Shree viraktamatha, Pandomatti

Shree viraktamatha, Pandomatti Claimed

ಶ್ರೀ ವಿರಕ್ತಮಠ, ಪಾಂಡೋಮಟ್ಟಿ

Average Reviews

Description

ಶ್ರೀ ವಿರಕ್ತಮಠ, ಪಾಂಡೋಮಟ್ಟಿ

ಕರ್ತೃ ಶ್ರೀ ಮ.ನಿ.ಪ್ರ. ಸಂಗಮನಾಥ ಮಹಾಸ್ವಾಮಿಗಳು

1961ರಲ್ಲಿ ಶ್ರೀ ಮಠದ ಕರ್ತೃಗಳಾದ ಶ್ರೀ ಸಂಗಮನಾಥ ಸ್ವಾಮಿಗಳುಕಮ್ಮತ್ತಹಳ್ಳಿಯಿಂದ ಹೊರಟು ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿ ಕೆಲವು ಬಿಲ್ಲಹಳ್ಳಿಯಲ್ಲಿಅನುಷ್ಠಾನಗೊಂಡು ಪಾಂಡೋಮಟ್ಟಿಗೆ ಆಗಮಿಸಿ ಈಗಿನ ಶ್ರೀವಿರಕ್ತಮಠವನ್ನು ಸ್ಥಾಪಿಸಿದರು.ಆದರೆ ಶ್ರೀಗಳು ವಿರಕ್ತಮಠ ಸ್ಥಾಪಿಸಿ ಮರುವರ್ಷವೇ 1962 ರಲ್ಲಿ ಲಿಂಗೈಕ್ಯರಾದರು.ಬಿಲ್ಲಹಳ್ಳಿ ಮಠದಲ್ಲಿ ಅನುಷ್ಠಾನಗೊಂಡಿದ್ದ ಶ್ರೀ ಸಂಗಮನಾಥ ಸ್ವಾಮಿಗಳು 1956ರಲ್ಲಿ ಬಿಲ್ಲಹಳ್ಳಿ ಮಠಕ್ಕೆ ಶ್ರೀ ಚನ್ನಬಸವ ಸ್ವಾಮಿಗಳನ್ನು ಪಟ್ಟಾಧಿಕಾರ ಮಾಡಿದ್ದರು. ಶ್ರೀಚನ್ನಬಸವ ಸ್ವಾಮಿಗಳು ಗುರುಗಳು ಲಿಂಗೈಕ್ಯರಾದ ನಂತರ ಪಾಂಡೋಮಟ್ಟಿಗೆ ಆಗಮಿಸಿಗುರುಗಳ ಕನಸಾದ ಶ್ರೀವಿರಕ್ತಮಠವನ್ನು ಆಧ್ಯಾತ್ಮ ಸಾಧನೆಯಿಂದ ಧಾರ್ಮಿಕವಾಗಿಮುನ್ನಡೆಸಿದರು. ಗುರುಗಳು ಯಾವತ್ತೂ ಕೂಡ ಲೌಕಿಕ ವಿಚಾರಗಳ ಕಡೆಗೆ ಗಮನ ಕೊಡದೆಮಠದ ಭಕ್ತರಿಗೆ ಸದಾ ಶರಣ ತತ್ವ ವಿಚಾರಗಳನ್ನು ತಿಳಿಸಿಕೊಡುತ್ತ ಮುನ್ನಡೆದಿದ್ದರಿಂದಮಠವು ಆರ್ಥಿಕವಾಗಿ ಹಿಂದುಳಿಯಿತು, ಆದರೆ ಧಾರ್ಮಿಕವಾಗಿ ಬಹಳ ಮುಂದುವರೆಯಿತು.ಶ್ರೀಗಳು 1983ರಲ್ಲಿ ಗರಗ ಗ್ರಾಮದ ಶ್ರಿಗುರುಬಸವ ಸ್ವಾಮಿಗಳಿಗೆ ಪಟ್ಟಾಧಿಕಾರಮಾಡಿ ತಾವು ಧಾರ್ಮಿಕ ವಿಚಾರಗಳ ಕಡೆಗೆ ಗಮನ ಕೊಡುತ್ತ ವಿಶ್ರಾಂತ ಜೀವನಕ್ಕೆತೆರಳಿದರು. ಈಗಿನ ಶ್ರೀಗಳಾದ ಶ್ರೀಗುರುಬಸವ ಸ್ವಾಮಿಗಳು ಮಠಕ್ಕೆ ಆಗಮಿಸಿ ಮಠವನ್ನುಧಾರ್ಮಿಕ ಕಾರ್ಯಗಳ ಜೊತೆಗೆ ಶೈಕ್ಷಣಿಕವಾಗಿ ಹಾಗು ಆರ್ಥಿಕವಾಗಿ ಅಭಿವೃದ್ಧಿ ಪಥದತ್ತಕೊಂಡೊಯ್ದಿದ್ದಾರೆ.

ವಿಶೇಷತೆಗಳು:

ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಸಮಾಜ ಸೇವಾಶ್ರೀ’-ಸಾಮಾಜಿಕವಾಗಿ ಹಾಗೂ

ವಿಶೇಷವಾಗಿ ಶ್ರೀಮಠದ ಶ್ರೀಗಳ ಸಮ್ಮುಖದಲ್ಲಿ ‘ಮಹಿಳಾ ಸಾಂತ್ವನ ಕೇಂದ್ರ’ದ ನಿರ್ವಹಣೆ.

ಅಲ್ಲಮಪ್ರಭುದೇವ ಪ್ರಕಾಶನ-25 ಪುಸ್ತಕಗಳ ಪ್ರಕಟಣೆ.

 ‘ಗುರುಶ್ರೀ’-ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ.

Swamiji

Swamiji Name :
ಶ್ರೀ ಗುರುಬಸವ ಮಹಾಸ್ವಾಮಿಗಳು
Date of Birth :
1-5-1969
Place :
ಗರಗ ಚನ್ನಗಿರಿ ತಾ||
Pattadikara :
22-11-1983
Photo :

Programs

ಪ್ರತಿ ತಿಂಗಳ 3ನೇ ಶನಿವಾರ ಮಾಸಿಕ ಶಿವಾನುಭವ ಗೋಷ್ಠಿ.
ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನ.
ಬೇಸಿಗೆ ಶಿಬಿರದಲ್ಲಿ ಧಾರ್ಮಿಕ ಸಭೆಗಳು ಮತ್ತು ಆರೋಗ್ಯ ಶಿಬಿರಗಳ ಆಯೋಜನೆ.

Institutions

ಬಸವ ವಿದ್ಯಾಪೀಠ (ರಿ.)
ಒಟ್ಟು ವಿದ್ಯಾರ್ಥಿಗಳು 1476.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ವಿರಕ್ತ ಮಠ,
ಪಾಂಡೋಮಟ್ಟಿ - 577 213
ಚನ್ನಗಿರಿ ತಾ., ದಾವಣಗೆರೆ ಜಿ.

Map

Near by Places

ಬೆಂಕಿಕೆರೆ ಕ್ರಾಸ್ - 8 ಕಿ.ಮೀ
ಚನ್ನಗಿರಿ - 8 ಕಿ.ಮೀ
ದಾವಣಗೆರೆ - 58 ಕಿ.ಮೀ

Statistic

11 Views
0 Rating
0 Favorite
0 Share
error: Content is protected !!