ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆ ಗ್ರಾಮವು ತಾಲ್ಲೂಕುಕೇಂದ್ರದಿಂದ ಕೇವಲ 5 ಕಿ. ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಶ್ರೀ ಷ.ಬ್ರ.ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಇತ್ತೀಚೆಗೆ 2005ರಲ್ಲಿ ಶ್ರೀ ಹಿರೇಮಠವನ್ನುಸ್ಥಾಪಿಸಿದ್ದು, ಶ್ರೀ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದೆ.ಶ್ರೀಗಳು ರೋಣ ತಾಲ್ಲೂಕಿನ ಜಕ್ಕಲಿ ಎಂಬ ಗ್ರಾಮದಲ್ಲಿ 1974ರಲ್ಲಿಜನಿಸಿದವರಾಗಿದ್ದು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬಿದರಗಡ್ಡೆಗೆ ಬಂದು ನೆಲೆಸಿದ್ದಾರೆ.ಶ್ರೀಗಳು ಬಿದರಗಡ್ಡೆ ಗ್ರಾಮದ ಹೊರವಲಯದಲ್ಲಿ ಮಠ ಸ್ಥಾಪಿಸಿದ ನಂತರ ಧಾರ್ಮಿಕಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಚಾಲನೆ ಕೊಟ್ಟು ಈ ಭಾಗದಲ್ಲಿ ಹೊಸ ಬದಲಾವಣೆತರಲು ಕಾರಣರಾದರು. ಗ್ರಾಮದ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಮುನ್ನಡೆಸುತ್ತಿರುವ ಶ್ರೀಗಳು ಮಠವನ್ನು ಅಭಿವೃದ್ದಿಗೊಳಿಸುವತ್ತಚಿತ್ತಹರಿಸಿದ್ದಾರೆ.ಶ್ರೀ ಮಠದಲ್ಲಿ ಪ್ರತಿನಿತ್ಯ ಪೂಜಾ ಕಾರ್ಯಕ್ರಮಗಳೊಂದಿಗೆ ತಿಂಗಳಿಗೊಮ್ಮೆಆಧ್ಯಾತ್ಮ ಚಿಂತನಾ ಗೋಷ್ಠಿಗಳು ನಡೆಯುತ್ತಲಿವೆ. ಹಾಗೂ ವರ್ಷಕ್ಕೊಮ್ಮೆ ವಾರ್ಷಿಕವರ್ಧಂತಿ ಮಹೋತ್ಸವ ನಡೆಯುತ್ತದೆ. ಶ್ರೀಗಳು ಈ ಎಲ್ಲಾ ಕಾರ್ಯಕ್ರಮಗಳ ಮೂಲಕಮಠವನ್ನು ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
22-7-1974
Place :
ಜಕ್ಕಲಿ, ರೋಣ ತಾ.
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ಆಧ್ಯಾತ್ಮ ಚಿಂತನ ಗೋಷ್ಠಿ.
ಕಾರ್ತೀಕ ಮಾಸದ ಶುದ್ಧ ಪಂಚಮಿಯಂದು ವಾರ್ಷಿಕ ವರ್ಧಂತಿ ಮಹೋತ್ಸವ.
Institutions
ಸಂಸ್ಕøತ ಪಾಠಶಾಲೆ
ಕಿರಿಯ ಪ್ರಾಥಮಿಕ ಶಾಲೆ ಗೋಶಾಲೆ
Photos
Full Address Kannada
ಶ್ರೀ ಹಿರೇಮಠ ಬಿದರಗಡ್ಡೆ,
ಸುಂಕದಕಟ್ಟೆ ಪೋಸ್ಟ್ - 577 217
ಹೊನ್ನಾಳಿ ತಾ||, ದಾವಣಗೆರೆ ಜಿ||