ದಾವಣಗೆರೆ ನಗರದ ಕೇಂದ್ರ ಭಾಗದಲ್ಲಿರುವ ಚಿತ್ರದುರ್ಗ ಶ್ರೀ ಮುರುಘಾಮಠದಶಾಖಾಮಠವಾದ ಶ್ರೀ ವಿರಕ್ತಮಠವು ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಾಬಂದಿದೆ. ಚಿತ್ರದುರ್ಗದ ಶ್ರೀ ಜಯದೇವ ಜಗದ್ಗುರುಗಳು (1903-1956) ಶ್ರೀ ವಿರಕ್ತಮಠದಮುಖಾಂತರ ಸರ್ವಸಮಾಜದವರಿಗೂ ಮಾರ್ಗದರ್ಶನ ನೀಡಿ ಭಕ್ತರನ್ನುದ್ಧರಿಸಿದ್ದುಜಗದ್ಗುರುಗಳ ಸಮಾಧಿ ಗದ್ದುಗೆಯು ದಾವಣಗೆರೆಯ ಶ್ರೀ ಶಿವಯೋಗಾಶ್ರಮದಲ್ಲಿದೆ. ಇವರಕರ್ತೃತ್ವ ಶಕ್ತಿಯಿಂದಾಗಿ ಇಂದಿಗೂ ಶ್ರೀಗಳು ದಾವಣಗೆರೆಯ ಜನರಿಗೆ ದೈವಸ್ವರೂಪಿಗಳಾಗಿಮಾರ್ಗದರ್ಶನ ನೀಡುತ್ತಿರುವುದು ನಮ್ಮ ಸುದೈವವೇ ಸರಿ.ಶ್ರೀ ಜಯದೇವ ಜಗದ್ಗುರುಗಳು ವಿರಕ್ತಮಠಕ್ಕೆ 1906ರಲ್ಲಿ ಶ್ರೀ ಮೃತ್ಯುಂಜಯಅಪ್ಪಗಳನ್ನು ಪೀಠಾಧಿಪತಿಗಳನ್ನಾಗಿ ಮಾಡಿದರು. ಮೃತ್ಯುಂಜಯ ಅಪ್ಪಗಳು ವಿರಕ್ತಮಠದಲ್ಲಿ1911ರಲ್ಲಿ ‘ಭಜನಾ ಸಂಘ’ವನ್ನು, ಮತ್ತು ಅದೇ ವರ್ಷ ಕರ್ನಾಟಕದ ಗಾಂಧಿ ಹರ್ಡೇಕರ್ಮಂಜಪ ್ಪನವರೊಂದಿಗೆ ಚರ್ಚಿಸಿ ‘ಶ್ರಾವಣ ಮಾಸೋಪಾನ್ಯಾಸ ಮಾಲೆ’ಯನ್ನುಪ್ರಾರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಶ್ರೀವಿರಕ್ತ ಮಠದಲ್ಲಿ ಶ್ರಾವಣ ಮಾಸದಪುರಾಣ ಪ್ರವಚನ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆಯುತ್ತಾ ಬಂದಿವೆ.ದೇಶದಲ್ಲೇ ಪ್ರಥಮ ಬಾರಿಗೆ 1913ರಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು ಹಾಗೂ ಕರ್ನಾಟಕದಗಾಂಧಿ ಹರ್ಡೇಕರ್ ಮಂಜಪ್ಪನವರು ವಿಶ್ವಗುರು “ಬಸವ ಜಯಂತಿ”ಯನ್ನು ಆಚರಿಸಿದರೆಂಬುದು ಇತಿಹಾಸವಾಗಿದೆ. ಇದು ನಮ್ಮ ದಾವಣಗೆರೆ ಜನರಿಗೆ ಹೆಮ್ಮೆಯ ಸಂಗತಿ.ಈಗಿನ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮಿಗಳು 2008 ರಲ್ಲಿ ನೇಮಕಗೊಂಡುಮಠವನ್ನು ಅಬಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಹಾಗೂ ಶಿವಯೋಗಾಶ್ರಮವನ್ನುದಾವಣಗೆರೆಯ ಜನರಿಗೆ ಹೆಮ್ಮೆಯ ಸಾಂಸ್ಕøತಿಕ ಹೆಗ್ಗುರುತಾಗಿ ಉಳಿಸಲು ಪಣ ತೊಟ್ಟಿದ್ದಾರೆ.ಶ್ರೀಗಳು 2011ರಲ್ಲಿ ಶ್ರಾವಣ ಮಾಸೋಪಾನ್ಯಾಸ ಮಾಲೆಯ ಶತಮಾನೋತ್ಸವಸಮಾರಂಭವನ್ನು ಒಂದು ತಿಂಗಳುಗಳ ಕಾಲ ಪ್ರವಚನ ನಡೆಸುವುದರ ಮೂಲಕಸಾರ್ಥಕಗೊಳಿಸಿದ್ದಾರೆ. 2013ರಲ್ಲಿ ಬಸವಜಯಂತಿ ಶತಮಾನೋತ್ಸವ ಆಚರಣೆಮಾಡುವುದರ ಮೂಲಕ ವಿಶ್ವಗುರು ಬಸವಣ್ಣನವರ ಹಾಗೂ ಶ್ರೀಮೃತ್ಯುಂಜಯ ಅಪ್ಪಗಳಆಶೋತ್ತರಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Swamiji
Swamiji Name :
ಶ್ರೀ ಬಸವಪ್ರಭು ಸ್ವಾಮಿಗಳು
Date of Birth :
29-07-1982
Place :
ಅಗಡಿ ಹಾವೇರಿ ತಾ||
Photo :
Programs
ಪ್ರತಿ ತಿಂಗಳು 3ರಂದು ‘ಶರಣ ಸಂಗಮ'.
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನದ ಜೊತೆಗೆ “ಜಯದೇವ ಜೋಳಿಗೆ”
ದುಶ್ಚಟಗಳನ್ನು ಭಿಕ್ಷೆ ಬೇಡುವ ಕಾರ್ಯಕ್ರಮ.
ಜೂನ್-ಜುಲೈನಲ್ಲಿ ಶಾಲಾಮಕ್ಕಳಿಗೆ ಶ್ರೀಗಳಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ.
ಆಶ್ವೀಜ ಮಾಸದಲ್ಲಿ ಶ್ರೀ ಜಯದೇವ ಜಗದ್ಗುರುಗಳ ರಥೋತ್ಸವ (ಶಿವಯೋಗಾಶ್ರಮದಲ್ಲಿ)
ಕಾರ್ತಿಕ ಮಾಸದಲ್ಲಿ ನಿತ್ಯ ಭಕ್ತರ ಮನೆಗಳಲ್ಲಿ ‘ಅರಿವಿನ ಅಂಗಳ' ಶಿವಾನುಭವ ಕಾರ್ಯಕ್ರಮ.
‘ಬಸವ ಜಯಂತಿ' ಆಚರಣೆ ಮತ್ತು ವೀರಶೈವ ತರುಣ ಸಂಘದೊಂದಿಗೆ ‘ಬಸವ ಪ್ರಭಾತ್ಪೇರಿ'. ಆರೋಗ್ಯ, ಪರಿಸರ ಇನ್ನೂ ಮುಂತಾದ ಶಿಬಿರಗಳ ಆಯೋಜನೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ವಿದ್ಯಾರ್ಥಿ ನಿಲಯ
Photos
Full Address Kannada
ಬಸವ ಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ
ದೊಡ್ಡ ಪೇಟೆ, ದಾವಣಗೆರೆ - 577 001