Shree Hirematha – Alagi(B)

Shree Hirematha – Alagi(B) Claimed

ಶ್ರೀ ಹಿರೇಮಠ - ಅಳಗಿ(ಬಿ)

Average Reviews

Description

ಶ್ರೀ ಹಿರೇಮಠ – ಅಳಗಿ(ಬಿ)

ಕರ್ತೃ – ಪೂಜ್ಯ ಶ್ರೀ ಶಾಂತಲಿಂಗೇಶ್ವ ಮಹಾಸ್ವಾಮಿಗಳು

ಅಫಜಲಪುರ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಅಳಗಿ(ಬಿ)ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಹಿರೇಮಠವು ತನ್ನ ಧಾರ್ಮಿಕಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀ ಹಿರೇಮಠವು ಪುರಾತನ ಮಠವೆಂದು ಹೇಳಲಾಗುತ್ತದಾದರೂಇತಿಹಾಸದ ಬಗ್ಗೆ ದಾಖಲೆಗಳಿಲ್ಲ.ಪೂಜ್ಯ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡು ಅಸ್ತಿತ್ತ್ವಕ್ಕೆಬಂದಿರುವ ಶ್ರೀಮಠದ ಗುರುಪರಂಪರೆ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದ ಪರಂಪರೆಯಲ್ಲಿಅನೇಕ ಗುರುಗಳು ಅಧಿಕಾರ ನಡೆಸಿರುವರಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ಪ್ರಸ್ತುತಅಧಿಕಾರದಲ್ಲಿರುವ ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀಮಠವುಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ.ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಇದೇ ಗ್ರಾಮದವರಾಗಿದ್ದುಪುತ್ರವರ್ಗದ ಪರಂಪರೆಯ ಮಠದ ಅಧಿಕಾರವನ್ನು 1992ರಲ್ಲಿ ವಹಿಸಿಕೊಂಡು ನಂತರವಿದ್ಯಾಭ್ಯಾಸವನ್ನು ಮುಂದುವರೆಸಿದರು. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿಪ್ರೌಢಶಿಕ್ಷಣ, ಹಾವೇರಿಯಲ್ಲಿ ವೈದಿಕ ಶಿಕ್ಷಣ ಹಾಗೂ ಶಿವಯೋಗ ಮಂದಿರ,ಬಾಳೆಹೊನ್ನೂರು ಮತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಗಳಲ್ಲಿ ಆಧ್ಯಾತ್ಮ ಶಿಕ್ಷಣದಆಳವಾದ ಅರಿವನ್ನು ಹೊಂದಿ ತಮ್ಮ ಅನುಭವದ ಮೂಲಕ ಭಕ್ತರನ್ನು ಸನ್ಮಾರ್ಗದತ್ತಕೊಂಡೊಯ್ಯುತ್ತಿದ್ದಾರೆ.ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಭಕ್ತರನ್ನುಸಂಪಾದಿಸಿಕೊಂಡು ಆ ಮೂಲಕ ಮಠವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀ ಮಠದಲ್ಲಿ ಪ್ರತಿನಿತ್ಯ ಕರ್ತೃ ಗದ್ದುಗೆಗೆ ಅಭಿಷೇಕ ಹಾಗೂ ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆಮತ್ತು ಮಹಾಪ್ರಸಾದವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಾಗೆಯೇ ಪ್ರತಿ ವರ್ಷ ಶ್ರಾವಣಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳನ್ನು ನಡೆಸಲಾಗುತ್ತಿದ್ದು ಆ ಸಮಯದಲ್ಲಿ ವಿವಿಧಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1976
Place :
ಅಳಗಿ (ಬಿ), ಅಫಜಲಪುರ ತಾ||
Pattadikara :
1992
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಹಾಗೂ ಮಹಾಪ್ರಸಾದ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಹಿರೇಮಠ
ಅಳಗಿ (ಬಿ) - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಶಿರವಾಳ 6 ಕಿ.ಮೀ.
ಸೊನ್ನಕ್ರಾಸ್ 10 ಕಿ.ಮೀ.
ಅಫಜಲಪುರ 15 ಕಿ.ಮೀ.
ಕಲಬುರಗಿ 70 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!