Shree Channamalleshwara Matha Badadalu

Shree Channamalleshwara Matha Badadalu Claimed

ಶ್ರೀ ಚನ್ನಮಲ್ಲೇಶ್ವರ ಮಠ ಬಡದಾಳು

Average Reviews

Description

ಶ್ರೀ ಚನ್ನಮಲ್ಲೇಶ್ವರ ಮಠ ಬಡದಾಳು

ಕರ್ತೃ – ಪರಮ ಪೂಜ್ಯ ಶ್ರೀ ಚನ್ನಮಲ್ಲೇಶ್ವರ ಶಿವಯೋಗಿಗಳು

ಅಫಜಲಪುರ ತಾಲ್ಲೂಕು ಕೇಂದ್ರದಿಂದ 14 ಕಿ.ಮೀ. ದೂರದಲ್ಲಿರುವ ಬಡದಾಳುಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಚನ್ನಮಲ್ಲೇಶ್ವರ ಮಠವು ಪ್ರಾಚೀನಪರಂಪರೆಯನ್ನು ಹೊಂದಿದ್ದು ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಚನ್ನಮಲ್ಲೇಶ್ವರಶಿವಯೋಗಿಗಳನ್ನು ಹೆಸರಿಸಲಾಗಿದೆ. ಪ್ರಾಚೀನ ಕಾಲದಲ್ಲಿಯೇ ಅಸ್ತಿತ್ತ್ವದಲ್ಲಿತ್ತೆಂದುಹೇಳಲಾಗುವ ಶ್ರೀಮಠದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದ ಆವರಣದಲ್ಲಿ 8ಗದ್ದುಗೆಗಳು ಹಾಗೂ ಆಳಂದ ತಾ|| ವಳಸಂಗಿಯಲ್ಲಿ ಒಂದು ಗದ್ದುಗೆಯನ್ನುಗುರುತಿಸಲಾಗಿದ್ದು ಇನ್ನುಳಿದ ಪರಂಪರೆ ಗುರುಗಳ ಗದ್ದುಗೆಗಳು ಎಲ್ಲಿ ಸ್ಥಾಪಿತಗೊಂಡಿವೆಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಬರುವುದಿಲ್ಲ.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಮಲ್ಲೇಶ್ವರ ಶಿವಾಚಾರ್ಯಸ್ವಾಮಿಗಳು ಆಧ್ಯಾತ್ಮ ಪುರುಷರಾಗಿ, ಯಾವುದೇ ಲೌಕಿಕ ವಿಚಾರಗಳ ಕಡೆ ಗಮನಕೊಡದೆಧರ್ಮಪ್ರಚಾರಕ್ಕಾಗಿ ಪ್ರವಾಸ ಮಾಡಿದರು. ತಮ್ಮ ಆಚರಣೆಗಳ ಮೂಲಕ ಹಾಗೂಸಾಧನೆಯ ಮೂಲಕ ಸಿದ್ದಿಯನ್ನು ಪಡೆದಿದ್ದ ಶ್ರೀಗಳು 1984ರ ಡಿಸಂಬರ್ ಹದಿನೇಳರಲ್ಲಿಲಿಂಗೈಕ್ಯರಾದರು. ಇವರ ತರುವಾಯ ಊರಿನ ಜನ ಈಗಿನ ಶ್ರೀಗಳನ್ನು ನೇಮಕ ಮಾಡಿಪಟ್ಟಾಧಿಕಾರ ಮಾಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು1985ರ ಡಿಸಂಬರ್ 20ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದು ಶ್ರೀ ಮಠವನ್ನುಅಭಿವೃದ್ದಿ ಪಥದತ್ತ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಹೊನ್ನಾಳ್ಳಿಯ ಶ್ರೀ ಹಿರೇಕಲ್ಮಠದಲ್ಲಿಸಂಸ್ಕøತ, ವೇದ, ಉಪನಿಷತ್ತುಗಳನ್ನು ಆಳವಾಗಿ ಅಭ್ಯಸಿಸಿದವರಾಗಿದ್ದು ತಮ್ಮ ಅಪಾರಪಾಂಡಿತ್ಯದಿಂದ ಭಕ್ತರನ್ನು ಸಂಪಾದಿಸಿಕೊಂಡಿದ್ದಾರೆ.ಶ್ರೀಗಳು ಶ್ರೀಮಠಕ್ಕೆ ಬಂದಂದಿನಿಂದ ಶ್ರೀಮಠವನ್ನು ಸರ್ವತೋಮುಖರೀತಿಯಲ್ಲಿ ಬೆಳೆಸುತ್ತಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕ ಹಾಗೂಶೈಕ ್ಷಣಿಕವಾಗಿ ಕಾರ್ಯಕ ್ರಮಗಳನ್ನು ಹಮ್ಮಿಕೊಂಡು ¨s Àಕ ್ತರನ್ನು ಸನ್ಮಾರ್ಗದಲ್ಲಿಮುನ್ನಡೆಸುತ್ತಿದ್ದಾರೆ. ಪ್ರತಿ ವರ್ಷ ಅರ್ಹ ಸಾಧಕರನ್ನು ಗುರುತಿಸಿ “ಸದ್ಗುರು ಕಾರುಣ್ಯಪ್ರಶಸ್ತಿ”ಯನ್ನು ಪ್ರದಾನ ಮಾಡುತ್ತಿರುವ ಶ್ರೀಗಳು ಸಮಾಜದ ಅಭಿವೃದ್ದಿಗೆ ಪೂರಕವಾಗಿದುಡಿಯುವ ಶಾಲಾ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
09-03-1962
Place :
ಬಸವಪಟ್ಟಣ, ಕಲಬುರಗಿ ತಾ||
Pattadikara :
20-12-1985
Photo :

Programs

ಪ್ರತಿ ಅಮವಾಸ, ಹುಣ್ಣಿಮೆ ಹಾಗೂ ಭಾನುವಾರ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಭಜನೆ ಮತ್ತು ಪಲ್ಲಕ್ಕಿ ಉತ್ಸವದೊಂದಿಗೆ ಮುಕ್ತಾಯ
ಮಾರ್ಗಶಿರ ಮಾಸದಲ್ಲಿ ಒಂದು ತಿಂಗಳು ಕಾಲ ಧಾರ್ಮಿಕ ಕಾರ್ಯಕ್ರಮಗಳು, ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಹಗ್ಗಿ ಹಾಯುವ ಕಾರ್ಯಕ್ರಮ (ಪುರಾಣ ಪ್ರವಚನ ಹಾಗೂ ಶ್ರೀಮಠದ ರಥೋತ್ಸವ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳು)

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ವಿದ್ಯಾರ್ಥಿ ನಿಲಯ ಗೋಶಾಲೆ

Photos

Full Address Kannada

ಶ್ರೀ ಚನ್ನಮಲ್ಲೇಶ್ವರ ಮಠ
ಬಡದಾಳು - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ರೇವೂರು ಕ್ರಾಸ್ 3 ಕಿ.ಮೀ.
ರೈಲ್ವೆಸ್ಟೇಷನ್ 12 ಕಿ.ಮೀ.
ಅಫಜಲಪುರ 14 ಕಿ.ಮೀ.
ಕಲಬುರಗಿ 65 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!