ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಯ್ಯನ ಕೋಟೆ ಗ್ರಾಮವುತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿಸ್ಥಾಪಿತಗೊಂಡಿರುವ ಶ್ರೀ ಗುರುಮಹಾಂತ ಮಠವು ಇಳಕಲ್ಲು ಶ್ರೀ ವಿಜಯಮಹಾಂತಮಠದ ಶಾಖಾಮಠವಾಗಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀ ಗುರುಮಹಾಂತ ಮಠವನ್ನು 1998ರ ಏಪ್ರಿಲ್ 21 ರಲ್ಲಿ ಸ್ಥಾಪಿಸಲಾಗಿದ್ದುಶ್ರೀಮಠವು ಬಸವಾದಿ ಶರಣರ ಕಲ್ಪನೆಯಂತೆ ಶರಣ ತತ್ವದ ಪ್ರಸಾರ ಕಾರ್ಯದಲ್ಲಿತೊಡಗಿಕೊಂಡಿದೆ. ಶ್ರೀ ಚಿತ್ತರಗಿ-ಇಳಕಲ್ಲು ಶ್ರೀ ವಿಜಯಮಹಾಂತ ಮಠದ ಗುರುಗಳಾದಪೂಜ್ಯ ಶ್ರೀ ಮಹಾಂತ ಮಹಾಸ್ವಾಮಿಗಳ ಪ್ರಭಾವವು ಈ ಭಾಗದಲ್ಲಿ ಹೆಚ್ಚಿದ್ದು, ಹೆಚ್ಚಿನಸಂಖ್ಯೆಯ ಭಕ್ತರು ಇಳಕಲ್ಲು ಮಠದ ಭಕ್ತರಾಗಿದ್ದರು. ಇಂತಹ ಭಕ್ತರಲ್ಲಿ ಒಬ್ಬರು ಶ್ರೀಮಠಕ್ಕೆಭೂದಾನ ಕೊಟ್ಟು ಈ ಭಾಗದಲ್ಲಿ ಮಠ ಸ್ಥಾಪನೆಯಾಗಲು ಕಾರಣರಾದರು. ಶ್ರೀಮಠಕ್ಕೆಇಳಕಲ್ಲು ವಿಜಯಮಹಾಂತ ಮಠದಿಂದ ಶ್ರೀ ಬಸವಲಿಂಗ ಸ್ವಾಮಿಗಳನ್ನು ನಿಯೋಜನೆಗೊಳಿಸಿದ್ದು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಪರಿಶಿಷ್ಟ ವರ್ಗದ ಸಂಸ್ಕಾರವಂತ ವಟುವನ್ನು ಆಯ್ಕೆ ಮಾಡಿಕೊಂಡ ಇಳಕಲ್ಲಶ್ರೀ ಮಹಾಂತ ಸ್ವಾಮಿಗಳು ಶರಣತತ್ವದ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ತದನಂತರಆ ವಟುವಿಗೆ ಶ್ರೀ ಬಸವಲಿಂಗ ಸ್ವಾಮಿಗಳೆಂಬ ಅಭಿದಾನವನ್ನಿತ್ತು ಶ್ರೀ ಗುರುಮಹಾಂತಮಠಕ್ಕೆ ನಿಯೋಜಿಸಿದ್ದಾರೆ. ಪ್ರಾರಂಭದಲ್ಲಿ ವಿರೋಧ ಕಂಡುಬಂದ ಈ ನಿರ್ಧಾರಕಾಲಕ್ರಮೇಣ ಸಮ್ಮತವಾಗಿದೆ.ಶ್ರೀಮಠದಲ್ಲಿರುವ ಗದ್ದುಗೆಗಳಿಗೆ ಪೂಜೆಯ ಬದಲಿಗೆ ಗದ್ದುಗೆಗಳ ಮೇಲೆವಚನಗಳ ಕಟ್ಟನ್ನು ಇಟ್ಟು ವಚನ ಪಠಣ ಮಾಡುವ ಮೂಲಕ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಮತ್ತು ಶಿವಾನುಭವಗೋಷ್ಠಿಗಳ ಮೂಲಕ ಶರಣ ಸಾಹಿತ್ಯದ ಬಗ್ಗೆ ಜನರಿಗೆ ಅರಿವುಮೂಡಿಸಲಾಗುತ್ತಿದೆ. ಹಾಗೂ ಫೆಬ್ರವರಿ 20 ರಿಂದ ಮಾರ್ಚ್ 5 ರವರೆಗೆ ಗಡಿನಾಡಸಾಂಸ್ಕøತಿಕ ಉತ್ಸವವನ್ನು ಆಯೋಜಿಸಲಾಗುತ್ತಿದೆ ಮತ್ತು ಅರ್ಥಪೂರ್ಣವಾದ ಬಸವಜಯಂತಿ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
Date of Birth :
16-1-1975
Place :
ಕಣಗಲ, ಹುಕ್ಕೇರಿ ತಾ||
Pattadikara :
21-4-1998
Photo :
Programs
ಫೆಬ್ರವರಿ 20ರಿಂದ ಮಾರ್ಚ್ 5 ರವರೆಗೆ ಗಡಿನಾಡ ಸಾಂಸ್ಕøತಿಕ ಉತ್ಸವ.
ಬಸವಜಯಂತಿ ಆಚರಣೆ.
Institutions
ಕಿರಿಯ / ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ ವಿದ್ಯಾರ್ಥಿನಿಲಯ
Photos
Full Address Kannada
ಶ್ರೀ ಗುರುಮಹಾಂತ ಮಠ ಸಿದ್ದಯ್ಯನಕೋಟೆ,
ತುಮಕೂರ್ಲಹಳ್ಳಿ ಪೋಸ್ಟ್ - 577 535
ಮೊಳಕಾಲ್ಮೂರು ತಾ||, ಚಿತ್ರದುರ್ಗ ಜಿ||