ಹರಪನಹಳ್ಳಿ ತಾಲ್ಲುಕಿನ ದುಗ್ಗಾವತಿಯು ತಾಲ್ಲೂಕು ಕೇಂದ್ರದಿಂದ ಸುಮಾರು 30ಕಿ.ಮೀ. ದೂರದಲ್ಲಿದ್ದು, ಇಲ್ಲಿ ಶ್ರೀಶೈಲ ಮಠದ ಶಾಖಾನುವರ್ತಿ ಪುತ್ರವರ್ಗದಪರಂಪರೆಯ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದೆ. ಮಠದ ಪರಂಪರೆಯ ಬಗ್ಗೆ ನಿಖರವಾದಆಧಾರಗಳು ಲಭ್ಯವಿಲ್ಲ. ಮಠದಲ್ಲಿ ಶ್ರೀ ಕೆಂಚವೀರ ಸ್ವಾಮಿಗಳ ಗದ್ದುಗೆಯು ನಿರ್ಮಾಣಗೊಂಡಿರುವುದರಿಂದ ಇವರೇ ಕರ್ತೃ ಗುರುಗಳು ಎಂದು ಹೇಳಬಹುದು.ಶ್ರೀ ಕೆಂಚವೀರ ಸ್ವಾಮಿಗಳ ನಂತರ ಶ್ರೀ ರಾಚೋಟಪ್ಪ ಸ್ವಾಮಿಗಳು, ಶ್ರೀಹುಚ್ಚವೀರಪ್ಪ ಸ್ವಾಮಿಗಳು, ಶ್ರೀ ರುದ್ರಪ್ಪ ಸ್ವಾಮಿಗಳು, ಶ್ರೀ ಮಡಿವಾಳ ಸ್ವಾಮಿಗಳು ಮಠದಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ. ಶ್ರೀ ಮಡಿವಾಳಸ್ವಾಮಿಗಳ ನಂತರ ಮಠವು ಖಾಲಿ ಉಳಿದು ಬಹುಕಾಲದ ನಂತರ ಈಗಿನ ಹಿರಿಯಸ್ವಾಮಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಅಧಿಕಾರಕ್ಕೆ ಬಂದಿರುತ್ತಾರೆ.ಸಂಸಾರದ ಮನೆಯಲ್ಲಿ ನೆಲೆಸಿರುವ 6ನೇ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳು ಹಾಗೂ 7ನೇ ಶ್ರೀಗಳಾದ ಶ್ರೀ ವೀರಭದ್ರ ಸ್ವಾಮಿಗಳು ಮಠವನ್ನುಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಮಠದ ಗದ್ದುಗೆಗಳಿಗೆ ನಿತ್ಯ ಪೂಜೆ ಹಾಗೂ ವಾರ್ಷಿಕಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಮಠದಲ್ಲಿ ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜಾಪುನಸ್ಕಾರಗಳುಹಾಗೂ ಮಹಾಶಿವರಾತ್ರಿಯಲ್ಲಿ ಜಾಗರಣೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳುಜರುಗುತ್ತವೆ.
Swamiji
Swamiji Name :
ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು
Date of Birth :
12-12-1960
Place :
ದುಗ್ಗಾವತಿ ಹರಪನಹಳ್ಳಿ ತಾ||
Photo :
Swamiji Name :
ಶ್ರೀ ವೀರಭದ್ರ ಸ್ವಾಮಿಗಳು
Date of Birth :
1986
Place :
ದುಗ್ಗಾವತಿ ಹರಪನಹಳ್ಳಿ ತಾ||
Photo :
Programs
ಪ್ರತಿ ಅಮಾವಾಸ್ಯೆ ಹುಣ್ಣಿಮೆಯಂದು ವಿಶೇಷ ಪೂಜೆ.
ಮಹಾ ಶಿವರಾತ್ರಿಗೆ ವಿಶೇಷ ಪೂಜೆ, ಜಾಗರಣೆ.
Photos
Full Address Kannada
ಶ್ರೀ ಹಿರೇಮಠ
ದುಗ್ಗಾವತಿ - 583137
ಹರಪನಹಳ್ಳಿ ತಾ., ದಾವಣಗೆರೆ ಜಿ.