ಹೊಟ್ಯಾಪುರ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ಹಿರೇಮಠವು ಸ್ಥಾಪನೆಯಾಗಿದ್ದು ಶ್ರೀಮಠವನ್ನು ಶ್ರೀ ಹಾಲು ಒಡೆಯರು ಸ್ಥಾಪನೆ ಮಾಡಿದ್ದಾರೆಂದು ತಿಳಿದುಬರುತ್ತದೆ. ಇವರು ಕೊಟ್ಟೂರಿನಿಂದ ಆಗಮಿಸಿ ಕುಂಬಾರಕಟ್ಟೆಯಲ್ಲಿ ಬಂದು ನೆಲೆಸಿದ್ದಾಗ,ಇಲ್ಲಿನ ಪಾಳೇಗಾರನೊಬ್ಬನ ಆನೆಯು ಹಳ್ಳದಲ್ಲಿ ಬಿದ್ದು ಮೇಲೇಳಲಾಗದ ಸ್ಥಿತಿಯಲ್ಲಿರುತ್ತದೆ.ಆಗ ಪಾಳೇಗಾರನು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಸಹ ವಿಫಲನಾಗುತ್ತಾನೆ.ಕುಂಬಾರಕಟ್ಟೆಯಲ್ಲಿ ಶ್ರೀ ಹಾಲು ಒಡೆಯರು ಅನುಷ್ಠಾನಕ್ಕೆ ಕುಳಿತುಕೊಂಡ ವಿಚಾರವನ್ನುತಿಳಿದುಕೊಂಡ ಪಾಳೇಗಾರ ಗುರುಗಳಲ್ಲಿಗೆ ಬಂದು ಆನೆಯನ್ನು ಬದುಕಿಸಿಕೊಡಬೇಕೆಂದುಬಿನ್ನವಿಸಿಕೊಳ್ಳುತ್ತಾನೆ. ಆಗ ಗುರುಗಳು ತಮ್ಮ ತಪೋಶಕ್ತಿಯನ್ನು ಪ್ರಯೋಗಿಸಿ ಆನೆಯನ್ನುಮೇಲೇಳುವಂತೆ ಮಾಡಿದರು. ಇದರಿಂದ ಪಾಳೇಗಾರನು ಹೊಟ್ಯಾಪುರದಲ್ಲಿ ಮಠವನ್ನುಕಟ್ಟಿಸಿಕೊಟ್ಟು ಧಾರ್ಮಿಕ ಕಾರ್ಯಗಳನ್ನು ನಡೆಯಲು ಭೂಮಿಯನ್ನು ಉಂಬಳಿಯನ್ನಾಗಿನೀಡಿದನು. ಅಂದಿನಿಂದ ಗುರುಗಳು ಇಲ್ಲಿ ನೆಲೆಸಿ ಮಠವನ್ನು ಬೆಳೆಸಿದರು.ನಂತರ ಬಂದ ಶ್ರೀ ಶಿವಬಸವ ಶಿವಾಚಾರ್ಯ ಸ್ವಾಮಿಗಳು ಮಠವನ್ನು ಅಭಿವೃದ್ಧಿಪಡಿಸಿ ಹೊನ್ನಾಳಿ ಹಿರೇಕಲ್ಮಠದಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರ ನಂತರ ಶ್ರೀ ರೇವಣಸಿದ್ದಶಿವಾಚಾರ್ಯ ಸ್ವಾಮಿಗಳು ಅಧಿಕಾರಕ್ಕೆ ಬಂದಿದ್ದಾರೆ. ಇವರ ಕಾಲದಲ್ಲಿ ಮಠವು ಆರ್ಥಿಕವಾಗಿ ಸದೃಢತೆಯನ್ನು ಕಂಡುಕೊಂಡಿತು. ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳುದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಚಾರದಲ್ಲಿದ್ದಾಗ ಮಂಗಳೂರಿನ ಒಳಗಡೆಯ ಬಸವನಗುಡಿಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಅಭಿವೃದ್ಧಿಪಡಿಸಿ ಶ್ರೀ ಹಿರೇಮಠದ ಶಾಖಾಮಠವಾಗಿ ಬೆಳೆಯುವಂತೆ ಮಾಡಿ 1984 ರಲ್ಲಿ ಲಿಂಗೈಕ್ಯರಾದರು.ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರಿಯ ಗುರುಗಳುಇರುವಾಗಲೇ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದರು. ಗುರುಗಳು ಮಂಗಳೂರುಮತ್ತು ಹೊನ್ನಾಳಿಯಲ್ಲಿ ವಿದ್ಯಾಭ್ಯಾಸ ಮಾಡಿ, ಧಾರವಾಡದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿಹೊಟ್ಯಾಪುರದಲ್ಲಿ ಊರ ಹೊರಗಡೆ ಹೊಸ ಮಠವನ್ನು ಭವ್ಯವಾಗಿ ನಿರ್ಮಿಸಿ ಮತ್ತುಮಂಗಳೂರು ಮಠದಲ್ಲಿಯೂ ಸಹ ಧಾರ್ಮಿಕ ಕಾರ್ಯಗಳನ್ನು ವಿಧಿವತ್ತಾಗಿ ನಡೆಸಿಕೊಂಡುಕಾಯಕಯೋಗಿಯಾಗಿ ಮಠಗಳನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
6-6-1963
Place :
ಹೊಟ್ಯಾಪುರ, ಹೊನ್ನಾಳಿ ತಾ.
Pattadikara :
24-03-2002
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಕಾರ್ಯಕ್ರಮ.
ಗಣೇಶನ ಹಬ್ಬದ ನಂತರ ಎಳೆಗೌರಮ್ಮ ಹಬ್ಬ ಆಚರಣೆ.
ಮಾರ್ಗಶಿರ ಮಾಸದಲ್ಲಿ ಪೂಜ್ಯಶ್ರೀ ಹಾಲು ಒಡೆಯರ ಪುಣ್ಯಾರಾಧನೆ.
Photos
Full Address Kannada
ಶ್ರೀ ಹಿರೇಮಠ, ಹೊಟ್ಯಾಪುರ ಬೀರಗೊಂಡನಹಳ್ಳಿ
ಪೋಸ್ಟ್ - 577 224 ಹೊನ್ನಾಳಿ
ತಾ||, ದಾವಣಗೆರೆ ಜಿ||