Shree harappanahalliSamsthana Jangama Peetha

Shree harappanahalliSamsthana Jangama Peetha Claimed

ಶ್ರೀ ಹರಪನಹಳ್ಳಿ ಗುಡ್ಡದ ಸಂಸ್ಥಾನ ಜಂಗಮ ಪೀಠ

Average Reviews

Description

ಶ್ರೀ ಹರಪನಹಳ್ಳಿ ಗುಡ್ಡದ ಸಂಸ್ಥಾನ ಜಂಗಮ ಪೀಠ

ಶ್ರೀ ಮ.ನಿ.ಪ್ರ ಚನ್ನಬಸವ ಶಿವಯೋಗಿಗಳು

ಲೋಕಸಂಚಾರಿ ಶ್ರೀ ಚನ್ನಬಸವ ಸ್ವಾಮಿಗಳು ಸುಮಾರು 18ನೇ ಶತಮಾನದಅಂತ್ಯಭಾಗದಲ್ಲಿ ನೀಲಗುಂದಕ್ಕೆ ಬಂದು ಗ್ರಾಮದ ಗುಡ್ಡದ ತಪ್ಪಲಿನ ಕೆರೆಯ ದಡದಲ್ಲಿಮಠವನ್ನು ಸ್ಥಾಪನೆ ಮಾಡಿದರು. ಶ್ರೀಗಳು ಇದಕ್ಕೂ ಮೊದಲು ಹರಪನಹಳ್ಳಿಯ ನೈರುತ್ಯಕ್ಕೆಇರುವ ಗುಡ್ಡದ ಕೆಳಭಾಗದಲ್ಲಿ ಮಠ ಸ್ಥಾಪಿಸಿದ್ದರಿಂದಾಗಿ ಶ್ರೀಮಠಕ್ಕೆ ಶ್ರೀ ಹರಪನಹಳ್ಳಿಗುಡ್ಡದ ಸಂಸ್ಥಾನ ಜಂಗಮಪೀಠವೆಂದು ಹೆಸರಾಯಿತು.ಇವರ ತರುವಾಯ ತಪೋನಿಷ್ಠರಾದ ಶ್ರೀ ಸಿದ್ಧರಾಮ ಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಜನಾನುರಾಗಿಯಾಗಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ್ದುಇವರ ಸಮಾಧಿ ಗದ್ದುಗೆಯು ಪೂಜನೀಯವಾಗಿದೆ. ಈ ರೀತಿ ಜಾಗೃತಗೊಂಡಿದ್ದ ಸ್ಥಳದಲ್ಲಿಗಡ್ಡದ ಅಜ್ಜ ಎಂದೇ ಹೆಸರಾಗಿದ್ದ ಶ್ರೀ ನೀಲಕಂಠ ಸ್ವಾಮಿಗಳು ಅನುಷ್ಠಾನಕ್ಕೆ ಕುಳಿತು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಮಠವನ್ನು ಪ್ರಚುರಗೊಳಿಸಿ ಲೋಕಸಂಚಾರಕ್ಕೆಹೊರಟು ನೀಲಗುಂದ ಶಾಖಾಮಠದ ಕಟ್ಟಿಗೆಹಳ್ಳಿ ಮಠದಲ್ಲಿ ಲಿಂಗೈಕ್ಯರಾಗುತ್ತಾರೆ.ಗಡ್ಡದ ಸ್ವಾಮಿಗಳ ನಂತರ ಅಧಿಕಾರಕ್ಕೆ ಬಂದ ಶ್ರೀಗಳಿಬ್ಬರೂ ಮಠವನ್ನುಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸಿದರೆಂದು ಹೇಳಲಾದರೂ ನಂತರದಲ್ಲಿ 15ವರ್ಷಗಳ ಕಾಲ ಮಠವು ಖಾಲಿ ಉಳಿದಿದ್ದರಿಂದ ಜೀರ್ಣಗೊಳ್ಳತೊಡಗಿತು. ಈಸಂದರ್ಭದಲ್ಲಿ ಗ್ರಾಮಸ್ಥರು ಮಠದ ಉತ್ತರಾಧಿಕಾರಿಯ ಆಯ್ಕೆಗೆ ಮುಂದಾಗಿ ಈಗಿನಶ್ರೀಚನ್ನಬಸವ ಶಿವಯೋಗಿಗಳನ್ನು 1986 ರ ಜೂನ್ 11 ರಂದು ಲಿಂಗನಾಯಕನಹಳ್ಳಿಯಮಠಾಧೀಶ್ವರರ ಸಮ್ಮುಖದಲ್ಲಿ ಪಟ್ಟಕ್ಕೆ ತಂದರು.ಶ್ರೀ ಚನ್ನಬಸವ ಶಿವಯೋಗಿಗಳು ಜೀರ್ಣಗೊಂಡಿದ್ದ ಮಠವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿ ವಾಸಿಸಲು ಯೋಗ್ಯವಾಗಿ ಮಾಡಿಕೊಂಡು ಧಾರ್ಮಿಕಕಾರ್ಯಗಳನ್ನು ಪ್ರಾರಂಭಿಸಿದರು. ಶ್ರೀಗಳು ಧಾರ್ಮಿಕತೆಯ ಜೊತೆಗೆ ಶೈಕ್ಷಣಿಕವಾಗಿ ಮಠದವತಿಯಿಂದ ಪ್ರಾಥಮಿಕ ಶಾಲೆ, ಉಚಿತ ವಿದ್ಯಾರ್ಥಿ ನಿಲಯ ಮುಂತಾದವುಗಳನ್ನುಪ್ರಾರಂಭಿಸಿದ್ದಾರೆ. ಜೊತೆಗೆ ಕೀರ್ತನೆ ಹಾಗೂ ಪ್ರವಚನಗಳನ್ನು ಪ್ರಾರಂಭಿಸಿ ಹೆಸರುಸಂಪಾದಿಸಿ ಜನರನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ ಚನ್ನಬಸವ ಶಿವಯೋಗಿಗಳು
Date of Birth :
17-10-1957
Place :
ಬೆಟ್ಟದೂರು ಕುಂದಗೂಳತಾ||
Pattadikara :
11-6-1986
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ವಿದ್ಯಾರ್ಥಿ ನಿಲಯ /
ಸಾರ್ವಜನಿಕ ಗ್ರಂಥಾಲಯ

Photos

Full Address Kannada

ಶ್ರೀ ಹರಪನಹಳ್ಳಿ ಗುಡ್ಡದ ಸಂಸ್ಧಾನ ಜಂಗಮ ಪೀಠ
ನೀಲಗುಂದ - 583 213
ಹರಪನಹಳ್ಳಿ ತಾ., ದಾವಣಗೆರೆ ಜಿ.

Map

Near by Places

ನೀಲಗುಂದ ಕ್ರಾಸ್ - 1 ಕಿ.ಮೀ.
ಹರಪನಹಳ್ಳಿ - 12 ಕಿ.ಮೀ.
ಹರಿಹರ - 28 ಕಿ.ಮೀ.
ದಾವಣಗೆರೆ - 50 ಕಿ.ಮೀ.

Statistic

48 Views
0 Rating
0 Favorite
0 Share
error: Content is protected !!