ಶಿವನ ಅಪ್ಪಣೆಯಂತೆ ಲೋಕೋದ್ಧಾರ ಮಾಡಲು ಆಗಮಿಸಿದರೆಂದು ಹೇಳಲಾದಪಂಚಗಣಾಧೀಶ್ವರರಲ್ಲಿ ಶ್ರೀ ಮದ್ದಾನೇಶ್ವರರು ಒಬ್ಬರು. ಇವರೆಲ್ಲರೂ ಒಂದಾಗಿ ಕರ್ನಾಟಕದಪುಣ್ಯಕ್ಷೇತ್ರಗಳನ್ನು ದರ್ಶಿಸುತ್ತಾ ಅಲ್ಲಲ್ಲಿ ನೆಲೆನಿಂತು ಧರ್ಮಪ್ರಚಾರ ಕಾರ್ಯ ಕೈಗೊಳ್ಳುತ್ತಾಬಾಗಳಿಯ ಶ್ರೀ ಕಲ್ಲೇಶ್ವರ ದೇವಾಲಯಕ್ಕೆ ಆಗಮಿಸುತ್ತಾರೆ.ಐವರು ಗಣಾಧೀಶ್ವರರಲ್ಲಿ ಮದ್ದಾನೇಶ್ವರರದ್ದು ಭಿನ್ನ ವ್ಯಕ್ತಿತ್ವ. ಉಳಿದ ನಾಲ್ಕು ಜನಆಜನ್ಮ ಬ್ರಹ್ಮಚಾರಿಗಳಾದರೆ ಇವರು ಸಂಸಾರಿಗಳಾದವರು. ಪಂಚಗಣಾಧೀಶ್ವರರು ಬಾಗಳಿಯಲ್ಲಿ ನೆಲೆಸಿದ್ದಾಗ ಕೊಟ್ಟೂರು ಬಸವೇಶ್ವರರು ಮದ್ದಾನೇಶ್ವರರಿಗೆ ಹೂ ತರುವ ಕಾಯಕಹಚ್ಚಿದ್ದರು. ಹೀಗೆ ಹೂ ತರುವ ಕಾಯಕ ಮಾಡುತ್ತಿದ್ದ ಮದ್ಧಾನೇಶ್ವರರು ಪಾಳೇಗಾರರಮನೆತನದ ಕನಕಮ್ಮನಾಗತಿಗೆ ಮನಸೋಲುತ್ತಾರೆ. ಇವರ ಮನದಿಂಗಿತವನ್ನರಿತಬಸವೇಶ್ವರರು ಅಭಯ ನೀಡಿ ನೀನು ಕನಕವ್ವಳನ್ನು ವಿವಾಹವಾಗಿ ಸುಖವಾಗಿರು ನಿನಗೊಬ್ಬಮಹಾಶರಣನಾದ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದರು.ಹೀಗೆ ಬಸವೇಶ್ವರರ ಆಶೀರ್ವಾದದೊಂದಿಗೆ ಮದುವೆಯಾದ ಮದ್ಧಾನೇಶ್ವರರಿಗೆಪಾಳೇಗಾರರು ಕೂಲಹಳ್ಳಿಯಲ್ಲಿ ದೊಡ್ಡ ಅರಮನೆಯನ್ನೇ ಬಳುವಳಿಯನ್ನಾಗಿ ನೀಡುತ್ತಾರೆ.ಮುಂದೆ ಕೂಲಹಳ್ಳಿಗೆ ಬರುವ ಮದ್ಧಾನೇಶ್ವರರು ಅರಮನೆಯನ್ನೇ ದಾಸೋಹ ಮಠ ಎಂದುಹೆಸರಾಗುವಂತೆ ಮಾಡಿದರು. ಮುಂದೆ ಶರಣ ದಂಪತಿಗಳಿಗೆ ಮುದ್ದಾದ ಗಂಡುಮಗುವೊಂದು ಜನಿಸುತ್ತದೆ. ಅವರೇ ಪವಾಡ ಪುರುಷ ಶ್ರೀ ಗೋಣಿಬಸವೇಶ್ವರರು. ಶ್ರೀಗೋಣೀಬಸವೇಶ್ವರರು ಪವಾಡಪುರುಷರಾಗಿ ಊರಿನ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೂಕಾಯಕಯೋಗಿಯೆನಿಸಿದವರು. ಶ್ರೀಗಳು ತಮ್ಮ ಪವಾಡಗಳಿಂದಾಗಿ ಈ ಭಾಗದಲ್ಲಿಮನೆಮಾತಾಗಿದ್ದು ಇಲ್ಲಿ ಗೋಣಿಬಸವೇಶ್ವರೇ ಪ್ರಮುಖರೆನಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಪಟ್ಟದ ಚಿನ್ಮಯಿ ಸ್ವಾಮಿಗಳು ಮಠದಲ್ಲಿ ಧಾರ್ಮಿಕಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿನಡೆಯುವ ಗೋಣೀಬಸವೇಶ್ವರ ರಥೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.ಅಪ್ಪ-ದೊಡ್ಡಪ್ಪ(ಕೊಟ್ಟೂರೇಶ್ವರರು)ರವರ ಅಪ್ಪಣೆ ಕೇಳಿಯೇ ಗೋಣೀಬಸವೇಶ್ವರರರಥೋತ್ಸವ ಜರುಗುತ್ತದೆ.
Swamiji
Swamiji Name :
ಶ್ರೀ ಪಟ್ಟದ ಚಿನ್ಮಯ ಸ್ವಾಮಿಗಳು
Date of Birth :
1-1-1982
Place :
ಕೂಲಹಳ್ಳಿ, ಹರಪನಹಳ್ಳಿ ತಾ. .
Photo :
Programs
ಪಾಲ್ಗುಣ ಶುದ್ಧ ಏಕಾದಶಿಗೆ ಶ್ರೀ ಗೋಣಿಬಸವೇಶ್ವರರ ರಥೋತ್ಸವ
ಕಾರ್ತೀಕ ಮಾಸದಲ್ಲಿ ದೀಪೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ದಸರಾದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ.
ಶ್ರೀ ಗೋಣಿಬಸವೇಶ್ವರ ಸ್ವಾಮಿಯು
ಶ್ರಾವಣ ಮತ್ತು ಕಾರ್ತೀಕ ಮಾಸಗಳಲ್ಲಿ ಶ್ರೀಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೆ ಹೋಗುವುದು.