Shree Shivanaradamuni Devasthana, Chigteri

Shree Shivanaradamuni Devasthana, Chigteri Claimed

ಶ್ರೀ ಶಿವನಾರದಮುನಿ ದೇವಸ್ಥಾನ, ಚಿಗಟೇರಿ

Average Reviews

Description

ಶ್ರೀ ಶಿವನಾರದಮುನಿ ದೇವಸ್ಥಾನ, ಚಿಗಟೇರಿ

ಶ್ರೀ ಚಿಗಟೇರಿ ನಾರದ ಮುನಿಸ್ವಾಮಿಗಳು

ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿರುವ ಶ್ರೀ ಶಿವನಾರದಮುನಿದೇವಸ್ಥಾನವು ದಾವಣಗೆರೆ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಲಕ್ಷಾಂತರ ಭಕ್ತರ ಶ್ರದ್ಧಾಭಕ್ತಿಯಧಾರ್ಮಿಕ ಕೇಂದ್ರವಾಗಿದೆ. ಸುಮಾರು 8ನೇ ಶತಮಾನದಲ್ಲಿ ಜೀವಿಸಿದ್ದಿರಬಹುದಾದಮಹಾನ್ ತಪಸ್ವಿ ಶ್ರೀ ಶಿವನಾರದಮುನಿ ಸ್ವಾಮಿಗಳ ಕ್ಷೇತ್ರವೇ ಚಿಗಟೇರಿಯ ಶ್ರೀಶಿವನಾರದಮುನಿ ದೇವಸ್ಥಾನ.ಶ್ರೀ ಶಿವನಾರದ ಮುನಿಗಳ ಮೂಲ ಹೆಸರು ಭೈರೇಶನೆಂತಲೂ, ತಮ್ಮ ಪವಾಡಗಳಿಂದ ಮನೆಮಾತಾದ ಭೈರೇಶರ ಶಕ್ತಿಯಿಂದಾಗಿ ನಾರುಹುಣ್ಣುಗಳು ನಿವಾರಣೆಯಾಗುತ್ತಿದ್ದಕಾರಣ ಭೈರೇಶ ಋಷಿಗಳಿಗೆ ಜನರು ಶಿವನಾರನ್ಮುನಿಗಳೆಂದೇ ಗೌರವ ಸಲ್ಲಿಸುತ್ತಾ ಬಂದಿದ್ದರಿಂದ ಋಷಿಗಳ ಹೆಸರು ಶ್ರೀ ಶಿವನಾರದಮುನಿಗಳೆಂದು ಆಯಿತೆಂದು ತಿಳಿದುಬರುತ್ತದೆ.ಶ್ರೀ ಶಿವ ನಾರದಮುನಿಗಳು ಪವಾಡ ಪುರುಷರು. ಮೇಲ್ಮಟ್ಟದ ಶೈವಾರಾಧಕರೂಆಗಿದ್ದು ಚಿಗಟೇರಿಯ ಅಂಚಿನ ಕಾನನದಲ್ಲಿ ನೆಲೆಸಿ ಘೋರ ತಪಸ್ಸಿನಿಂದ ಮಹರ್ಷಿಯಪಟ್ಟಕ್ಕೇರಿದ ಮಹಿಮಾಪುರುಷರೂ ಆಗಿದ್ದಾರೆ. ಇತಿಹಾಸದ ಸಂಶೋಧನೆಯಂತೆ ಶ್ರೀಶಿವನಾರನ್ಮುನಿಯ ಪ್ರತಿಮೆ ಚಿತ್ರದುರ್ಗ ಜಿಲ್ಲೆ ಹುಲ್ಲೂರು ಕಾಳಿಕಾ ದೇವಾಲಯದಲ್ಲೂ ಇದೆಎಂದು ತಿಳಿದುಬರುತ್ತದೆ ಮತ್ತು ಸಿರಿಗೆರೆಯಲ್ಲಿ ಶ್ರೀಗಳು ಕುಳಿತು ಪವಾಡ ಮಾಡಿದಹೆಗ್ಗುರುತಾಗಿ ನಾರದಕಟ್ಟೆ ಎಂದೇ ಖ್ಯಾತಿವೆತ್ತ ಸ್ಥಳವಿದೆಯೆಂದು ತಿಳಿದುಬರುತ್ತದೆ.ಶ್ರೀ ಶಿವನಾರನ್ಮುನಿ ಮೂಲಮೂರ್ತಿಯು ಸುಮಾರು 10-11 ನೇ ಶತಮಾನದಕಲ್ಯಾಣಿ ಚಾಲುಕ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು ಇತ್ತೀಚೆಗೆನೂತನ ದೇವಾಲಯವನ್ನು ನಿರ್ಮಿಸಿದ್ದು ದೇವಾಲಯವು ಭವ್ಯವಾಗಿ ನಿರ್ಮಾಣಗೊಂಡಿದೆ.ಪ್ರಸ್ತುತ ಶ್ರೀದೇವಾಲಯದ ಆಡಳಿತವನ್ನು 1996ರಲ್ಲಿ ರಚಿಸಲ್ಪಟ್ಟ ಶ್ರೀ ಶಿವನಾರದಮುನಿಸ್ವಾಮಿ ಸೇವಾ ಟ್ರಸ್ಟ್ ಮುನ್ನಡೆಸಿಕೊಂಡು ಬರುತ್ತಿದ್ದು ಅಪಾರ ಸಂಖ್ಯೆಯ ಭಕ್ತರುಸಹಕಾರ ನೀಡುತ್ತಿದ್ದಾರೆ. ಶ್ರೀ ನಾರದಮುನಿ ರಥೋತ್ಸವವವು ಪ್ರತಿವರ್ಷ ಏಪ್ರಿಲ್ ತಿಂಗಳಹಂಪಿ ಹುಣ್ಣಿಮೆ ಆದ ಐದು ದಿವಸಗಳ ನಂತರ ಮೂಲಾ ನಕ್ಷತ್ರದಂದು ಜರುಗಲ್ಪಡುತ್ತಿದ್ದುಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.

Swamiji

Swamiji Name :
ಶ್ರೀ ಶಿವನಾರದಮುನಿ ಸ್ವಾಮಿ

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಏಪ್ರಿಲ್ ತಿಂಗಳ ಹಂಪಿ ಹುಣ್ಣಿಮೆಯ ನಂತರ ಐದನೇ ದಿನದ ಮೂಲಾ ನಕ್ಷತ್ರದಂದು ಶ್ರೀ ಶಿವನಾರದಮುನಿ ರಥೋತ್ಸವ ಹಾಗೂ ಮರುದಿನ ಓಕುಳಿ ಉತ್ಸವ.
ಆಗಸ್ಟ್ ತಿಂಗಳ ಕಡೇ ಶನಿವಾರದಂದು ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾದಾಸೋಹ.

Full Address Kannada

ಶ್ರೀ ಶಿವನಾರದಮುನಿಸ್ವಾಮಿ ದೇವಸ್ಥಾನ
ಚಿಗಟೇರಿ - 583 127
ಹರಪನಹಳ್ಳಿ ತಾ||, ದಾವಣಗೆರೆ ಜಿ||

Map

Near by Places

ಹರಪನಹಳ್ಳಿ - 15 ಕಿ.ಮೀ.
ಕೊಟ್ಟೂರು - 15 ಕಿ.ಮೀ.
ಹರಿಹರ - 55 ಕಿ.ಮೀ.
ದಾವಣಗೆರೆ - 70 ಕಿ.ಮೀ.

Statistic

18 Views
0 Rating
0 Favorite
0 Share
error: Content is protected !!