ಸುಮಾರು 320 ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಕಡೆಯಿಂದ ಆಗಮಿಸಿದಪರಮಪೂಜ್ಯ ಶ್ರೀ ರುದ್ರೇಶ್ವರ ಮಹಾಸ್ವಾಮಿಗಳು ಹೆಬ್ಬಾಳು ಸಮೀಪದ ಹಿರೇಗುಡ್ಡದಲ್ಲಿಅನುಷ್ಠಾನಗೊಂಡಿದ್ದರು. ಇವರ ತಪೋಶಕ್ತಿಗೆ ಬೆರಗಾದ ಭಕ್ತರು ನಿರ್ಜನ ಪ್ರದೇಶವಾದಹಿರೇಗುಡ್ಡದಲ್ಲಿ ಗುರುಗಳು ವಾಸಿಸುವುದು ಬೇಡವೆಂದು ಹೆಬ್ಬಾಳಿಗೆ ಭಕ್ತಿಪೂರ್ವಕವಾಗಿಬರಮಾಡಿಕೊಂಡು ಹೆಬ್ಬಾಳಿನ ಹೊರವಲಯದಲ್ಲಿ ಮಠವನ್ನು ನಿರ್ಮಿಸಿಕೊಟ್ಟರು.ಶ್ರೀ ರುದ್ರೇಶ್ವರ ಮಹಾಸ್ವಾಮಿಗಳು ಹೆಬ್ಬಾಳಿನ ಶ್ರೀ ವಿರಕ್ತಮಠಕ್ಕೆ ಬಂದ ನಂತರಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳು ಬಿರುಸುಗೊಂಡವು. ವೀರಶೈವ ಧರ್ಮದಆಚರಣೆಗಳು, ಬಸವಾದಿ ಶರಣ ತತ್ವಗಳನ್ನು ಬೋಧಿಸಿದ ಗುರುಗಳು ಭಕ್ತರನ್ನುದ್ದರಿಸಿದರು.ಇವರ ನಂತರ ಶ್ರೀ ಮ.ನಿ.ಪ್ರ. ಬಸವಲಿಂಗರುದ್ರ ಸ್ವಾಮಿಗಳು ಹಾಗೂ ಮೂರನೇಶ್ರೀಗಳಾದ ಶ್ರೀ ಮ.ನಿ.ಪ್ರ. ಈಶ್ವರ ರುದ್ರೇಶ್ವರ ಸ್ವಾಮಿಗಳು ಮಠದ ಚಟುವಟಿಕೆಗಳನ್ನುವಿಸ್ತರಿಸಿದರು. ನಂತರ ಬಹುಕಾಲ ಮಠವು ಖಾಲಿ ಉಳಿದು ಜೀರ್ಣಗೊಳ್ಳತೊಡಗಿತು.ಇದನ್ನು ಗಮನಿಸಿದ ಊರಿನ ಸದ್ಭಕ್ತರು ಶ್ರೀಮಠವನ್ನು ಊರ ಹೊರಗಿನಿಂದ ಊರ ಮಧ್ಯಕ್ಕೆಸ್ಥಳಾಂತರಿಸಿದರು. ಅಂದಿನಿಂದ ಶ್ರೀ ವಿರಕ್ತಮಠವು ಹೆಬ್ಬಾಳಿನ ಹೆಗ್ಗುರುತಾಗಿಜನಮಾನಸದಲ್ಲಿ ನೆಲೆಗೊಂಡಿದೆ.ಈಗಿನ ಗುರುಗಳಾದ ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಸ್ವಾಮಿಗಳು 1980ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕಾಯಕಯೋಗದಿಂದ ಮಠವನ್ನು ಬೆಳೆಸಿ ಜನರಮನಸಿನಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದಾರೆ. ಶ್ರೀಗಳು 1957ರಲ್ಲಿ ಶಿಗ್ಗಾಂವ್ ತಾಲ್ಲೂಕುಕುಂದೂರು ಗ್ರಾಮದಲ್ಲಿ ಜನಿಸಿದವರಾಗಿದ್ದು ಬಾಲ್ಯದಿಂದಲೇ ಆಧ್ಯಾತ್ಮಿಕತೆಯ ಬಗ್ಗೆ ಒಲವುಬೆಳೆಸಿಕೊಂಡಿದ್ದವರು. ತಮ್ಮ 23ನೇ ವಯಸ್ಸಿನಲ್ಲಿಯೇ ಹೆಬ್ಬಾಳು ಮಠದ ಅಧಿಕಾರಕ್ಕೆಬಂದು ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ಅಲ್ಲಿಂದ ಇಲ್ಲಿಯವರೆಗೆ ಶ್ರೀಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿಮಠವನ್ನು ಮುನ್ನಡೆಸುತ್ತಿದ್ದು ಜೊತೆಯಲ್ಲಿ ನೂರಾರು ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಯೋಜನೆಯನ್ನು ಸಮರ್ಪಕವಾಗಿ ತಲುಪಿಸುತ್ತಿದ್ದಾರೆ.
Swamiji
Swamiji Name :
ಶ್ರೀ. ಮ. ನಿ. ಪ್ರ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು
Date of Birth :
28-12-1957
Place :
ಕುಂದೂರು, ಶಿಗ್ಗಾಂವ ತಾ||
Pattadikara :
1980
Photo :
Programs
ಪ್ರತಿ ತಿಂಗಳು 10 ನೇ ತಾರೀಖು ಸಾಮೂಹಿಕ ಕಲ್ಯಾಣಮಹೋತ್ಸವ.
ಪ್ರತಿ ಅಮವಾಸ್ಯೆ ದಿನ ಗಿಡಮೂಲಿಕೆ ಔಷಧಿ ವಿತರಣೆ, ಸಂರಕ್ಷಣೆ.
ಬಸವಜಯಂತಿಯಂದು ಶ್ರೀ ಬಸವೇಶ್ವರ ರಥೋತ್ಸವ.
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಮತ್ತು ಜಾತ್ರೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿ ಪೂರ್ವ / ಐ.ಟಿ.ಐ. / ಡಿ.ಎಡ್.., ಕಾಲೇಜ್
ಆಯುರ್ವೇದ ಆಸ್ಪತ್ರೆ ಅನಾಥಾಶ್ರಮ / ಗೋಶಾಲೆ
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ವಿರಕ್ತ ಮಠ,
ಹೆಬ್ಬಾಳು - 577 556
ದಾವಣಗೆರೆ ತಾ., ಜಿ.