ಚನ್ನಗಿರಿಯ ಮಧ್ಯಭಾಗದಲ್ಲಿ ಶ್ರೀ ಮುರುಘಾಮಠದ ಶಾಖಾಮಠವಾದ ಶ್ರೀಹಾಲಸ್ವಾಮಿ ವಿರಕ್ತಮಠವು ಸ್ಥಾಪನೆಗೊಂಡಿದೆ. ಈ ಮಠವನ್ನು ಶ್ರೀ ಹಾಲಸ್ವಾಮಿಗಳುಸ್ಥಾಪನೆ ಮಾಡಿರುವುದರಿಂದ ಮಠಕ್ಕೆ ಶ್ರೀ ಹಾಲಸ್ವಾಮಿ ವಿರಕ್ತಮಠ ಎಂದು ಹೆಸರು ಬಂದಿದೆ.ಚಿತ್ರದುರ್ಗದ ಬೃಹನ್ಮಠದಲ್ಲಿ ತಪೋನುಷ್ಠಾನ ಕೈಗೊಂಡಿದ್ದ ಶ್ರೀ ಹಾಲಸ್ವಾಮಿಗಳು ಲೋಕಸಂಚಾರ ಕೈಗೊಂಡು ಚನ್ನಗಿರಿಗೆ ಬಂದರು. ಚನ್ನಗಿರಿ ಕಲ್ಮಠದಲ್ಲಿ ನೆಲೆಸಿದ್ದ ಶ್ರೀಶಿವಲಿಂಗೇಶ್ವರರ ದರ್ಶನ ಪಡೆದು ಕಲ್ಮಠದಲ್ಲಿ ಕೆಲದಿನ ಅನುಷ್ಠಾನಗೊಂಡು ಚನ್ನಗಿರಿಯಲ್ಲಿಯೇ ಉಳಿಯಲು ನಿರ್ಧರಿಸಿ ಪ್ರತ್ಯೇಕ ವಿರಕ್ತಮಠ ಸ್ಥಾಪಿಸಿದರು. ಕಾಲಾನಂತರಶ್ರೀಕಲ್ಮಠವನ್ನು ಶ್ರೀ ಹಾಲಸ್ವಾಮಿ ವಿರಕ್ತಮಠದ ಸ್ವಾಮಿಗಳೇ ಆಡಳಿತ ನಡೆಸಿಕೊಂಡುಬಂದಿದ್ದು ಗಮನಾರ್ಹ ಸಂಗತಿ.ಶ್ರೀ ಹಾಲಸ್ವಾಮಿಗಳು ಲಿಂಗೈಕ್ಯರಾದ ನಂತರ ಅಧಿಕಾರಕ್ಕೆ ಬಂದ ಶ್ರೀಕಂಠಸ್ವಾಮಿಗಳು ಎರಡೂ ಮಠಗಳನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬಂದರು. ಇವರು ಲಿಂಗೈಕ್ಯರಾದ ನಂತರ ಮಠಾಧೀಶರಿಲ್ಲದೆಮಠವು ಖಾಲಿ ಉಳಿಯಿತು. ಕೆಲಸಮಯದ ನಂತರ ಭಕ್ತರ ಒತ್ತಾಸೆಯಂತೆ ಶ್ರೀ ಹಾಲಸ್ವಾಮಿಮಠದ ಉತ್ತರಾಧಿಕಾರಿಗಳಾಗಿ 1985ರ ನವೆಂಬರ್ 25 ರಂದು ಶ್ರೀ ಜಯದೇವ ಸ್ವಾಮಿಗಳುಚಿತ್ರದುರ್ಗ ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ಧಾರವಾಡದ ಶ್ರೀಮಹಾಂತಪ್ಪನವರಿಂದ ಅನುಗ್ರಹ ಪಡೆದು ಅಧಿಕಾರವನ್ನು ವಹಿಸಿಕೊಂಡರು.ಶ್ರೀ ಜಯದೇವ ಸ್ವಾಮಿಗಳು ಅಧಿಕಾರ ಪಡೆದ ಮೇಲೆ ಶ್ರೀಮಠದ ಕಟ್ಟಡವನ್ನುನೂತನವಾಗಿ ನಿರ್ಮಿಸಿ ಜೊತೆಯಲ್ಲಿ ಶ್ರೀ ಕಲ್ಮಠದಲ್ಲಿ ಭೋಜನ ಶಾಲೆಯನ್ನು ನಿರ್ಮಿಸಿದರು.ಶ್ರೀ ಜಯದೇವ ಸ್ವಾಮಿಗಳು ಅಧಿಕಾರಕ್ಕೆ ಬಂದಂದಿನಿಂದ ಭಕ್ತರಲ್ಲಿ ಧರ್ಮಜಾಗೃತಿಯನ್ನುಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಚನ್ನಗಿರಿ ಪಟ್ಟಣದಲ್ಲಿ ಪ್ರಥಮ ದರ್ಜೆಕಾಲೇಜಿನ ನಿರ್ಮಾಣಕ್ಕೆ ಬೇಕಾದ ನಾಲ್ಕೂವರೆ ಎಕರೆ ಜಮೀನನ್ನು ಕರ್ನಾಟಕ ರಾಜ್ಯಸರ್ಕಾರಕ್ಕೆ ದಾನವಾಗಿ ಕೊಟ್ಟಿದ್ದು, ಕಾಲೇಜಿಗೆ ಶ್ರೀ ಗುರು ಶಿವಲಿಂಗೇಶ್ವರ ಸ್ವಾಮಿಗಳ ಸರ್ಕಾರಿಪ್ರಥಮ ದರ್ಜೆ ಕಾಲೇಜು ಎಂದು ನಾಮಾಂಕಿತವಾಗಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಯದೇವ ಮಹಾಸ್ವಾಮಿಗಳು ಊರ ಒಳಗೆ ಮಠ
Date of Birth :
1945
Place :
ಚನ್ನಾಪುರ ಚನ್ನಗಿರಿ ತಾ||
Pattadikara :
25-11-1985
Photo :
Programs
ಪ್ರತಿ ಅಮಾವಾಸ್ಯೆಗೆ ಅಭಿಷೇಕ ಮತ್ತು ಪೂಜೆ.
ಕಾರ್ತಿಕ ಮಾಸದಲ್ಲಿ ಶ್ರೀ ಮಹೇಶ್ವರ ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ-ಪ್ರವಚನ.
ಮಹಾಶಿವರಾತ್ರಿಗೆ ಕಲ್ಮಠದಲ್ಲಿ ಜಾಗರಣೆ ಮತ್ತು ಭಜನೆ.
ನವರಾತ್ರಿಗೆ ಕಲ್ಮಠದಲ್ಲಿ ನಿತ್ಯ ವಿಶೇಷ ಪೂಜೆ.
Photos
Full Address Kannada
ಶ್ರೀ ಹಾಲಸ್ವಾಮಿ ವಿರಕ್ತಮಠ
ಚನ್ನಗಿರಿ - 577 213 ದಾವಣಗೆರೆ ಜಿ||