Shree Guru Karibasaveshwara Gadduge Matha

Shree Guru Karibasaveshwara Gadduge Matha Claimed

ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಮಠ

Average Reviews

Description

ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಮಠ

ಶ್ರೀ ಕರಿಬಸವೇಶ್ವರ ಮಹಾಸ್ವಾಮಿಗಳು

ಶ್ರೀ ಗುರು ಕರಿಬಸವೇಶ್ವರ ಮಹಾಸ್ವಾಮಿಗಳು ನಂದಿಗುಡಿ ವೃಷಭಪುರಿಮಹಾಸಂಸ್ಥಾನದ ಪರಂಪರೆಗೆ ಸೇರಿದವರಾಗಿದ್ದಾರೆ. ಸುಮಾರು 400 ವರ್ಷಗಳ ಹಿಂದೆವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ 8ನೇ ಮಠಾಧೀಶರಾಗಿ ಆಡಳಿತ ನಡೆಸಿ ನಂತರಲೋಕಸಂಚಾರ ಮಾಡುತ್ತಾ ಶ್ರೀಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನೆಲೆಸಿ ಲಿಂಗೈಕ್ಯರಾಗಿರುತ್ತಾರೆ.ಶ್ರೀಗಳು ನಂದಿಗುಡಿಯಿಂದ ಬರುವಾಗ ಪಾಳ್ಯ ಮಾರ್ಗವಾಗಿ ತುಂಬಿಹರಿಯುತ್ತಿದ್ದ ತುಂಗಭದ್ರಾ ನದಿಯನ್ನು ತಮ್ಮ ವಲ್ಲಿಯ ಮೇಲೆ ಕೂತು ಉಕ್ಕಡಗಾತ್ರಿ ನದಿಯದಡವನ್ನು ತಲುಪಿ ಈಗ ಗದ್ದುಗೆ ಇರುವ ಸ್ಥಳದಲ್ಲಿ ಅನುಷ್ಠಾನಗೊಂಡಿದ್ದಾರೆ ಎಂದುಹೇಳಲಾಗಿದೆ. ಶ್ರೀಗಳು ಪಾಳ್ಯದ ನದಿಯ ದಡದಿಂದ ಬಂದಿರುವುದಕ್ಕೆ ಅಲ್ಲಿ ದಡದ ಮೇಲೆಇರುವ ಸಣ್ಣ ಗುಡಿಯೇ ಸಾಕ್ಷಿ ಎಂದು ಜನರು ನಂಬುತ್ತಾರೆ.ಶ್ರೀ ಕ್ಷೇತ್ರದಲ್ಲಿ ಗುರುಗಳು ಭಕ್ತರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಮಾನಸಿಕಸ್ಥಿಮಿತದಲ್ಲಿರದ ರೋಗಿಗಳ ಹಾಗೂ ಪೀಡೆ-ಪಿಶಾಚಿಗಳಿಂದ ಪೀಡಿತರಾದ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಹೀಗಾಗಿ ಗುರುಗಳು ಬಹುಬೇಗನೇ ಈ ಭಾಗದಲ್ಲಿ ಪ್ರಸಿದ್ಧರಾಗಿನಂತರ ಜೀವಂತ ಸಮಾಧಿ ಹೋದರೆಂದು ಹೇಳಲಾಗಿದೆ. ತದನಂತರ ಅಜ್ಜಯ್ಯನವರಶಿಷ್ಯರಾದ ನಾಗಪ್ಪಜ್ಜ ಹಾಗೂ ತುಕ್ಕಪ್ಪಜ್ಜನವರು ಗುರುಗಳ ಸಮಾಧಿಗೆ ಭಕ್ತರ ಸಹಕಾರದೊಂದಿಗೆ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾ ಇಲ್ಲಿಯೇ ಲಿಂಗೈಕ್ಯರಾಗಿರುತ್ತಾರೆ.ಅಜ್ಜಯ್ಯನವರ ದೇವಸ್ಥಾನದ ಸಮೀಪದಲ್ಲಿಯೇ ಇವರುಗಳ ಗುಡಿಗಳಿವೆ.ಶ್ರೀಕ್ಷೇತ್ರದಲ್ಲಿ ಅಜ್ಜಯ್ಯನವರು ಸಮಾಧಿ ಹೊಂದಿದ ಸ್ಥಳದಲ್ಲಿ ಭವ್ಯವಾದದೇವಾಲಯ ಕಟ್ಟಡ ಹಾಗೂ ಇತ್ತೀಚೆಗೆ 300 ಕೋಣೆಗಳ ಬೃಹತ್ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗಿದೆ. ಈಗಲೂ ಶ್ರೀಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಭೇಟಿನೀಡುತ್ತಿದ್ದು ಅಜ್ಜಯ್ಯನವರಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ದೇವಾಲಯದಲ್ಲಿ ನಿತ್ಯದಾಸೋಹ ವ್ಯವಸ್ಥೆ ಇದೆ. ಹಾಗೂ ಇವುಗಳೆಲ್ಲದರ ಮೇಲ್ವಿಚಾರಣೆಯನ್ನು ಶ್ರೀಗುರುಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ (ರಿ.) ನೋಡಿಕೊಳ್ಳುತ್ತಿದೆ.ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಕಮಿಟಿಯುನಂದಿಗುಡಿ ಶ್ರೀ ವೃಷಭಪುರಿ ಬೃಹನ್ಮಠದ ಗುರುಗಳ ನೇತೃತ್ವದಲ್ಲಿ ನಡೆಸುತ್ತಿದೆ.

Swamiji

Swamiji Name :
ಶ್ರೀ ಕರಿಬಸವೇಶ್ವರ ಮಹಾಸ್ವಾಮಿಗಳು

Programs

ಪ್ರತಿ ಸೋಮವಾರ, ಗುರುವಾರ ವಿಶೇಷ ಪೂಜೆ.
ಪ್ರತಿ ಅಮವಾಸ್ಯೆ ಹುಣ್ಣಿಮೆಗೆ ವಿಶೇಷ ಕಾರ್ಯಕ್ರಮಗಳು.
ಶ್ರಾವಣ ಮಾಸದ 3ನೇ ಸೋಮವಾರ ಅಜ್ಜಯ್ಯನವರ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಮಹಾ ಶಿವರಾತ್ರಿಗೆ ವಿಶೇಷ ಕಾರ್ಯಕ್ರಮಗಳು, ಶಿವರಾತ್ರಿ ಅಮವಾಸ್ಯೆಯ ಮರುದಿನ ಅಜ್ಜಯ್ಯನವರ ರಥೋತ್ಸವ (8 ದಿನಗಳ ಜಾತ್ರೆ). ತುಂಗಾಭದ್ರಾ ದಡದಲ್ಲಿ ಮಠ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಅಂಗನವಾಡಿಗಳು / ವಿದ್ಯಾರ್ಥಿ ನಿಲಯ ನಿರ್ಗತಿಕರ ವಸತಿ ನಿಲಯ.

Full Address Kannada

ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಮಠ ಟ್ರಸ್ಟ್ (ರಿ.)
(ಶ್ರೀ ವೃಷಭಪುರಿ ಮಹಾಸಂಸ್ಥಾನ ಪರಂಪರೆ)
ಉಕ್ಕಡಗಾತ್ರಿ - 581 119 ಹರಿಹರ ತಾ||, ದಾವಣಗೆರೆ ಜಿ||

Map

Near by Places

ಹರಿಹರ - 26 ಕಿ.ಮೀ.
ಮಲೆಬೆನ್ನೂರು - 25 ಕಿ.ಮೀ.
ದಾವಣಗೆರೆ - 40 ಕಿ.ಮೀ.
ನಂದಿಗುಡಿ ಕ್ರಾಸ್ - 3 ಕಿ.ಮೀ.

Statistic

20 Views
0 Rating
0 Favorite
0 Share
error: Content is protected !!