Shree Charanteshwara Samsthana Hirematha Bangaraga

Shree Charanteshwara Samsthana Hirematha Bangaraga Claimed

ಶ್ರೀ ಚರಂತೇಶ್ವರ ಸಂಸ್ಥಾನ ಹಿರೇಮಠ ಬಂಗರಗಾ

Average Reviews

Description

ಶ್ರೀ ಚರಂತೇಶ್ವರ ಸಂಸ್ಥಾನ ಹಿರೇಮಠ – ಬಂಗರಗಾ

ಕರ್ತೃ – ಶ್ರೀ ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕು ಕೇಂದ್ರದಿಂದ 14 ಕಿ.ಮೀ. ದೂರದಲ್ಲಿರುವಬಂಗರಗಾ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಚರಂತೇಶ್ವರ ಸಂಸ್ಥಾನಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾ ಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದ ಕರ್ತೃ ಗುರುಗಳು ಶ್ರೀ ಷ.ಬ್ರ. ಕರಿಬಸವೇಶ್ವರಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃ ಗುರುಗಳ ನಂತರದಲ್ಲಿ ಶ್ರೀಮಠದ ಪಟ್ಟಕ್ಕೆ ಬಂದವರು ಹಿಂದಿನ ಶ್ರೀಗಳಾದಶ್ರೀ ಷ.ಬ್ರ. ಚರಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಚರಂತೇಶ್ವರಮಹಾಸ್ವಾಮಿಗಳು ಅನುಷ್ಠಾನ ಪ್ರಿಯರೂ, ಶಿವಪೂಜಾ ನಿಷ್ಠರೂ ಆಗಿದ್ದರು. ತಮ್ಮ ಧಾರ್ಮಿಕಆಚರಣೆಗಳ ಮೂಲಕ ಶಿವಾಚಾರ್ಯ ತತ್ತ್ವ ಉಪದೇಶಗಳ ಮೂಲಕ ಜನರಲ್ಲಿ ಧಾರ್ಮಿಕಅರಿವನ್ನು ಮೂಡಿಸಿದರು. ಶ್ರೀಗಳ ಕಾಲದಲ್ಲಿ ಶ್ರೀಮಠದಲ್ಲಿ ಶಿವಾನುಭವ, ಶಿವಧೀಕ್ಷೆಕಾರ್ಯಕ್ರಮಗಳು ನಡೆಯತೊಡಗಿ ಧಾರ್ಮಿಕ ಚಟುವಟಿಕೆಗಳು ಚುರುಕುಗೊಂಡವು.ಗುರುಗಳ ಧಾರ್ಮಿಕ ಕ್ರಿಯೆಯಿಂದ ಗ್ರಾಮವು ಸಂಸ್ಕಾರವನ್ನು ಪಡೆಯಿತು. ಇಂತಹಮಹಿಮಾನ್ವಿತ ಶ್ರೀಗಳು 1979ರಲ್ಲಿ ಲಿಂಗೈಕ್ಯರಾಗಿದ್ದು ಶ್ರೀಮಠವು ಅವರ ಹೆಸರಿನಿಂದಲೇಗುರುತಿಸಲ್ಪಡುತ್ತಿದೆ.ಶ್ರೀ ಚರಂತೇಶ್ವರ ಶಿವಾಚಾರ್ಯರ ಐಕ್ಯಾ ನಂತರ ಶ್ರೀಮಠವು ಮೂರು ದಶಕಗಳಕಾಲ ಖಾಲಿ ಉಳಿದಿದ್ದು ಆ ಸಮಯದಲ್ಲಿ ಗ್ರಾಮಸ್ಥರೇ ಶ್ರೀ ಮಠದ ಧಾರ್ಮಿಕಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಶ್ರೀಮಂತ ಪರಂಪರೆಯ ಮಠವುಖಾಲಿ ಉಳಿಯುವುದು ಬೇಡವೆಂದು ಗ್ರಾಮದ ಭಕ್ತರು ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಕ್ಕೆ ತಂದರು.2011ರ ಮೇ 23ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿದ ಶ್ರೀ ಷ.ಬ್ರ. ಗುರುಲಿಂಗಶಿವಾಚಾರ್ಯ ಸ್ವಾಮಿಗಳು ಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಸಂಸ್ಕøತ, ವೇದ, ಜ್ಯೋತಿಷ್ಯ ಹಾಗೂ ಆಧ್ಯಾತ್ಮಶಿಕ್ಷಣವನ್ನು ಅಭ್ಯಸಿಸಿರುವ ಶ್ರೀಗಳು ತಮ್ಮ ಉಪದೇಶಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
06-08-1981
Place :
ನಿರಗೋಡಿ, ಆಳಂದ ತಾ||
Pattadikara :
23-05-2011
Photo :

Programs

ಭಾದ್ರಪದ ಮಾಸ ಉತ್ತರಿ ಮಳೆ 2ನೇ ಚರಣಕ್ಕೆ
ಶ್ರೀ ಷ.ಬ್ರ. ಚರಂತೇಶ್ವರ ಶಿವಾಚಾರ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ
ಶಿವರಾತ್ರಿಗೆ ಸಾಮೂಹಿಕ ಲಿಂಗ ಪೂಜೆ

Photos

Full Address Kannada

ಶ್ರೀ ಚರಂತೇಶ್ವರ ಸಂಸ್ಥಾನ ಹಿರೇಮಠ
ಬಂಗರಗಾ - 585 314 ಆಳಂದ
ತಾ||, ಕಲಬುರಗಿ ಜಿಲ್ಲೆ

Map

Near by Places

ಕ್ರಾಸ್ 3 ಕಿ.ಮೀ.
ಆಳಂದ 14 ಕಿ.ಮೀ.
ಕಲಬುರಗಿ 65 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!