Shree Channappa Swami Matha, Kattige

Shree Channappa Swami Matha, Kattige Claimed

ಶ್ರೀ ಚನ್ನಪ್ಪ ಸ್ವಾಮಿ ಮಠ, ಕತ್ತಿಗೆ

Average Reviews

Description

ಶ್ರೀ ಚನ್ನಪ್ಪ ಸ್ವಾಮಿ ಮಠ, ಕತ್ತಿಗೆ

ಕರ್ತೃ ಶ್ರೀ ನಾಗಪ್ಪ ಶಿವಾಚಾರ್ಯ ಸ್ವಾಮಿಗಳು

ಶ್ರೀ ಚನ್ನಪ್ಪ ಸ್ವಾಮಿ ಮಠವು ಕಳೆದ ಶತಮಾನದಲ್ಲಿ ಸ್ಥಾಪಿತಗೊಂಡಿರುವಮಠವಾಗಿದ್ದು ಗುರುಪರಂಪರೆಯಲ್ಲೇ ವಿಶಿಷ್ಠ ಸಂಪ್ರದಾಯವನ್ನು ಪಾಲಿಸುತ್ತಿರುವಹಾಲಸ್ವಾಮಿಗಳ ಶಿಷ್ಯಪರಂಪರೆಯ ಮಠವಾಗಿದೆ. ಶ್ರೀ ಮಠವು ಶ್ರೀ ಶೈಲ ಪೀಠದ ಶಾಖಾಮಠವಾಗಿದ್ದು ಶರಣಸ್ಥಲ ಮಠವಾಗಿದೆ.ಶ್ರೀ ಹಾಲಸ್ವಾಮಿಗಳ ಶಿಷ್ಯ ಪರಂಪರೆಯ ಹೊನ್ನಾಳಿ ಶ್ರೀ ಚನ್ನಪ್ಪ ಸ್ವಾಮಿಗಳುಮತ್ತು ಶ್ರೀ ನಾಗಪ್ಪ ಸ್ವಾಮಿಗಳು ಉತ್ತರ ಕರ್ನಾಟಕದ ಕಡೆಯಿಂದ ಧರ್ಮ ಪ್ರಚಾರಮಾಡಿಕೊಂಡು ಬಂದು ಕತ್ತಿಗೆಯಲ್ಲಿ ನೆಲೆನಿಲ್ಲುತ್ತಾರೆ. ಭಕ್ತರ ಅಪೇಕ್ಷೆಯಂತೆ ಶ್ರೀಚನ್ನಪ್ಪಸ್ವಾಮಿಗಳು ಹೊನ್ನಾಳಿಗೆ ಹೋಗಿ ನೆಲೆಸುತ್ತಾರೆ. ಶ್ರೀ ನಾಗಪ್ಪ ಸ್ವಾಮಿಗಳು ಇಲ್ಲೇ ನಿಂತುಮಠವನ್ನು ಸ್ಥಾಪನೆ ಮಾಡಿ ಧರ್ಮಜಾಗೃತಿಯನ್ನುಂಟು ಮಾಡಿರುತ್ತಾರೆ.ಶ್ರೀ ಮಠದ ಆವರಣದಲ್ಲಿ ಸ್ಥಾಪನೆಯಾದ ಗದ್ದುಗೆಗಳ ಆಧಾರದ ಮೇಲೆ ಅಥವಾಪ್ರಸ್ತುತ ಶ್ರೀಗಳು ಹೇಳುವ ಪ್ರಕಾರ ಮಠದ ಕಾಲಮಾನವನ್ನು ಗುರುತಿಸಲಾಗುತ್ತಿಲ್ಲ. ಅಲ್ಲದೇಇತ್ತೀಚೆಗೆ ನೂತನ ಕಟ್ಟಡವನ್ನು ನಿರ್ಮಿಸಲು ತಳಪಾಯ ತೆಗೆಯುವಾಗ ಸಮಾಧಿಯೊಂದುಸಿಕ್ಕಿದೆ. ಇದೇ ಸಮಾಧಿಯು ಹಿರಿಯ ಗುರುಗಳ ಗದ್ದುಗೆ ಎಂದು ಗುರುತಿಸಲಾಗಿದೆ. ಈಗಇದೇ ಸ್ಥಳದಲ್ಲಿ ಸುಂದರವಾದ ಮಠವನ್ನು ನಿರ್ಮಿಸಲಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಪರಮೇಶ್ವರಯ್ಯ ಸ್ವಾಮಿಗಳು ಅಧಿಕಾರಕ್ಕೆ ಬಂದ ನಂತರಮಠವನ್ನು ಅಭಿವೃದ್ಧಿಪಡಿಸಿ ಕರ್ತೃಗಳ ಗದ್ದುಗೆಯನ್ನು ಕೇಂದ್ರವನ್ನಾಗಿ ಮಾಡಿ ಇನ್ನೂ ಹೆಚ್ಚುಧಾರ್ಮಿಕ ವಿಧಿವಿಧಾನಗಳು ನಡೆಯುವಂತೆ ಮಾಡಿದ್ದಾರೆ. ಹಾಗೂ ಪರಂಪರೆಯಲ್ಲಿ ಬರುವಶ್ರೀ ರುದ್ರಪ್ಪಸ್ವಾಮಿಗಳ ಗದ್ದುಗೆಯನ್ನು ನಿರ್ಮಿಸಿದ್ದಾರೆ. ಶ್ರೀಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಶ್ರಮಿಸಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.ತದನಂತರ ಅಧಿಕಾರಕ್ಕೆ ಬಂದ ಈಗಿನ ಶ್ರೀಗಳಾದ ಶ್ರೀ ವೇದಮೂರ್ತಿನಾಗೇಶ್ವರಯ್ಯ ಸ್ವಾಮಿಗಳು ಮಠವನ್ನು ಭಕ್ತರ ಸಹಕಾರದೊಂದಿಗೆ ಧಾರ್ಮಿಕ ಹಾಗೂಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀಮಠವನ್ನು ಅಭಿವೃದ್ಧಿಪಥದತ್ತಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ವೇದಮೂರ್ತಿ ನಾಗೇಶ್ವರಯ್ಯ ಸ್ವಾಮಿಗಳು
Date of Birth :
21-6-1957
Place :
ಕತ್ತಿಗೆ, ಹೊನ್ನಾಳಿ ತಾ.
Photo :

Programs

ಕಾರ್ತಿಕ ಮಾಸದ ಗೌರಿ ಹುಣ್ಣಿಮೆಯಂದು ಕಾರ್ತಿಕೋತ್ಸವ ಹಾಗೂ ವರ್ಷದ ಜಾತ್ರೆ.
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ವಿಶೇಷ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಚನ್ನಪ್ಪ ಸ್ವಾಮಿ ಮಠ (ಕತ್ತಿಗೆ ಮಠ)
ಕತ್ತಿಗೆ - 577 223,
ಹೊನ್ನಾಳಿ ತಾ||, ದಾವಣಗೆರೆ ಜಿ||

Map

Near by Places

ಜೀನಹಳ್ಳಿ ಕ್ರಾಸ್ - 2 ಕಿ.ಮೀ.
ಹೊನ್ನಾಳಿ - 15 ಕಿ.ಮೀ.
ಶಿಕಾರಿಪುರ - 22 ಕಿ.ಮೀ.
ದಾವಣಗೆರೆ - 65 ಕಿ.ಮೀ.

Statistic

325 Views
0 Rating
0 Favorite
0 Share
error: Content is protected !!