Shree Shantalingeshwara Hirematha – Hirejevargi

Shree Shantalingeshwara Hirematha – Hirejevargi Claimed

ಶ್ರೀ ಶಾಂತಲಿಂಗೇಶ್ವರ ಹಿರೇಮಠ - ಹಿರೇಜೇವರ್ಗಿ

Average Reviews

Description

ಶ್ರೀ ಶಾಂತಲಿಂಗೇಶ್ವರ ಹಿರೇಮಠ – ಹಿರೇಜೇವರ್ಗಿ

ಕರ್ತೃ – ಪೂಜ್ಯ ಶ್ರೀ ಶಾಂತಲಿಂಗೇಶ್ವರ ಶಿವಯೋಗಿಗಳು

ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ.ದೂರದಲ್ಲಿರುವ ಹಿರೇಜೇವರ್ಗಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಶಾಂತಲಿಂಗೇಶ್ವರಹಿರೇಮಠವು ಶ್ರೀಮದ್ ಶ್ರೀಶೈಲ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಸುಮಾರು ಕ್ರಿ.ಶ. 1126ರಲ್ಲಿ ಸ್ಥಾಪಿತಗೊಂಡಿತೆಂದುಹೇಳಲಾಗುವ ಶ್ರೀ ಶಾಂತಲಿಂಗೇಶ್ವರ ಹಿರೇಮಠದ ಕರ್ತೃಗುರುಗಳು ಪೂಜ್ಯ ಶ್ರೀಶಾಂತಲಿಂಗೇಶ್ವರ ಶಿವಯೋಗಿಗಳು.ಕರ್ತೃಗುರುಗಳು ಪವಾಡ ಪುರುಷರೂ, ಆಧ್ಯಾತ್ಮ ಸಿದ್ಧಿ ಪುರುಷರೂ ಆಗಿದ್ದುಇವರ ಅನುಷ್ಠಾನ, ಭಕ್ತಿಗೆ ಮೆಚ್ಚಿದ ಭಾಗ್ಯವಂತಿ ದೇವಿಯು ಶ್ರೀಮಠದಲ್ಲಿ ನೆಲೆಗೊಂಡುಹರಸಿದಳೆಂಬ ಜಾನಪದ ಕಥೆಯು ಕೇಳಿಬರುತ್ತಿದೆ. ಕರ್ತೃಗುರುಗಳ ನಂತರ ಸುಮಾರು 13ಜನ ಶ್ರೀಗಳು ಶ್ರೀಮಠದ ಅಧಿಕಾರಕ್ಕೆ ಬಂದಿದ್ದು ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಕರ್ತೃಗುರುಗಳಾದಿ ಎಲ್ಲಾ ಗುರುಗಳ ಮೂಲ ಕೂಡ ಮಹಾರಾಷ್ಟ್ರ ರಾಜ್ಯ ಸೊಲ್ಲಾಪುರ ಜಿಲ್ಲೆಅಕ್ಕಲಕೋಟೆ ತಾಲ್ಲೂಕಿನ ದುದನಿ ಗ್ರಾಮವಾಗಿರುವುದು ವಿಶೇಷ.ಶ್ರೀಮಠದ ಪರಂಪರೆಯಲ್ಲಿ ಈಗ್ಗೆ ನಾಲ್ಕು ತಲೆಮಾರುಗಳ ಹಿಂದೆ ಶ್ರೀ ಷ.ಬ್ರ.ಫಕೀರೇಶ್ವರ ಶಿವಾಚಾರ್ಯರು, ನಂತರ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರು ಹಾಗೂನಂತರದಲ್ಲಿ ಶ್ರೀ ಷ.ಬ್ರ. ಗುರುಶಾಂತಲಿಂಗ ಶಿವಾಚಾರ್ಯರು ಶ್ರೀಮಠದಲ್ಲಿ ಅಧಿಕಾರನಡೆಸಿದ್ದಾರೆ. ಇವರ ಕಾಲದಲ್ಲಿ ಶ್ರೀಮಠವು ಸರ್ವತೋಮುಖವಾಗಿ ಬೆಳವಣಿಗೆ ಹೊಂದಿದ್ದುಶ್ರೀಮಠದ ಕೀರ್ತಿಯು ಸುತ್ತಮುತ್ತಲಿನ ಪ್ರದೇಶಗಳಿಗೆ ಹಬ್ಬಿದೆ. ಹಿಂದಿನ ಶ್ರೀಗಳಾದಶ್ರೀ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು 2002ರ ಜೂನ್ 01ರಲ್ಲಿಲಿಂಗೈಕ್ಯರಾಗಿದ್ದು ಆ ದಿನವೇ ಈಗಿನ ಶ್ರೀಗಳು ಮಠಕ್ಕೆ ಆಗಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಶಾಂತಲಿಂಗ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳು 2015ರ ಜನವರಿ 01ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹವನ್ನು ಪಡೆದುಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. 2002ರಲ್ಲೇ ಶ್ರೀಮಠಕ್ಕೆಆಗಮಿಸಿದ್ದ ಶ್ರೀಗಳು ಒಂದು ದಶಕದ ಕಾಲ ಶ್ರೀಮಠದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಶ್ರೀಮಠಕ್ಕೆ ನೂತನ ಕಟ್ಟಡವನ್ನು ನಿರ್ಮಿಸಿದ್ದು ಸದಾ ಭಕ್ತರ ಶ್ರೇಯೋಭಿವೃದ್ಧಿಗೆಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಶಾಂತಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
12-9-1987
Place :
ದುದನಿ, ಅಕ್ಕಲ ಕೋಟೆ ತಾ||, ಮಹಾರಾಷ್ಟ್ರ
Pattadikara :
01-01-2015
Photo :

Programs

ಪ್ರತಿ ಅಮಾವಾಸ್ಯೆಗೆ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಯುಗಾದಿಯಿಂದ ಶುದ್ಧ ಹುಣ್ಣಿಮೆ ತ್ರಯೋದಶಿಯವರೆಗೆ ಶ್ರೀ ಮಠದ ಶ್ರೀ ಶಾಂತಲಿಂಗೇಶ್ವರ ಜಾತ್ರೆ ಮೇ / ಜೂನ್ನಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ರೇಣುಕಾಚಾರ್ಯ ಭಾಗ್ಯವಂತಿ ದೇವಿ ಜಾತ್ರೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿ ನಿಲಯ ಡಾ. ಬಾಬುರಾಜೇಂದ್ರ ಪ್ರಸಾದ್ ವಸತಿ ನಿಲಯ

Photos

Full Address Kannada

ಶ್ರೀ ಶಾಂತಲಿಂಗೇಶ್ವರ ಹಿರೇಮಠ
ಹಿರೇಜೇವರ್ಗಿ - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಚೌಡಪುರ 16 ಕಿ.ಮೀ.
ಅಫಜಲಪುರ 8 ಕಿ.ಮೀ.
ಕಲಬುರಗಿ 45 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!