ಆಳಂದ ತಾಲ್ಲೂಕಿನ ದೇವಂತಿಗೆ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವಪುರಾತನ ಕಾಲದ ಶ್ರೀ ರೇವಣಸಿದ್ದೇಶ್ವರ ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯ ವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಪೂಜ್ಯ ಶ್ರೀ ಮಡಿವಾಳಶಿವಯೋಗಿಗಳು ಸಂಚಾರದಲ್ಲಿ ದೇವಂತಿಗೆ ಗ್ರಾಮದ ಹೊರವಲಯಕ್ಕೆ ಬಂದುಧೀರ್ಘಾನುಷ್ಠಾನದಲ್ಲಿರುವಾಗ ಗ್ರಾಮಸ್ಥರ ಗಮನಕೆ ್ಕ ಬಂದು ಶ್ರೀಮಠವುಸ್ಥಾಪಿತಗೊಂಡಿತೆಂದು ಹೇಳಲಾಗುತ್ತದೆ.ಹೀಗೆ ಶ್ರೀ ಮಡಿವಾಳ ಶಿವಯೋಗಿಗಳಿಂದ ಸ್ಥಾಪಿತಗೊಂಡ ಮಠದಪರಂಪರೆಯಲ್ಲಿ ಈವರೆಗೂ 9 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದು ಹೇಳಲಾಗಿದ್ದುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಕರ್ತೃ ಗುರುಗಳ ನಂತರದ ಪರಂಪರೆಯಲ್ಲಿ ಐದು ಜನಶ್ರೀಗಳ ಕುರಿತಾಗಿ ಯಾವುದೇ ಮಾಹಿತಿಗಳಿಲ್ಲದಿರುವುದರಿಂದ ಗುರುತಿಸಲಾಗಿಲ್ಲ. ಶ್ರೀ ಷ.ಬ್ರ.ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳ ನಂತರದ ಪರಂಪರೆ ಬಗ್ಗೆ ತಿಳಿದು ಬರುತ್ತದೆ.ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯರು ಪವಾಡ ಪುರುಷರಾಗಿದ್ದು ತಮ್ಮಪವಾಡಗಳಿಂದ ಮನೆ ಮಾತಾಗಿದ್ದರು. ತಮ್ಮ ಆಚರಣೆಗಳ ಮೂಲಕ ಅಪಾರ ಭಕ್ತಬಳಗವನ್ನು ಹೊಂದಿದ್ದ ಶ್ರೀಗಳು ಗವಿಯಲ್ಲಿ ಜೀವಂತ ಸಮಾದಿಯಾಗಿದ್ದು ಗವಿಯ ಒಳಗಡೆಇವರ ಗದ್ದುಗೆಯನ್ನು ನಿರ್ಮಾಣ ಮಾಡಲಾಗಿದೆ. ಶ್ರೀ ರೇವಣಸಿದ್ದ ಶಿವಾಚಾರ್ಯರು ತಮ್ಮಪವಾಡಗಳಿಂದ ಜನಮನದಲ್ಲಿ ಉಳಿದು ಮಠವನ್ನು ಅಭಿವೃದ್ದಿ ಪಡಿಸಿದ ಕಾರಣ ಶ್ರೀಮಠಕ್ಕೆಶ್ರೀ ರೇವಣಸಿದ್ದೇಶ್ವರ ಮಠವೆಂದು ಕರೆಯಲಾಗುತ್ತಿದೆ.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ರಾಚೋಟಿ ಶಿವಾಚಾರ್ಯಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಶ್ರೀಮಠವು 60 ವರ್ಷಗಳ ಕಾಲ ಖಾಲಿ ಉಳಿದಿದೆ.ಸುದೀರ್ಘ ಕಾಲ ಖಾಲಿ ಉಳಿದ ಶ್ರೀಮಠಕ್ಕೆ 1975ರಲ್ಲಿ ಅಧಿಕಾರ ಸ್ವೀಕರಿಸಿ ಬಂದವರುಈಗಿನ ಶ್ರೀಗಳಾದ ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ಧಾರವಾಡದಮುರುಘಾ ಮಠದಲ್ಲಿ ಸಂಸ್ಕøತ, ವೇದ ಅಭ್ಯಾಸ ಪೂರೈಸಿ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳುಶ್ರೀಮಠವನ್ನು ಸರ್ವತೋಮುಖ ರೀತಿಯಲ್ಲಿ ಅಭಿವೃದ್ದಿಗೊಳಿಸಿದ್ದಾರೆ. ಶ್ರೀಮಠದಕಟ್ಟಡವನ್ನು ನೂತನವಾಗಿ ನಿರ್ಮಿಸಿರುವ ಶ್ರೀಗಳು ದಾಸೋಹ ಮಂದಿರವನ್ನುನಿರ್ಮಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು
Place :
ಕೋಟೂರು, ಧಾರವಾಡ ತಾ||
Pattadikara :
1975
Photo :
Programs
ಪ್ರತಿ ಅಮವಾಸೆಗೆ ರುದ್ರಾಭಿಷೇಕ
ಶ್ರಾವಣ ಮಾಸದಲ್ಲಿ ಶ್ರೀ ಮಠದ ಜಾತ್ರೆ ಮತ್ತು ಧಾರ್ಮಿಕ ಸಭೆ
ದಸರದಲ್ಲಿ ಶ್ರೀ ದೇವಿ ಪುರಾಣ ಪ್ರವಚನ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ರೇವಣಸಿದ್ದೇಶ್ವರ ಮಠ
ದೇವಂತಿಗೆ - 585 302, ಬೂಸನೂರು ಪೋ.
ಆಳಂದ ತಾ||, ಕಲಬುರಗಿ ಜಿಲ್ಲೆ