Shree Mahanteshwara Matha & Chinmayagiri Chowdapura

Shree Mahanteshwara Matha & Chinmayagiri Chowdapura Claimed

ಶ್ರೀ ಮಹಾಂತೇಶ್ವರ ಮಠ - ಚಿನ್ಮಯಗಿರಿ ಚೌಡಾಪುರ

Average Reviews

Description

ಶ್ರೀ ಮಹಾಂತೇಶ್ವರ ಮಠ – ಚಿನ್ಮಯಗಿರಿ ಚೌಡಾಪುರ

ಕರ್ತೃ ಪೂಜ್ಯ ಶ್ರೀ ಜಡೆ ಮಹಾಂತೇಶ್ವರ ಶಿವಯೋಗಿಗಳು

ಸುಮಾರು 800 ವರ್ಷಗಳ ಹಿಂದೆ ಸಂಚಾರದಲ್ಲಿ ಈ ಭಾಗಕ್ಕೆ ಬಂದ ಪೂಜ್ಯ ಶ್ರೀಜಡೆ ಮಹಾಂತೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಮಹಾಂತೇಶ್ವರ ಮಠವುಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಕರ್ತೃ ಗುರುಗಳು ಆಧ್ಯಾತ್ಮ ಜೀವಿಗಳಾಗಿದ್ದು ತಮ್ಮ ಅನುಷ್ಟಾನಗಳಿಂದಪ್ರಸಿದ್ದಿಗೊಂಡಿದ್ದರು. ಅಪಾರ ಸಂಖ್ಯೆಯ ಭಕ್ತ ಬಳಗವನ್ನು ಸಂಪಾದಿಸಿದ್ದ ಶ್ರೀಗಳು ಬಂದಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.ಕರ್ತೃ ಗುರುಗಳ ನಂತರದ ಪರಂಪರೆಯಲ್ಲಿ ಈವರೆಗೂ 20 ಜನ ಶ್ರೀಗಳುಪಟ್ಟಾಧಿಕಾರ ಸ್ವೀಕರಿಸಿ ಮಠವನ್ನು ಮುನ್ನಡೆಸಿದ್ದು ಅಭಿವೃದ್ದಿಗೊಳಿಸಿದ್ದಾರೆ. ಶ್ರೀಮಠದಆವರಣದಲ್ಲಿ 19 ಗದ್ದುಗೆಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಕೆಲವು ಗದ್ದುಗೆಗಳುಶಿಥಿಲಾವಸ್ಥೆಯಲ್ಲಿವೆ. ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಶಿವರುದ್ರಶಿವಾಚಾರ್ಯ ಮಹಾಸ್ವಾಮಿಗಳು ಕೇವಲ 10 ವರ್ಷಗಳ ಕಾಲ ಶ್ರೀಮಠದಪೀಠಾಧಿಪತಿಗಳಾಗಿ ಅಗಾಧವಾದುದನ್ನು ಸಾಧಿಸಿ 1966ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳುಹಿಂದಿನ ಶ್ರೀಗಳ ಐಕ್ಯಾ ನಂತರ 1966ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಗಳು ಅಧಿಕಾರಕ್ಕೆ ಬಂದ ನಂತರಶ್ರೀಮಠದ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳುವಿಸ್ತಾರಗೊಂಡಿದ್ದು ಶ್ರೀಮಠದ ಪ್ರಸಿದ್ದಿಯನ್ನು ದ್ವಿಗುಣಗೊಳಿಸಿದೆ.ಶ್ರೀಮಠದ ಆವರಣದಲ್ಲಿರುವ ಗದ್ದುಗೆಗಳಿಗೆ ನಿತ್ಯಪೂಜೆ, ಅಮವಾಸ್ಯೆಗೆ ಸಂಗೀತಶಿವಾನುಭವ, ಕಾರ್ತೀಕ ಮಾಸದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವವು ಅದ್ದೂರಿಯಾಗಿಜರುಗುತ್ತದೆ. ಈ ಸಂದರ್ಭದಲ್ಲಿ ಧರ್ಮಸಭೆಯನ್ನು ಏರ್ಪಡಿಸಿ ನಾಡಿನ ವಿವಿಧ,ವಿದ್ವಾಂಸರು, ಮಠಾಧೀಶರನ್ನು ಕರೆಸಿ ಉಪನ್ಯಾಸವನ್ನು ಏರ್ಪಡಿಸಲಾಗುತ್ತಿದೆ. ಪ್ರಸ್ತುತಶ್ರೀಗಳು ಅಧಿಕಾರಕ್ಕೆ ಬಂದ ಮೇಲೆ “ಶ್ರೀ ಮಹಾಂತಜ್ಯೋತಿ ವಿದ್ಯಾಪೀಠ”ವನ್ನು ಪ್ರಾರಂಭಿಸಿಪದವಿ ಕಾಲೇಜು, ಸಂಸ್ಕøತ – ವೇದ ಪಾಠಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಜಾತ್ರಾಸಮಯದಲ್ಲಿ ಅರ್ಹ ಸಂಗೀತ ಪ್ರತಿಭೆಗಳಿಗೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.

ವಿಶೇಷತೆ

ಕರ್ತೃ ಗುರುಗಳ ಗದ್ದುಗೆಗೆ ಭವ್ಯವಾದ

ಕಲ್ಲಿನ ಕಟ್ಟಡ ನಿರ್ಮಾಣ

Swamiji

Swamiji Name :
ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1943
Place :
ಜಿಡಗಾ, ಆಳಂದ ತಾ||
Pattadikara :
1966
Photo :

Programs

ಪ್ರತಿ ಅಮವಾಸ್ಯೆಗೆ ಸಂಸ್ಕøತ ಶಿವಾನುಭವ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,
ಅಮವಾಸ್ಯೆಗೆ ಲಿಂ|| ಶ್ರೀ ಷ.ಬ್ರ. ಶಿವರುದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ.
ಹೊಸ್ತಿಲ ಹುಣ್ಣಿಮೆಗೆ ಜಡೆಯ ಅಭಿಷೇಕ, ಮರುದಿನ ಲಿಂಗದೀಕ್ಷೆ, ಅಯ್ಯಚಾರ
ಶ್ರೀಮಠದ ರಥೋತ್ಸವ, ಧರ್ಮಸಭೆ, ಮಾರನೆ ದಿನ ಸಂಗೀತ ಕಾರ್ಯಕ್ರಮಗಳು.
ಭಾರತ ಹುಣ್ಣಿಮೆಗೆ ಶ್ರೀ ರಂಭಾಪುರಿ ಸನ್ನಿಧಿಯವರ ಅನುಗ್ರಹ ಆಶೀರ್ವಾದದಿಂದ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜ್
ವಿದ್ಯಾರ್ಥಿ ನಿಲಯ ಸಂಸ್ಕøತ ವೇದ ಪಾಠಶಾಲೆ

Photos

Full Address Kannada

ಶ್ರೀ ಮಹಾಂತೇಶ್ವರ ಮಠ
ಚಿನ್ಮಯಗಿರಿ ಚೌಡಾಪುರ, ಚಿಣಮಗೇರಾ ಪೋ. - 585 265
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಚೌಡಪುರ 2 ಕಿ.ಮೀ.
ಅಫಜಲಪುರ 22 ಕಿ.ಮೀ.
ಕಲಬುರಗಿ 33 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!