಿಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇವರುರಾಯಚೂರು ಜಿಲ್ಲೆ ಬಿಚ್ಚಾಲಿ ಹಿರೇಮಠದ ಅಧಿಕಾರವನ್ನೂ ವಹಿಸಿಕೊಂಡು ಜೊತೆಗೆಮಟಮರಿ ಹಾಗೂ ಕಡೆಗಂಚಿ ಮಠಗಳ ಆಡಳಿತವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠದ ಗದ್ದುಗೆಗಳಿಗೆನಿತ್ಯ ಪೂಜೆ, ಅಮವಾಸ್ಯೆಯಲ್ಲಿ ವಿಶೇಷ ಪೂಜೆ. ಶ್ರೀಗಳ ದರ್ಶನ ಕಾರ್ಯಕ್ರಮಗಳುನಡೆಯುತ್ತಿದ್ದು ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳನ್ನು ಹೇಳಿಸಲಾಗುತ್ತದೆ. ಯುಗಾದಿಆದ 7ನೇ ದಿನಕ್ಕೆ ಶ್ರೀಮಠದ ರಥೋತ್ಸವ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಮಹೋತ್ಸವ ನಡೆಯುತ್ತಿದೆ. ಈ ಸಂದರ್ಭಗಳಲ್ಲಿ ಅನ್ನದಾಸೋಹದ ವ್ಯವಸ್ಥೆ ಇದ್ದುಅಸಂಖ್ಯಾತ ಭಕ್ತರು ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು
Place :
ಬಳಗನೂರು, ಸಿದನೂರು ತಾ||
Photo :

Programs

ಪ್ರತಿ ಅಮವಾಸÉಗೆ ವಿಶೇಷ ಪೂಜೆ ಹಾಗೂ ಶ್ರೀಗಳ ದರ್ಶನ
ಯುಗಾದಿ ಆದ 7ನೇ ದಿನಕ್ಕೆ ಶ್ರೀ ಮಠದ ರಥೋತ್ಸವ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ

Institutions

ಕಿರಿಯ / ಹಿರಿಯ ಪ್ರಾಥಮಿಕ /ಪ್ರೌಢಶಾಲೆ
ಪದವಿಪೂರ್ವ ಕಾಲೇಜ್ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಶಾಂತಲಿಂಗೇಶ್ವರ ಕಟ್ಟಿಮಠ
ಕಡಗಂಚಿ - 585 311 ಆಳಂದ
ತಾ||, ಕಲಬುರಗಿ ಜಿಲ್ಲೆ

Map

Near by Places

ಕಡಗಂಚಿಕ್ರಾಸ್ 1 ಕಿ.ಮೀ.
ಆಳಂದ 19 ಕಿ.ಮೀ.
ಕಲಬುರಗಿ 20 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!