Shree Kolashanteshwara Viraktamatha

Shree Kolashanteshwara Viraktamatha Claimed

ಶ್ರೀ ಕೋಲಶಾಂತೇಶ್ವರ ವಿರಕ್ತಮಠ

Average Reviews

Description

ಶ್ರೀ ಕೋಲಶಾಂತೇಶ್ವರ ವಿರಕ್ತಮಠ

ಶ್ರೀ ಮ.ನಿ.ಪ್ರ. ಕೋಲಶಾಂತೇಶ್ವರ ಮಾಹಾಶಿವಯೋಗಿಗಳು

ಶಿವನ ಅಪ್ಪಣೆಯಂತೆ ಲೋಕೋದ್ಧಾರ ಮಾಡಲು ಆಗಮಿಸಿದರೆಂದು ಹೇಳಲಾದಪಂಚಗಣಾಧೀಶ್ವರರಲ್ಲಿ ಶ್ರೀಕೋಲಶಾಂತೇಶ್ವರರು ಒಬ್ಬರು. ಇವರೆಲ್ಲಾ ಧರ್ಮ ಪ್ರಚಾರಕಾರ್ಯಾರ್ಥ ಪರ್ಯಟನೆ ಕೈಗೊಂಡು ಅಲ್ಲಲ್ಲಿ ನೆಲೆಗೊಂಡು ಭಕ್ತರನ್ನುದ್ಧರಿಸಿದ್ದಾರೆ. ಹೀಗೆ16-17ನೇ ಶತಮಾನದಲ್ಲಿ ಶ್ರೀ ಕೋಲಶಾಂತೇಶ್ವರರು ಅರಸಿಕೆರೆಯಲ್ಲಿ ನೆಲೆನಿಂತರೆಂದುಹೇಳಲಾಗಿದೆ. ಆಗ ಶಿವಯೋಗಿಗಳು ಅರಸಿಕೆರೆಯ ಊರ ಹೊರಗೆ ದೊಡ್ಡಕೆರೆಯ ಹತ್ತಿರವಾಸವಾಗಿದ್ದುದರಿಂದ ಇದಕ್ಕೆ ಹೊರಮಠವೆಂದು ಹೆಸರಾಗಿದೆ. ಶ್ರೀಕೋಲಶಾಂತೇಶ್ವರರುಪವಾಡ ಪುರುಷರಾಗಿದ್ದು ಬಹುಶಃ ಕೈಯಲ್ಲಿ ಸದಾ ಬೆತ್ತವನ್ನು ಹಿಡಿದಿರುತ್ತಿದ್ದರಿಂದ ಅವರಿಗೆಕೋಲಶಾಂತೇಶ್ವರರು ಎಂದು ಹೆಸರು ಬಂದಿದೆ.ಶ್ರೀ ಕೋಲಶಾಂತೇಶ ್ವರರು ತಮ್ಮ ಸಾzs Àನೆಯಿಂದ ¨s Àಕ ್ತರನ್ನುದ್ಧರಿಸಿವಯೊವೃದ್ಧರಾದ ಮೇಲೆ ಹೊರಮಠದಲ್ಲಿ ಜೀವಂತ ಸಮಾಧಿ ಹೋದರೆಂದುಹೇಳಲಾಗಿದೆ. ಶ್ರೀಗಳ ಸಮಾಧಿಯು ಹೊರಮಠದಲ್ಲಿ ಈಗಲೂ ಇದ್ದು ಪೂಜನೀಯಸ್ಥಳವಾಗಿದೆ. ಸಮೀಪದಲ್ಲಿಯೇ ಶ್ರೀ ಚನ್ನವೀರ ಸ್ವಾಮಿಗಳ ಹಾಗೂ ಹಿಂದಿನ ಸ್ವಾಮಿಗಳಾಗಿದ್ದಶ್ರೀ ವೃಷಭೇಂದ್ರ ಸ್ವಾಮಿಗಳ ಮತ್ತು ಶ್ರೀ ಚನ್ನಬಸವ ಸ್ವಾಮಿಗಳ ಗದ್ದುಗೆಗಳಿವೆ. ಶ್ರೀಕೋಲಶಾಂತೇಶ್ವರರು ಭಕ್ತರಿಗೆ ದೈವಸಮಾನರಾಗಿದ್ದಾರೆ. ಈ ಕಾರಣಕ್ಕಾಗಿ ಭಕ್ತರುಅರಸಿಕೆರೆಯ ಒಳಭಾಗದಲ್ಲಿ ಶ್ರೀ ಕೋಲಶಾಂತೇಶ್ವರ ಒಳಮಠವನ್ನು ಹಾಗೂದೇವಾಲಯವನ್ನು ನಿರ್ಮಿಸಿದ್ದು ಈ ದೇವಾಲಯವು ಜಾಗೃತ ಸ್ಥಳವಾಗಿದೆ.ಶ್ರೀಮಠವು ಬಹುಕಾಲ ಮಠಾಧೀಶರಿಲ್ಲದೆ ಖಾಲಿ ಉಳಿದಿದ್ದು ಊರವರಆಪೇಕ್ಷೆಯ ಮೇರೆಗೆ ಶ್ರೀಮಠಕ್ಕೆ 1984ರಲ್ಲಿ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳುನಿಯೋಜನೆಗೊಂಡರು. ಇವರು ಗದುಗಿನ ತೋಂಟದಾರ್ಯ ಪರಂಪರೆಗೆ ಸೇರಿದವರು.ಶ್ರೀಗಳವರು ಕಾಯಕತತ್ವದಲ್ಲಿ ನಂಬಿಕೆ ಇಟ್ಟುಕೊಂಡವರಾಗಿದ್ದು, ಮಠಕ್ಕೆ ಸಂಬಂಧಿಸಿದಹೊಲಗಳಲ್ಲಿ ರೈತರಾಗಿ ದುಡಿಯುತ್ತಿದ್ದಾರೆ. ಹಾಗೂ ಶ್ರೀಗಳು ಶಿಕ್ಷಣ ಕ್ಷೇತ್ರಕ್ಕೆ ಬಹಳಮಹತ್ವವನ್ನು ನೀಡುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿವರ್ಷ ಶ್ರೀಕೋಲಶಾಂತೇಶ್ವರರ ರಥೋತ್ಸವನಡೆಯುತ್ತಿದ್ದು ಒಳಮಠದಿಂದ ಹೊರಮಠದವರೆಗೆ ತೇರು ಎಳೆಯಲಾಗುತ್ತದೆ.

Swamiji

Swamiji Name :
ಶ್ರೀ.ಮ.ನಿ.ಪ್ರ. ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
23-8-1958
Place :
ದುದಿಹಳ್ಳಿ, ಹಿರೇಕೆರೂರು ತಾ||
Pattadikara :
5-11-1984
Photo :

Programs

ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ.
ಬಸವಜಯಂತಿಯಂದು ಸಾಮೂಹಿಕ ವಿವಾಹ.
ದವನದ ಹುಣ್ಣಿಮೆಗೆ ಶ್ರೀ ಮಠದ ರಥೋತ್ಸವ.
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಐ.ಟಿ.ಐ ಕಾಲೇಜ್ ವಿದ್ಯಾರ್ಥಿ ನಿಲಯ ಗೋಶಾಲೆ

Photos

Full Address Kannada

ಶ್ರೀ ಕೋಲಶಾಂತೇಶ್ವರ ವಿರಕ್ತಮಠ
ಅರಸಿಕೆರೆ-583 152
ಹರಪನಹಳ್ಳಿ ತಾ., ದಾವಣಗೆರೆ ಜಿ.

Map

Near by Places

ಕಂಚಿಕೆರೆ - 15 ಕಿ.ಮೀ.
ದಾವಣಗೆರೆ - 30 ಕಿ.ಮೀ.
ಹರಪನಹಳ್ಳಿ - 15 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!