Shree Vireshwara Punyashrama

Shree Vireshwara Punyashrama Claimed

ಶ್ರೀ ವೀರೇಶ್ವರ ಪುಣ್ಯಾಶ್ರಮ

Average Reviews

Description

ಶ್ರೀ ವೀರೇಶ್ವರ ಪುಣ್ಯಾಶ್ರಮ

ಶ್ರೀ ಪರಮಪೂಜ್ಯ ಕಲ್ಲಯ್ಯ ಅಜ್ಜನವರು

ಶ್ರೀಗುರು ಪಂಚಾಕ್ಷರಿ ಗವಾಯಿಗಳ ಹೆಸರನ್ನು ಕೇಳದ ಕನ್ನಡಿಗನಿಲ್ಲ ಎಂದರೆಅತಿಶಯೋಕ್ತಿಯಾಗಲಾರದು, ಹುಟ್ಟಿನೊಡನೆ ಅಂಧತ್ವವನ್ನು ಪಡೆದಿದ್ದ ಗವಾಯಿಗಳುಹಾನಗಲ್ ಗುರು ಕುಮಾರಸ್ವಾಮಿಗಳವರ ಪ್ರೇರಣೆ, ಆಶೀರ್ವಾದದ ಮೂಲಕ ದೃಢಸಂಕಲ್ಪ,ಸಾಹಸ, ತ್ಯಾಗ, ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ ಉಭಯ ಗಾಯನಾಚಾರ್ಯರಾಗಿಅದ್ವಿತೀಯ ಪಾಂಡಿತ್ಯವನ್ನು ಹೊಂದಿ ಆ ಪಾಂಡಿತ್ಯವನ್ನು ತಮ್ಮ ಶಿಷ್ಯರಿಗೆ ಧಾರೆ ಎರೆÀದಿದ್ದುಒಂದು ರೋಮಾಂಚನಿಯ ಕಥೆಯಾಗಿದೆ.ವೀರೇಶ್ವರ ಪುಣ್ಯಾಶ್ರಮವು ಪಂಡಿತ ಪಂಚಾಕ್ಷರಿ ಗವಾಯಿಗಳವರ ತಪಸ್ಸಾಧನೆಯಿಂದ ಇಂದು ಭಾರತದ ತುಂಬೆಲ್ಲ ಪ್ರಖ್ಯಾತಿಯನ್ನು ಹೊಂದಿದೆ. ಸ್ವತಃ ಅಂಧರಾಗಿದ್ದಗವಾಯಿಗಳಿಂದ ನೂರಾರು ಅಂಧರು ಸಾರ್ಥಕತೆಯನ್ನು ಹೊಂದಿದ್ದಾರೆ. ಇಂತಹಗವಾಯಿಗಳವರು 11 ಜೂನ್ 1944ರಲ್ಲಿ ಪುಟ್ಟರಾಜ ಗವಾಯಿಗಳವರ ಹೆಸರಿಗೆ ಪುಣ್ಯಾಶ್ರಮವನ್ನು ವರ್ಗಾಯಿಸಿ “ನಮ್ಮಿಂದ ನಡೆದು ಬಂದ ವಿದ್ಯಾದಾನ ರೂಪವಾದ ಈ ಸಮಾಜಸೇವೆಯನ್ನು ನಿಷ್ಠೆಯಿಂದ ಮುಂದುವರೆಸಬೇಕು” ಎಂದು ಅಪ್ಪಣೆ ಕೊಟ್ಟು ಲಿಂಗೈಕ್ಯರಾದರು.ಡಾ.ಪುಟ್ಟರಾಜ ಗವಾಯಿಗಳು ಕನ್ನಡ ನಾಡಿನ ಸಾಂಸ್ಕøತಿಕ ವಲಯದರಾಯಭಾರಿಗಳಂತೆ ಕಾರ್ಯನಿರ್ವಹಿಸಿದ್ದಲ್ಲದೆ ತ್ರಿಭಾಷಾ ಕವಿಯಾಗಿ ಪುರಾಣ ಕಲೆಗಳಲ್ಲಿಪಂಡಿತರೆನಿಸಿದವರು. ಇವರ ಸಾಧನೆಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿಗೌರವಿಸಿದೆ. ಗವಾಯಿಗಳ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯಸಂಘವು ಇಂದಿಗೂಕರ್ನಾಟಕದೆಲ್ಲಡೆ ನಾಟಕ ಪ್ರಯೋಗಗಳನ್ನು ನಡೆಸುತ್ತಿರುವುದು ಅಭಿನಂದನೀಯವಾಗಿದೆ.ದಾವಣಗೆರೆ ನಗರದಲ್ಲಿ ಸುಮಾರು 35 ವರ್ಷಗಳ ಕಾಲ ಶ್ರೀ ಪುಟ್ಟರಾಜ ಗವಾಯಿಗಳವರಪುರಾಣ ಪ್ರವಚನವು ಸಾಂಗೋಪಾಂಗವಾಗಿ ನಡೆದು ದಾವಣಗೆರೆ ಜನತೆಗೆ ಜ್ಞಾನದಾಸೋಹವನ್ನು ಉಣಬಡಿಸಿದೆ. ಈಗಿನ ಶ್ರೀಗಳಾದ ಶ್ರೀ ಕಲ್ಲಜ್ಜಯ್ಯನವರೂ ಸಹ ಈಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಇಂತಹ ಮಹಾಮಹಿಮ ಪುರುಷರ ಸವಿನೆನಪಿನೊಂದಿಗೆ 2001ರಲ್ಲಿ ಶ್ರೀಪುಟ್ಟರಾಜ ಗವಾಯಿಗಳವರ ದಾಖಲೆಯ ತುಲಾಭಾರಗಳೊಂದಿಗೆ ದಾವಣಗೆರೆಯಲ್ಲಿ ಶ್ರೀವೀರೇಶ್ವರ ಪುಣ್ಯಾಶ್ರಮವು ಸ್ಥಾಪನೆಗೊಂಡಿದ್ದು ಅಂಧರ ಬಾಳಿನ ಬೆಳಕಾಗಿದೆ.

Swamiji

Swamiji Name :
ಶ್ರೀ ಪರಮಪೂಜ್ಯ ಕಲ್ಲಯ್ಯ ಅಜ್ಜನವರು

Programs

ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಫೆಬ್ರವರಿ 2 ರಂದು ಪಂಡಿತ ಪಂಚಾಕ್ಷರಿ ಗವಾಯಿಗಳ ಜನ್ಮದಿನೋತ್ಸವ ಆಚರಣೆ.
ಮಾರ್ಚ್ 3 ರಂದು ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮದಿನೋತ್ಸವ ಆಚರಣೆ.
ಕಾರ ಹುಣ್ಣಿಮೆಗೆ ಪಂಡಿತ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ.
ಸೆಪ್ಟೆಂಬರ್ 17 ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ.
ಗುರು ಪುಟ್ಟರಾಜ ಪುರಸ್ಕಾರ

Full Address Kannada

ಶ್ರೀ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ನಗರ,
ಬಾಡ ಕ್ರಾಸ್ ಆವರಗೆರೆ ಪೋಸ್ಟ್ - 577 007
ದಾವಣಗೆರೆ ತಾ||, ಜಿ||

Map

Near by Places

ಆವರಗೆರೆ - 3 ಕಿ.ಮೀ.
ಬಸ್ ನಿಲ್ದಾಣ - 3 ಕಿ.ಮೀ.
ರೈಲು ನಿಲ್ದಾಣ - 5 ಕಿ.ಮೀ.
ಹರಿಹರ - 20 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!