Shree Shrishail Pancharyara Matha

Shree Shrishail Pancharyara Matha Claimed

ಶ್ರೀ ಶ್ರೀಶೈಲ ಪಂಚಾಚಾರ್ಯರ ಮಠ

Average Reviews

Description

ಶ್ರೀಶೈಲ ಪಂಚಾಚಾರ್ಯರ ಮಠ

ಶ್ರೀ ಮದ್ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ

ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ

ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಕನ್ನಡ ನಾಡಿನ ಇತಿಹಾಸದಲ್ಲಿ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್, ವಾಣಿಜ್ಯಹಾಗೂ ವಿದ್ಯಾನಗರಿ ಎಂದೇ ಹೆಸರಾಗಿದೆ. ದಾನಿಗಳ ತವರೂರಾಗಿರುವ ದಾವಣಗೆರೆಯಹಳೇ ಪಿ.ಬಿ.ರಸ್ತೆಯಲ್ಲಿ ವಿನೋಬನಗರಕ್ಕೆ ಹೊಂದಿಕೊಂಡಂತೆ ಸ್ಥಾಪಿಸಲ್ಪಟ್ಟಿರುವ ಶ್ರೀಶೈಲಮಠದ ಶಾಖಾ ಮಠವಾಗಿರುವ ಶ್ರೀಶೈಲ ಪಂಚಾಚಾರ್ಯರ ಮಠವು ದಾವಣಗೆರೆಗೆ ತನ್ನದೇಆದ ಕೊಡುಗೆಯನ್ನು ನೀಡಿದೆ.ಶ್ರೀಮಠವನ್ನು ಕಲ್ಲೇದೇವರ ಪುರದ ದಿ|| ಶ್ರೀ ಕಲ್ಲಪ್ಪ ಮತ್ತು ಇವರ ಧರ್ಮಪತ್ನಿಶ್ರೀಮತಿ ನಿಂಗಮ್ಮ ಇವರ ಸ್ಮರಣಾರ್ಥ ಇವರ ಮಗ ಶ್ರೀ ಕೆ.ದಾನಪ್ಪ ಇವರ ಧರ್ಮಪತ್ನಿಶ್ರೀಮತಿ ಸಂಗಮ್ಮ ಇವರುಗಳು ಶ್ರೀ ಕೆ.ಟಿ.ಜಂಬಣ್ಣನವರ ಕಾಲದಲ್ಲಿ ನೀಡಲಾದನಿವೇಶನದಲ್ಲಿ 29-04-1979 ರಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಭಕ್ತರು ಮಠದ ಆವರಣದಲ್ಲಿಒಂದು ಬಾವಿಯನ್ನು ಹಾಗೂ ಸುತ್ತಲೂ ವ್ಯಾಪಾರೀ ಮಳಿಗೆಗಳನ್ನು ಕಟ್ಟಿಸಿಕೊಟ್ಟು ಮಠಕ್ಕೆಶಾಶ್ವತ ಆದಾಯ ಬರುವಂತೆ ಮಾಡಿದ್ದಾರೆ.ಶ್ರೀಮಠದಲ್ಲಿ ಪಂಚಪೀಠದ ರೇಣುಕರ ಸುಂದರ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.ಹಾಗೂ ಮುಂಭಾಗದಲ್ಲಿ ಸುಂದರವಾದ ನಂದಿಯ ವಿಗ್ರಹವಿದೆ. ಶ್ರೀಮಠವು ಶ್ರೀಶೈಲ ಪೀಠದಕೊನೆಯ ಇಬ್ಬರೂ ಜಗದ್ಗುರುಗಳ ಐಕ್ಯ ಸ್ಥಳವಾಗಿದ್ದು ಶ್ರೀಮಠದಲ್ಲಿ ಅವರ ಗದ್ದುಗೆಗಳುನಿರ್ಮಾಣಗೊಂಡಿವೆ. ಈಗ ಶ್ರೀಮಠದ ಸಂಪೂರ್ಣ ಅಧಿಕಾರವು ಶ್ರೀ ಶೈಲ ಜಗದ್ಗುರುಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಸೇರಿದೆ.ಶ್ರೀಮಠದಲ್ಲಿ ಭಾದ್ರಪದ ದ್ವಾದಶ ತಿಥಿಗೆ ಲಿಂ. ಉಭಯ ಶ್ರೀಗಳ ಪುಣ್ಯಾರಾಧನೆ ಮಹೋತ್ಸವಜರುಗುತ್ತಿದ್ದು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗುತ್ತಾರೆ.ಶ್ರೀ ಮಠದ ಶಾಖಾ ಮಠ ಹಾಗು ಬೃಹತ್ ಶೈಕ್ಷಣಿಕ ಸಂಸ್ಥೆ ಹರಿಹರದಲ್ಲಿ ಸ್ಥಾಪಿಸಲ್ಪಟ್ಟಿದೆ.

ವಿಶೇಷತೆ:

ಶ್ರೀಮಠವು ಹಿಂದಿನ ಇಬ್ಬರೂ ಶ್ರೀಶೈಲ ಜಗದ್ಗುರುಗಳವರ ಸಮಾಧಿ ಸ್ಥಳ.

ಶ್ರೀಶೈಲ ಜಗದ್ಗುರುಗಳ ಕರ್ನಾಟಕದಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರ.

ಶ್ರೀಮಠದ ಆವರಣದಲ್ಲಿ ಕಲ್ಯಾಣ ಮಂಟಪವಿದ್ದು, ಶುಭ ಸಮಾರಂಭಗಳು ಜರುಗುತ್ತವೆ.

Swamiji

Swamiji Name :
ಶ್ರೀ ಮದ್ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

Programs

ಪ್ರತಿ ತಿಂಗಳು ಧಾರ್ಮಿಕ ಸಭೆಗಳ ಆಯೋಜನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಪ್ರಸಾದ.
ದಸರಾದಲ್ಲಿ ಶರನ್ನವರಾತ್ರಿ ಕಾರ್ಯಕ್ರಮಗಳು (ಕರ್ನಾಟಕದ ನಾನಾ ಭಾಗಗಳಲ್ಲಿ).
ಭಾದ್ರಪದ ದ್ವಾದಶ ತಿಥಿಗೆ ಶ್ರೀಶೈಲ ಜಗದ್ಗುರುಗಳಾದ ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಲಿಂ.ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಗಳವರ ಪುಣ್ಯಾರಾಧನೆ. (ಐದು ದಿನ ವಿವಿಧ ಧಾರ್ಮಿಕ, ಸಾಂಸೃತಿಕ ಕಾರ್ಯಕ್ರಮಗಳು).

Full Address Kannada

ಶ್ರೀ ಶ್ರೀಶೈಲ ಪಂಚಾಚಾರ್ಯರ ಮಠ
ವಿನೋಬ ನಗರ, ಹಳೇ ಪಿ.ಬಿ. ರಸ್ತೆ
ದಾವಣಗೆರೆ - 577 006.

Map

Near by Places

ಹರಿಹರ - 15 ಕಿ.ಮೀ.
ಚನ್ನಗಿರಿ - 58 ಕಿ.ಮೀ.
ಆನಗೋಡು - 18 ಕಿ.ಮೀ.
ಜಗಳೂರು - 50 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!