Shree Jadeswamigalavara Hirematha, Telagi

Shree Jadeswamigalavara Hirematha, Telagi Claimed

ಶ್ರೀ ಜಡೆಸ್ವಾಮಿಗಳವರ ಹಿರೇಮಠ, ತೆಲಗಿ

Average Reviews

Description

ಶ್ರೀ ಜಡೆಸ್ವಾಮಿಗಳವರ ಹಿರೇಮಠ, ತೆಲಗಿ

ಕರ್ತ ಪೂಜ್ಯ ಶ್ರೀ ಬೆಳವಿನಾಳ ಹಿರೇಮಠದ ಜಡೆಸ್ವಾಮಿಗಳು

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದಿಂದ 1 ಕಿ.ಮೀ.ಅಂತರದಲ್ಲಿ ಶ್ರೀ ಬೆಳವಿನಾಳ ಹಿರೇಮಠದ ಜಡೆಸ್ವಾಮಿಗಳಿಂದ ಸುಮಾರು 44 ವರ್ಷಗಳಹಿಂದೆ ಪ್ರಾರಂಭಗೊಂಡಿರುವ ಶ್ರೀ ಜಡೆಸ್ವಾಮಿಗಳವರ ಹಿರೇಮಠವು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ.ಶ್ರೀಮಠವು ಉಜ್ಜಯಿನಿ ಶಾಖಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬರುತ್ತಿದೆ.ಕರ್ತೃಗುರುಗಳಾದ ಶ್ರೀ ಜಡೆಸ್ವಾಮಿಗಳು ಬಾಲಯೋಗಿಗಳಾಗಿದ್ದು ತಮ್ಮಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಆಚರಣೆಗಳಿಂದಾಗಿ ಯೌವನಾವಸ್ಥೆಯಲ್ಲಿಯೇ ಹಿಂದಿನಉಜ್ಜಯಿನಿ ಜಗದ್ಗುರುಗಳಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಕೃಪಾದೃಷ್ಠಿಗೆಬಿದ್ದವರು. ಶ್ರೀಗಳು ಪರಮಪೂಜಾನಿಷ್ಠರಾಗಿದ್ದು ಮಹಾಜಂಗಮರೆನಿಸಿಕೊಂಡವರು. ಆದರೆಜಗದ್ಗುರುಗಳ ಆಶಯದಂತೆ ವಿವಾಹವಾದ ಶ್ರೀಗಳು ನಂತರ ಕೆಲವರ್ಷಗಳಾದ ಮೇಲೆವೈರಾಗ್ಯ ತಾಳಿ ದೇಶ ಸಂಚಾರ ಹೊರಟು ಕೊನೆಯಲ್ಲಿ ತೆಲಗಿ ಗ್ರಾಮಕ್ಕೆ ಬಂದು ನೆಲೆಸಿದರು.ಶ್ರೀ ಜಡೆಸ್ವಾಮಿಗಳವರು ತೆಲಗಿ ಗ್ರಾಮಕ್ಕೆ ಬಂದು ಒಂದು ಗುಡಿಸಲನ್ನು ಹಾಕಿಕೊಂಡು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದರು. ಶ್ರೀಗಳ ಶಿವಪೂಜಾನಿಷ್ಠೆಗೆ, ಅವರ ಧಾರ್ಮಿಕತೆಗೆ ಮಾರುಹೋದ ಭಕ್ತರು ಅವರ ಧಾರ್ಮಿಕ ಆಚರಣೆಗಳಲ್ಲಿಪಾಲ್ಗೊಂಡು ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದರು. ಶ್ರೀಗಳು ಸ್ಪಲ್ಪಕಾಲದಲ್ಲೇ ಪ್ರಸಿದ್ಧಿಗೆಬಂದಿದ್ದು ಭಕ್ತರಿಗೆ ಸನ್ಮಾರ್ಗ ತೋರಿ ಲಿಂಗೈಕ್ಯರಾದರು. ನಂತರ ಭಕ್ತರೇ ಇವರ ಗದ್ದುಗೆನಿರ್ಮಿಸಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಕಿಡಿಗಣ್ಣಯ್ಯ ಸ್ವಾಮಿಗಳು ಶ್ರೀಮಠದ ಅಧಿಕಾರವನ್ನುವಹಿಸಿಕೊಂಡು ಕರ್ತೃಗುರುಗಳ ಗದ್ದುಗೆಗೆ ದಿನನಿತ್ಯ ಪೂಜಾಕಾರ್ಯಗಳನ್ನು ನಡೆಸಿಕೊಂಡುಮಠವನ್ನು ಸದೃಢವಾಗಿ ಕಟ್ಟಿದ್ದಾರೆ. ಹಾಗೆಯೇ ನಾಡಿನ ನಾನಾ ಭಾಗಗಳಲ್ಲಿ ಶಿಷ್ಯವೃಂದವನ್ನು ಹೊಂದಿ ಪ್ರವಚನ ಮಾಡುತ್ತಾ ಶ್ರೀಮಠವನ್ನು ಹೆಚ್ಚು ಪ್ರಚಲಿತಕ್ಕೆ ತಂದಿದ್ದಾರೆ.ಶ್ರೀಗಳು ಹೊಸಪೇಟೆಯಲ್ಲೂ ಶಾಖಾಮಠವನ್ನು ಸ್ಥಾಪಿಸಿ ಭಕ್ತರಿಗೆ ವಸತಿ ಮತ್ತು ಪ್ರಸಾದವ್ಯವಸ್ಥೆ ಜೊತೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಕಿಡಿಗಣ್ಣಯ್ಯ ಸ್ವಾಮಿಗಳು
Date of Birth :
5-6-1968
Place :
ಉಜ್ಜಯಿನಿ, ಕೂಡ್ಲಿಗಿ ತಾ||

Programs

ಪ್ರತಿ ಅಮವಾಸ್ಯೆಗೆ ಪುರಾಣ ಪ್ರವಚನ ದಸರಾದಲ್ಲಿ 9 ದಿನಗಳ ಕಾಲ ಶ್ರೀ ದೇವಿ ಪುರಾಣ ಮಾಘ ಮಾಸದಲ್ಲಿ ಹಿರಿಯ ಶ್ರೀಗಳ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರೆ.
ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಕಾರ್ತಿಕೋತ್ಸವ.

Full Address Kannada

ಶ್ರೀ ಜಡೆಸ್ವಾಮಿಗಳ ಹಿರೇಮಠ
ತೆಲಗಿ - 583132
ಹರಪನಹಳ್ಳಿ ತಾ||, ದಾವಣಗೆರೆ ಜಿ||

Map

Near by Places

ಹರಿಹರ - 20 ಕಿ.ಮೀ.
ದಾವಣಗೆರೆ - 35 ಕಿ.ಮೀ.
ಹರಪನಹಳ್ಳಿ - 25 ಕಿ.ಮೀ.
ದುಗ್ಗಾವತಿ - 8 ಕಿ.ಮೀ.

Statistic

70 Views
0 Rating
0 Favorite
0 Share
error: Content is protected !!