ದಾವಣಗೆರೆ ನಗರದ ಮಧ್ಯಭಾಗದಿಂದ ಸುಮಾರು 5 ಕಿ.ಮೀ. ಅಂತರದಲ್ಲಿರುವಶ್ರೀ ಬಸವಗುರು ತಪೋವನವು ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಬೆಳೆಸುವಲ್ಲಿಯಶಸ್ವಿಯಾಗಿದೆ. ತಪೋವನದ ಸ್ಥಾಪಕರಾದ ಪೂಜ್ಯ ಶ್ರೀ ಶಿವಾನಂದ ಗುರೂಜಿಯವರುಮಲೇಬೆನ್ನೂರಿನಲ್ಲಿ 6-4-1935ರಲ್ಲಿ ಜನಿಸಿದವರಾಗಿದ್ದು, ಇವರ ತಂದೆತಾಯಿಗಳು ಸದ್ಗುಣಸಂಪನ್ನರಾಗಿ ಮಕ್ಕಳಿಗೆ ಶಿಸ್ತಿನ ಜೀವನ ಹೊಂದಲು ಬುನಾದಿ ಹಾಕಿದ್ದರು. ಇವರತಂದೆಯವರಾದ ಶ್ರೀ ಚನ್ನವೀರಯ್ಯನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು,ಮಲೆಬೆನ್ನೂರು ಹಾಗೂ ಕುಂಬಳೂರು ಭಾಗದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದರು.ಗುರುಗಳು ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡ ನಂತರ ಶ್ರೀಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಗರಡಿಯಲ್ಲಿ ಯೋಗ ಹಾಗೂ ಸಂಸ್ಕಾರಗಳನ್ನುಕಲಿತರು. 1962ರಲ್ಲಿ ಹರಿಹರದಲ್ಲಿ ಶ್ರೀ ಲಿಂಗಾನಂದ ಸ್ವಾಮಿಗಳವರ ಪ್ರವಚನದಿಂದಪ್ರಭಾವಿತರಾದ ಗುರುಗಳು ಅವರೊಂದಿಗೇ ಹೊರಟು ಆಧ್ಯಾತ್ಮ ಸಾಧನೆ ಮಾಡಿಪ್ರವಚನಗಳನ್ನು ಮಾಡುತ್ತಿದ್ದವರು. ತದನಂತರ ಶಾಲಾ ಶಿಕ್ಷಕರಾಗಿ ಜೀವನ ನಡೆಸಿದ್ದಾರೆ.ಕಾಲಾನಂತರ 1977ರಲ್ಲಿ ಶ್ರೀಮತಿ ಸುಮಂಗಲಾದೇವಿಯವರೊಂದಿಗೆ ವಿವಾಹವಾದಗುರುಗಳು ತಮ್ಮ ಸಾತ್ವಿಕ ಜೀವನವನ್ನು ಮುನ್ನಡೆಸಿದ್ದಾರೆ.ಗುರುಗಳು 1982ರ ಅಕ್ಟೋಬರ್ನಲ್ಲಿ ಒಂದು ತಿಂಗಳ ಪರ್ಯಂತಕುಂಬಳೂರಿನಲ್ಲಿ ಯೋಗ ಹಾಗೂ ಪ್ರವಚನ ಶಿಬಿರ ಮಾಡಿ ತದನಂತರ ಅಲ್ಲೇ ಶ್ರೀ ಬಸವಗುರುಕುಲವನ್ನು ಟ್ರಸ್ಟಿಗಳೊಂದಿಗೆ ಸ್ಥಾಪನೆ ಮಾಡಿದರು. ಮುಂದೆ ಸತತ 27 ವರ್ಷಗಳಕಾಲ ಗುರುಕುಲವನ್ನು ಮುನ್ನಡೆಸಿ 2010ರಲ್ಲಿ ಗುರುಕುಲದ ಸಕಲ ಆಸ್ತಿ, ಜಮೀನು ಹಾಗೂಠೇವಣಿ ಪತ್ರಗಳನ್ನು ಗುರುಕುಲದ ಗೌರವಾಧ್ಯಕ್ಷರಾದ ತರಳಬಾಳು ಜಗದ್ಗುರುಗಳಿಗೆ ಒಪ್ಪಿಸಿಅಲ್ಲಿಂದ ಹೊರನಡೆದರು. ಶ್ರೀಗಳು ಶಿರಮಗೊಂಡನಹಳ್ಳಿಯಲ್ಲಿ 2008-09ರಲ್ಲಿ ತಮ್ಮ ಸ್ವಂತಪರಿಶ್ರಮದಿಂದ ಶ್ರೀ ಬಸವಗುರು ತಪೋವನವನ್ನು ಸ್ಥಾಪಿಸಿ ತಮ್ಮ ಧರ್ಮಪತ್ನಿಯೊಂದಿಗೆವಾಸಿಸುತ್ತಾ ಯೋಗ, ಪ್ರವಚನ ಮತ್ತು ಪ್ರತಿ ತಿಂಗಳು ವಚನ ಚಿಂತನ ಗೋಷ್ಠಿಗಳನ್ನುನಡೆಸಿಕೊಡುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಶಿವಾನಂದ ಗುರೂಜಿ
Date of Birth :
6-4-1935
Place :
ಮಲೇಬೆನ್ನೂರು, ಹರಿಹರ ತಾ.
Programs
ಪ್ರತಿ ತಿಂಗಳ ಕೊನೆಯ ಭಾನುವಾರ ವಚನ ಚಿಂತನಾ ಗೋಷ್ಠಿ.
Full Address Kannada
ಶ್ರೀ ಬಸವಗುರು ತಪೋವನ
ಶಿರಮಗೊಂಡನಹಳ್ಳಿ - 577 005
ದಾವಣಗೆರೆ ತಾ||, ಜಿ||