ಶ್ರೀ ಗುರು ಬಕ್ಕೇಶ್ವರ ಮಹಾಸ್ವಾಮಿಗಳು ಸುಮಾರು 18-19ನೇ ಶತಮಾನದಲ್ಲಿಜೀವಿಸಿದ್ದರೆಂದು ನಂಬಲಾಗಿದ್ದು ಶ್ರೀ ಪಂಚಾಕ್ಷರಿ ಗವಾಯಿಗಳು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದಂತೆ ಶ್ರೀ ಬಕ್ಕೇಶ್ವರರು ಸುಮಾರು 1770 ರಿಂದ 1853 ರವರೆಗೆ ಜೀವಿಸಿದ್ದರೆಂದುಹೇಳಬಹುದು. ಶ್ರೀಗಳು ದಾವಣಗೆರೆ ತಾಲ್ಲೂಕು ಗುಮ್ಮನೂರಿನಿಂದ ಬಾಲಮೂರ್ತಿಯಾಗಿಲೋಕಸಂಚಾರ ಮಾಡುತ್ತಾ ತಮ್ಮ ಮಧ್ಯವಯಸ್ಸಿನಲ್ಲಿ ದಾವಣಗೆರೆಗೆ ಬಂದಿರಬಹುದು.ಚಿತ್ರದುರ್ಗದ ಬೃಹನ್ಮಠದ ಒಂದು ಗ್ರಂಥದಲ್ಲಿ, ಇವರು ಕೆಲವು ಕಾಲ ಚಿತ್ರದುರ್ಗದಬೃಹನ್ಮಠದಲ್ಲಿ ಹಾಗೂ ಅಲ್ಲಿಯ ಅಂಕಲಿಮಠದಲ್ಲಿ ಅನುಷ್ಠಾನದಲ್ಲಿದ್ದರೆಂಬ ಉಲ್ಲೇಖವಿದೆ.ಶ್ರೀಗಳು ಆಗಿನ ಹೆಬ್ಬಾಳು ಮಠದ ಗುರುಗಳಾದ ಶ್ರೀ ರುದ್ರಸ್ವಾಮಿಗಳೊಂದಿಗೆ ಉತ್ತಮಸಂಬಂಧ ಹೊಂದಿದ್ದು, ಪರಸ್ಪರ ಗೌರವಯುತವಾಗಿ ಇದ್ದರೆಂಬುದು ತಿಳಿದುಬರುತ್ತದೆ.ಶ್ರೀಗಳು ಪವಾಡಪುರುಷರಾಗಿದ್ದು, ದಾವಣಗೆರೆಯ ಹಲವಾರು ಸಮಸ್ಯೆಗಳಿಗೆಹಾಗೂ ಸಾಂಕ್ರಾಮಿಕ ರೋಗಗಳಿಗೆ ಪರಿಹಾರ ಮಾಡುತ್ತಿದ್ದರು. ಶ್ರೀಗಳು ದಾವಣಗೆರೆಯಲ್ಲಿಶಿವಾನುಭವ ಗೋಷ್ಠಿ, ಗಣಾರಾಧನೆ ಇತ್ಯಾದಿಗಳನ್ನು ನಡೆಸಿದ್ದಾರೆ. ಇಲ್ಲಿನ ಶಿವಾನುಭವಗೋಷ್ಠಿಗಳಿಗೆ ಹೆಬ್ಬಾಳಿನ ಶ್ರೀಗಳು ಹಾಗೂ ಚಿತ್ರದುರ್ಗ ಬೃಹನ್ಮಠದ ಶ್ರೀ ಸಣ್ಣ ಬರಹದರಾಚವಟ್ಟಿ ಮುರುಘರಾಜೇಂದ್ರ ಸ್ವಾಮಿಗಳು ಆಗಮಿಸುತ್ತಿದ್ದರೆಂದು ತಿಳಿದುಬರುತ್ತದೆ.ಶ್ರೀ ಶಿವಯೋಗಿ ಬಕ್ಕೇಶ್ವರರು ಐಕ್ಯರಾಗುವ ವೇಳೆಗೆ ವೃದ್ಧರಾಗಿರಬೇಕು,ಆದ್ದರಿಂದ ಶ್ರೀಗಳು ವಯೋವೃದ್ಧರಾಗಿ ಕಾವಿಯ ನಿಲುವಂಗಿ, ತಲೆಗೆ ಕಾವಿಯ ರುಮಾಲುಅದರ ಮೇಲೆ ಗೊಪ್ಪೆಯಂತೆ ಕಾವಿ ಬಟ್ಟೆ ಹೊದ್ದು ಪಾದಕ್ಕೆ ಆವುಗೆ ಮೆಟ್ಟು, ಕೈಯಲ್ಲಿ ಬೆತ್ತಹಿಡಿದು ನಡೆದಾಡುತ್ತಿದ್ದರು ಎಂಬಂತೆ ಕಲಾವಿದರು ಚಿತ್ರಿಸಿದ್ದಾರೆ. ಶ್ರೀಗಳು ಐಕ್ಯವಾಗುವಕಾಲಕ್ಕೆ ಚಿತ್ರದುರ್ಗದ ಶ್ರೀಗಳಾದ ಸಣ್ಣಪಾದದ ಶ್ರೀ ಚನ್ನವೀರರು ಆಗಮಿಸಿದ್ದರೆಂದುಹೇಳಲಾಗಿದೆ. ಇವರ ಕಾಲ 1840-1860. ಶ್ರೀ ಬಕ್ಕೇಶ್ವರರ ಗದ್ದುಗೆ ಮೇಲೆ ದೇವಾಲಯಕಟ್ಟಿರುವ ಕಾಲನಿರ್ಣಯ 1902 ಇರಬಹುದೆಂದು ಅಂದಾಜು. ಕೇವಲ ಎರಡು ಶತಮಾನಗಳ ಹಿಂದೆ ಇದ್ದಂತಹ ಒಬ್ಬ ಮಹಾಶಿವಶರಣ ಭಕ್ತರಿಗೆ ದೈವಾಂಶ ಸಂಭೂತರಾಗಿ ನಂಬಿದಭಕ್ತರ ಇಷ್ಟಾರ್ಥ ಸಿದ್ಧಿಸುವ ಮಹಾ ದೈವವಾಗಿ ನೆಲೆಗೊಂಡಿರುವುದು ಆಶ್ಚರ್ಯವೇ ಸರಿ.
ಸಂಘಗಳು
ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾಸಂಘ (ರಿ.),
ಸ್ಥಾಪನೆ-1972
ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಭಜನಾ ಮಂಡಳಿ ಸಂಘ.
Swamiji
Swamiji Name :
ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳು
Date of Birth :
1770-1853
Place :
ಗುಮ್ಮನೂರು, ದಾವಣಗೆರೆ.
Programs
ನಿತ್ಯ ರುದ್ರಾಭಿಷೇಕ, ಆರಾಧನೆ.
ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ.
ಚೈತ್ರಮಾಸದಲ್ಲಿ ರಥೋತ್ಸವ, ನಂದಿವಾಹನೋತ್ಸವ, ಗಜವಾಹನೋತ್ಸವ. ಪ್ರತೀವರ್ಷ ಪುಷ್ಯ ಮಾಸದಲ್ಲಿ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗುರುಗಳಿಂದ ಒಂದು ತಿಂಗಳು ಪ್ರವಚನ.