Shree Uchchangidurga Kattimani Rajaguru Puravarga

Shree Uchchangidurga Kattimani Rajaguru Puravarga Claimed

ಶ್ರೀ ಉಚ್ಚಂಗಿದುರ್ಗ ಕಟ್ಟೀಮನಿ ರಾಜಗುರು ಪುರವರ್ಗ ಮಠ

Average Reviews

Description

ಕರ್ತೃ ರಾಜಗುರು ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀ ಉಚ್ಚಂಗಿದುರ್ಗ ಕಟ್ಟೀಮನಿ ರಾಜಗುರು ಪುರವರ್ಗ ಮಠ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ರಾಮಘಾಟ್ನಲ್ಲಿದ್ದ ಪಟ್ಟದ ಮಠದಗುರುಗಳಾದ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿಗಳು ಲೋಕಸಂಚಾರ ಮಾಡುತ್ತಾ ಈಗಿನರಾಮಘಟ್ಟ ಗ್ರಾಮ ಇರುವ ಸ್ಥಳಕ್ಕೆ ಆಗಮಿಸುತ್ತಾರೆ. ಆಗಿನ ಕಾಲದಲ್ಲಿ ಈ ಸ್ಥಳವು ನಿರ್ಜನಪ್ರದೇಶವಾಗಿದ್ದು, ಗುರುಗಳು ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತಾರೆ. ಒಂದು ಸಲ ಆಕಸ್ಮಿಕವಾಗಿರಾಜ ರಂಗಪ್ಪನಾಯಕನು ಉಚ್ಚಂಗಿದುರ್ಗದ ದೇವಿಯ ಸನ್ನಿಧಾನದಲ್ಲಿ ಗುರುಗಳನ್ನುಸಂಧಿಸುತ್ತಾನೆ. ಆಗ ಗುರುಗಳು ಅನುಷ್ಠಾನಕ್ಕೆ ಕುಳಿತ ವಿಷಯ ತಿಳಿದು ಇಂತಹ ಮಹಾತ್ಮರುನಮ್ಮ ರಾಜ್ಯದಲ್ಲಿಯೇ ಇರಲಿ ಎಂದು ಬಯಸಿ ಗುರುಗಳಿಗೆ ಮಠವನ್ನು ಕಟ್ಟಿಸಿಕೊಡುತ್ತಾರೆ.ಶ್ರೀ ಗುರು ರೇವಣಸಿದ್ಧೇಶ್ವರರ ಕರ್ತೃತ್ವ ಶಕ್ತಿಯಿಂದ ಬೆಳೆದ ಮಠ ಇಂದಿಗೂಜನರಲ್ಲಿ ಧರ್ಮ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲಿಂದ ಮಠದ ಪರಂಪರೆಯಬಗ್ಗೆ ನಿಖರವಾಗಿ ಮಾಹಿತಿಗಳು ದೊರೆತಿಲ್ಲವಾದರೂ ಇಲ್ಲಿಯ ತನಕ 12 ಗುರುಗಳು ಆಗಿಹೋಗಿ ಈಗಿನ ಶ್ರೀಗಳು 13ನೆಯವರೆಂದು ಹೇಳಲಾಗಿದೆ.ಈಗಿನ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು 1974ರ ಮೇ 1 ರಂದುಪಟ್ಟಕ್ಕೆ ಬಂದಿದ್ದಾರೆ. ಇದಕ್ಕೂ ಪೂರ್ವದಲ್ಲಿ ಸುಮಾರು 25 ವರ್ಷಗಳು ಮಠ ಖಾಲಿಉಳಿದಿದ್ದರಿಂದ ಕಟ್ಟಡವು ಜೀರ್ಣಾವಸ್ಥೆಯಲ್ಲಿತ್ತು. ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರಮಠವನ್ನು ಹಾಗೂ ಮಠದ ಜಮೀನನ್ನು ಅಭಿವೃದಿ್ಧಗೊಳಿಸಿ ಆದಾಯಮೂಲವನ್ನಾಗಿಸಿದ್ದಾರೆ.ಶ್ರೀಗಳು ಶ್ರೀಗುರು ರೇವಣಸಿದೇಶ್ವರ ಗೋಶಾಲೆಯನ್ನು ಕಟ್ಟಿಸಿ ನೂರಾರುಹಸುಗಳನ್ನು ಸಾಕಿದ್ದಾರೆ. ಈ ಗೋವುಗಳ ಸಗಣಿಯಿಂದ ಭಕ್ತರಿಗಾಗಿ ಪರಿಶುದ್ಧವಾದವಿಭೂತಿ ತಯಾರಿಕಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಜೊತೆಯಲ್ಲಿಯೇ ಗೋವುಗಳರಕ್ಷಣೆಗಾಗಿ ಯೋಜನೆಯೊಂದನ್ನು ತಯಾರಿಸಿದ್ದಾರೆ. ಗುರುಗಳು ಧಾರ್ಮಿಕತೆಯ ಜೊತೆಗೆಕಾಯಕ ಯೋಗಿಗಳಾಗಿ ಭಕ್ತರಿಗೆ ನಿರಂತರ ಅನ್ನ ದಾಸೋಹ ಮಾಡುತ್ತಾ ಮಠವನ್ನುಮುನ್ನೆಡೆಸಿದ್ದಾರೆ.

ವಿಶೇಷತೆ:

ಚರಕ ಆರ್ಯುವೇದ ಚಿಕಿತ್ಸಾಲಯ,ಗೋಶಾಲೆ, ವಿಭೂತಿ ತಯಾರಿಕಾ ಕೇಂದ್ರ.

Swamiji

Swamiji Name :
ಶ್ರೀ ಷ.ಬ್ರ. ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು
Date of Birth :
18-9-1952
Place :
ಸಂಕಲೀಪುರ, ಹರಿಹರ ತಾ||
Pattadikara :
1-5-1974
Photo :

Programs

ಬೆನಕ ಅಮವಾಸ್ಯೆ ನಂತರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಪ್ರತಿ ಅಮವಾಸ್ಯೆಗೆ ಶ್ರೀಗಳ ಅನುಷ್ಠಾನ.
ಶಿವರಾತ್ರಿ, ನವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ.

Photos

Full Address Kannada

ಶ್ರೀ ಉಚ್ಚಂಗಿದುರ್ಗ ಕಟ್ಟಿಮನಿ ರಾಜಗುರು ಪುರವರ್ಗ ಮಠ
ರಾಮಘಟ್ಟ - 583 125
ಹರಪನಹಳ್ಳಿ ತಾ., ದಾವಣಗೆರೆ ಜಿ.

Map

Near by Places

ಉಚ್ಚಂಗಿದುರ್ಗ - 7 ಕಿ.ಮೀ.
ಜಗಳೂರು - 25 ಕಿ.ಮೀ.
ದಾವಣಗೆರೆ - 28 ಕಿ.ಮೀ.

Statistic

37 Views
0 Rating
0 Favorite
0 Share
error: Content is protected !!