ಕರ್ತೃ – ಪೂಜ್ಯ ಶ್ರೀ ಸಿದ್ದಮಲ್ಲೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಆಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಪುರಾತನಕಾಲದ ಶ್ರೀ ಕಲ್ಮಠವು ತನ್ನ ಪ್ರಾಚೀನ ಪರಂಪರೆಯಿಂದಾಗಿ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವಾಗಿ ಗುರುತಿಸಿಕೊಳ್ಳುತ್ತದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾಗಿಪಂಚಪೀಠಗಳ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವ ಶ್ರೀ ಕಲ್ಮಠವು ಕ್ರಿ.ಶ.971ರಲ್ಲಿಯೇ ಅಸ್ತಿತ್ತ್ವದಲ್ಲಿತ್ತೆಂದು ಹೇಳಲಾಗುತ್ತದೆ. ಶ್ರೀಮಠದ ಕರ್ತೃ ಗುರುಗಳಾದ ಪೂಜ್ಯಶ್ರೀ ಸಿದ್ದಮಲ್ಲೇಶ್ವರ ಶಿವಾಚಾರ್ಯರು ತಮ್ಮ ಅನುಷ್ಠಾನಗಳಿಂದ, ತಪೋನಿಷ್ಠತೆಯಿಂದಶಿವಯೋಗ ಸಿದ್ದಿ ಪಡೆದವರು. ತಮ್ಮ ಜೀವಿತದಲ್ಲಿ ಸದಾ ಸಂಚಾರ ಮೂರ್ತಿಗಳಾಗಿಜನರನ್ನು ಉದ್ದರಿಸುವ ಶ್ರೀಗಳು ಚಿಂಚನಸೂರು ಗ್ರಾಮಕ್ಕೆ ಬಂದು ಅನುಷ್ಠಾನದಲ್ಲಿನಿರತರಾಗಿದ್ದು ಭಕ್ತರ ಅಪೇಕ್ಷೆಯಂತೆ ಇಲ್ಲಿಯೇ ನೆಲೆನಿಂತು ಶ್ರೀ ಕಲ್ಮಠವನ್ನು ಸ್ಥಾಪಿಸಿದರು.ಕರ್ತೃ ಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಪರಂಪರೆಯಲ್ಲಿಇಲ್ಲಿಯವರೆಗೂ 19 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದು ಹೇಳಲಾಗಿದ್ದು 15ನೇ ಶ್ರೀಗಳತನಕದ ಇತಿಹಾಸ ಲಭ್ಯವಾಗುವುದಿಲ್ಲ. ಪರಂಪರೆಯ 16ನೇ ಗುರುಗಳಾದ ಶ್ರೀ ಷ.ಬ್ರ.ನೂರೊಂದಪ್ಪ ಶಿವಾಚಾರ್ಯರು ಲೀಲಾಪುರುಷರಾಗಿ ತಮ್ಮ ಪವಾಡಗಳ ಮೂಲಕಶ್ರೀಮಠವನ್ನು ಪ್ರಚಲಿತಕ್ಕೆ ತಂದಿದ್ದಾರೆ. ಇವರ ನಂತರದ ಶ್ರೀ ಷ.ಬ್ರ. ಗದ್ದುಗೇಂದ್ರಶಿವಾಚಾರ್ಯರ ಕಾಲದಲ್ಲಿ ಪ್ಲೇಗ್ ಮಾರಿ ಈ ಗ್ರಾಮಕ್ಕೆ ಅಪ್ಪಳಿಸಿತ್ತಂತೆ. ಈ ಸಂದರ್ಭದಲ್ಲಿಗುರುಗಳು ಜನರಲ್ಲಿ ಸ್ಥೆರ್ಯ ತುಂಬ ತಮ್ಮ ಪೂಜಾ ನಿಷ್ಠತೆ ಛಲದಿಂದ ಜನರನ್ನುಕಾಪಾಡಿದರಂತೆ. ಇವರ ನಂತರ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಮಲ್ಲಶಿವಾಚಾರ್ಯರು ಶ್ರೀಮಠವನ್ನು ಮುನ್ನಡೆಸಿದ್ದು ಅನೇಕ ಧಾರ್ಮಿಕ, ಸಾಹಿತ್ಯಿಕ ಕೃತಿಗಳನ್ನುರಚಿಸಿದ್ದು “ಕವಿರತ್ನ” ಎಂಬ ಬಿರುದನ್ನು ಪಡೆದಿದ್ದರು. ಉದ್ದಾಮ ಪಂಡಿತರಾದ ಶ್ರೀಗಳು1974ರಲ್ಲಿ ಕುರುಕೋಟೆಯಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಮಲ್ಲ ಶಿವಾಚಾರ್ಯರು ಹಿಂದಿನ ಗುರುಗಳಐಕ್ಯಾನಂತರ 1977ರ ಏಪ್ರಿಲ್ 26ರಂದು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದಅಪಾರ ಸಂಖ್ಯೆ ಭಕ್ತ ಬಳಗವನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿರುವ ಶ್ರೀಗಳು ಶ್ರೀಮಠವನ್ನುಸದಾ ಚಟುವಟಿಕೆಯ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಮಲ್ಲ ಶಿವಾಚಾರ್ಯ ಸ್ವಾಮಿಗಳು
Date of Birth :
08-08-1940
Place :
ಗುಡ್ಡಳ್ಳಿ, ಸಿಂದಗಿ ತಾ||
Pattadikara :
26-04-1977
Photo :
Programs
ಮಾರ್ಚ್ನಲ್ಲಿ ಲಿಂ|| ಶ್ರೀ ಷ.ಬ್ರ. ಗದ್ದುಗೇಂದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
ದಸರಾದಲ್ಲಿ ವಿಶೇಷ ಕಾರ್ಯಕ್ರಮಗಳು
ಅಕ್ಟೋಬರ್ನಲ್ಲಿ ಪಂಡಿತ ಲಿಂ|| ಶ್ರೀ ಷ.ಬ್ರ. ಕವಿರತ್ನ ಸಿದ್ಧಮಲ್ಲ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಕಲ್ಮಠ ಚಿಂಚನಸೂರು - 585 104
ಆಳಂದ ತಾ||, ಕಲಬುರಗಿ ಜಿಲ್ಲೆ