Shree Taralabagu Jagadguru Shakhamatha

Shree Taralabagu Jagadguru Shakhamatha Claimed

ಶ್ರೀ ತರಳಬಾಳು ಜಗದ್ಗುರು ಶಾಖಾಮಠ

Average Reviews

Description

ಶ್ರೀ ತರಳಬಾಳು ಜಗದ್ಗುರು ಶಾಖಾಮಠ

ಕರ್ತೃ ಪರಮಪೂಜ್ಯ ಶ್ರೀ ಮಲ್ಲೇದೇವರು

ಈಗ್ಗೆ ಸುಮಾರು 360 ವರ್ಷಗಳ ಹಿಂದೆ ಸಾಣೆಹಳ್ಳಿ ಗ್ರಾಮದಿಂದ ಒಂದು ಕಿ.ಮೀ.ಅಂತರದಲ್ಲಿರುವ ಹಾಲು ಮಲ್ಲೇಶ್ವರ ಗುಡ್ಡದ ಗವಿಯಲ್ಲಿ ಶ್ರೀ ಮಲ್ಲೇದೇವರು ಎಂಬಶರಣರು ಅನುಷ್ಠಾನಕ್ಕೆ ಕುಳಿತಿದ್ದರು. ಇವರ ಅನುಷ್ಠಾನ ಶಕ್ತಿಗೆ ಬೆರಗಾದ ಜನರು ಗುರುಗಳಭಕ್ತರಾಗಿ ಅವರಿಗೆ ಸಾಣೆಹಳ್ಳಿಯಲ್ಲಿ ಮಠ ಕಟ್ಟಿಸಿ ಅಲ್ಲೇ ನೆಲೆಸುವಂತೆ ಬೇಡಿಕೊಳ್ಳುತ್ತಾರೆ.ಹೀಗೆ ಗುರುಗಳು ಅನುಷ್ಠಾನ ಕೈಗೊಂಡ ಗುಡ್ಡವು ಮಲ್ಲೇದೇವರ ಗುಡ್ಡವೆಂದೇ ಹೆಸರಾಗಿದ್ದುಶ್ರೀಮಠವು ಅಂದಿನಿಂದ ಇಂದಿನವರೆಗೂ ಮುನ್ನಡೆದುಕೊಂಡು ಬಂದಿದೆ.ಹೀಗೆ ಪ್ರಾರಂಭಗೊಂಡ ಶ್ರೀಮಠದ ಕರ್ತೃಗುರುಗಳಾದ ಶ್ರೀ ಮಲ್ಲೇದೇವರುಶಿವಪೂಜಾನಿಷ್ಠರಾಗಿದ್ದು, ಶ್ರೀಗಳಿಂದ ಪರಿಹಾರ ಕಂಡುಕೊಂಡಿದ್ದ ಬಾಗೂರಿನಪಾಳೇಗಾರನ ನೆರವಿನಿಂದ ಶ್ರೀಮಠವು ಹೆಚ್ಚಿನ ಅಭಿವೃದ್ಧಿ ಕಂಡಿತು. ಈ ರೀತಿ ಶ್ರೀಮಠದಪರಂಪರೆಯು ಏಳು ತಲೆಮಾರುಗಳವರೆಗೆ ಬೆಳೆದು ಬಂದಿದ್ದು 350 ವರ್ಷಗಳ ಕಾಲಾವಧಿಯಲ್ಲಿ ಕರ್ತೃಗುರುಗಳೂ ಸೇರಿದಂತೆ ಎಲ್ಲಾ ಶ್ರೀಗಳ ಪರಿಶ್ರಮದಿಂದಾಗಿ ಜನಮಾನಸದಲ್ಲಿಬೇರೂರಿದೆ.ಶ್ರೀಮಠದ ಪರಂಪರೆಯಲ್ಲಿ ಬರುವ ಐದನೇ ಶ್ರೀಗಳಾದ ಶ್ರೀ ಗುರುಪಾದದೇಶಿಕೇಂದ್ರ ಸ್ವಾಮಿಗಳು ಪವಾಡ ಪುರುಷರಾಗಿ ಭಕ್ತರ ಮನದಲ್ಲಿ ಅಚ್ಚಳಿಯದೆಉಳಿದಿದ್ದಾರೆ. ನಂತರ ಬಂದ ಹಿಂದಿನ ಶ್ರೀಗಳಾದ ಶ್ರೀ ಮರುಳಸಿದ್ಧ ಸ್ವಾಮಿಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಗೆ ಶ್ರಮಿಸಿ 1952 ರಲ್ಲಿ ಲಿಂಗೈಕ್ಯರಾಗಿದ್ದಾರೆ. ಈ ಸಂದರ್ಭದಲ್ಲಿ ಚರ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಸ್ವಾಮಿಗಳುಶ್ರೀಮಠಕ್ಕೆ ನೂತನ ಕಟ್ಟಡ ನಿರ್ಮಿಸಿ ಮಠದ ಜಮೀನನ್ನು ಬೇಸಾಯಕ್ಕೆ ಒಳಪಡಿಸಿಶ್ರೀಮಠವನ್ನು ಅಭಿವೃದ್ಧಿಗೊಳಿಸಿದರು. ಆದರೆ ಶ್ರೀಗಳು 1956 ರಲ್ಲಿ ಅಕಾಲಿಕವಾಗಿಲಿಂಗೈಕ್ಯರಾದುದು ಭಕ್ತರಿಗೆ ಆಘಾತ ತಂದೆರಗಿತು.ಮೊದಲು ಸ್ವತಂತ್ರ ಮಠವಾಗಿದ್ದ ಶ್ರೀಮಠವು ಕಾಲಾನಂತರದಲ್ಲಿ ಸಿರಿಗೆರೆಯ ಶ್ರೀತರಳಬಾಳು ಬೃಹನ್ಮಠದ ಶಾಖಾಮಠವಾಗಿ ಪರಿವರ್ತಿತಗೊಂಡಿದೆ. ಆ ಕಾರಣದಿಂದಾಗಿಶ್ರೀ ಚಂದ್ರಶೇಖರ ಸ್ವಾಮಿಗಳ ನಂತರ ಭಕ್ತರ ಒತ್ತಾಸೆ ಮೇರೆಗೆ ಶ್ರೀ ತರಳಬಾಳು ಬೃಹನ್ಮಠದಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿತಗೊಂಡುಆ ಸಮಿತಿಯಡಿಯಲ್ಲಿ ಸಾಣೆಹಳ್ಳಿಯ ಈ ಶಾಖಾಮಠವನ್ನು ಅಭಿವೃದ್ಧಿಗೊಳಿಸಲಾಯಿತು.ತದನಂತರ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು 1977ರ ಡಿಸೆಂಬರ್ 25 ರಲ್ಲಿಸಾಣೆಹಳ್ಳಿ ಶ್ರೀಮಠಕ್ಕೆ ಶ್ರೀ ಪಂಡಿತಾರಾಧ್ಯ ಸ್ವಾಮಿಗಳನ್ನು ಪಟ್ಟಕ್ಕೆ ತಂದರು.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು 1976ರಲ್ಲಿ ಮೈಸೂರಿನಮಾನಸಗಂಗೋತ್ರಿಯಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಎಂ.ಎ. ಸ್ನಾತಕ ಪದವಿಯನ್ನುಪಡೆದವರು. ವಿದ್ಯಾರ್ಥಿದೆಸೆಯಿಂದಲೇ ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯರಕೃಪಾಕಟಾಕ್ಷದಿಂದ ಪರಿಪಕ್ವಗೊಂಡಿದ್ದ ಶ್ರೀಗಳು ಧರ್ಮವನ್ನು ವೈಚಾರಿಕವಾಗಿವಿಶ್ಲೇಷಿಸುತ್ತಿದ್ದರು. ಕಂದಾಚಾರ, ಮೂಢನಂಬಿಕೆಗಳನ್ನು ಬಲವಾಗಿ ಖಂಡಿಸುತ್ತಿದ್ದ ಶ್ರೀಗಳುಅದರ ವಿರುದ್ಧ ಅಲ್ಲಿಯೇ ಧ್ವನಿ ಎತ್ತುತ್ತಿದ್ದರು.ಇಂತಹ ವೈಚಾರಿಕ ಚಿಂತನೆಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡ ನಂತರ ಧರ್ಮವನ್ನು ಹಾಗೂ ಸಮಾಜವನ್ನು ನಿಂತನೀರಾಗಲು ಬಿಡದೆ ಹರಿಯುವ ತೊರೆಯಂತೆ ನೋಡಿಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾದರು. ಪ್ರತಿ ತಿಂಗಳು ನಡೆಯುವ ಶಿವಾನುಭವ ಕಾರ್ಯಕ್ರಮಗಳನ್ನು ಮೌಢ್ಯತೆಯಿಂದವೈಚಾರಿಕತೆಯೆಡೆಗೆ ಕೊಂಡೊಯ್ಯುವ ವೇದಿಕೆಯನ್ನಾಗಿ ಮಾಡಿದ ಶ್ರೀಗಳುಪ್ರತಿಯೊಬ್ಬರನ್ನೂ ಅದರಲ್ಲಿ ಭಾಗಿಯಾಗುವಂತೆ ಮಾಡಿ ಸಾಣೆಹಳ್ಳಿ ಗ್ರಾಮದ ಜನರ ಬೌದ್ಧಿಕಮಟ್ಟವನ್ನು ಹೆಚ್ಚಿಸಿದರು.ಶ್ರೀ ಪಂಡಿತಾರಾಧ್ಯರು ಕಲೆ, ಸಾಹಿತ್ಯ, ಸಂಗೀತಗಳ ಪೋಷಕರಾಗಿದ್ದುಸಾಣೆಹಳ್ಳಿಯಂತಹ ಪುಟ್ಟಹಳ್ಳಿಯಲ್ಲಿ “ಶ್ರೀ ಶಿವಕುಮಾರ ಹವ್ಯಾಸಿ ಕಲಾಸಂಘ”ವನ್ನು1987ರಲ್ಲಿ ಸ್ಥಾಪಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ರಂಗ ತರಬೇತಿದಾರರನ್ನು ಕರೆಸಿತರಬೇತಿಯನ್ನು ಕೊಡಿಸಿದರು. ಹಾಗೂ ಕಲಾಸಂಘದಿಂದ ಅನೇಕ ನಾಟಕಗಳನ್ನುಪ್ರದರ್ಸಿಸಿದ ಶ್ರೀಗಳು 1997ರಿಂದ ಸಂಚಾರಿ ಘಟಕವಾದ “ಶಿವ ಸಂಚಾರ” ವನ್ನುಪ್ರಾರಂಭಿಸಿ ನಾಡಿನಾದ್ಯಂತ ರಂಗಾಸಕ್ತರ ಗಮನವನ್ನು ಸೆಳೆದರು.ಹೀಗೆ ಕಲೆ ಸಾಹಿತ್ಯ, ನಾಟಕಗಳ ಪೋಷಕರಾಗಿರುವ ಶ್ರೀಗಳು ಸ್ವತಃಸಾಹಿತ್ಯಿಕವಾಗಿಯೂ ಹಲವು ಮೌಖಿಕ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಪತ್ರಿಕೆಗಳಿಗೆಲೇಖನಗಳನ್ನು ಬರೆಯುವ ಮೂಲಕ ಸಮಾಜವನ್ನು ಧರ್ಮದ ತಳಹದಿಯ ಮೇಲೆಚಿಂತನೆಗೆ ಹಚ್ಚುತ್ತಿದ್ದಾರೆ. 1986ರಲ್ಲಿ ಶ್ರೀಗಳು ಶ್ರೀಮಠಕ್ಕೆ ನೂತನ ಕಟ್ಟಡವನ್ನು ನಿರ್ಮಿಸಿದ್ದುಶ್ರೀಗಳಿಂದಾಗಿ ಸಾಣೆಹಳ್ಳಿಯು ತನ್ನ ಚಿತ್ರಣವನ್ನೇ ಬದಲಾಯಿಸಿಕೊಂಡಿದೆ.

Swamiji

Swamiji Name :
ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
4-9-1951
Place :
ಹೆಡೆಯಾಲ, ರಾಣೆಬೆನ್ನೂರು ತಾ||
Pattadikara :
25-12-1977
Photo :

Programs

ಪ್ರತಿ 15 ದಿನಕ್ಕೊಮ್ಮೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದಂದಣ-ದತ್ತಣ ಕಾರ್ಯಕ್ರಮ, ಅತಿಥಿಗಳಿಂದ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಂದ ಭಾಷಣ.
ಏಪ್ರಿಲ್ 28ರಂದು ಶ್ರೀಮಠದ ರಥೋತ್ಸವ.
ನವೆಂಬರ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ನಾಟಕೋತ್ಸವ.
ಡಿಸೆಂಬರ್ 31 ವರ್ಷದ ಹರ್ಷ ಕಾರ್ಯಕ್ರಮ.

Institutions

ಸಂಸ್ಕøತ ವೇದ ಪಾಠಶಾಲೆ ಸಂಗೀತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ
ಪದವಿ ಪೂರ್ವ ಕಾಲೇಜು ಪದವಿ ಕಾಲೇಜು ವಿದ್ಯಾರ್ಥಿ ನಿಲಯ ಗೋಶಾಲೆ.

Photos

Full Address Kannada

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೆಹಳ್ಳಿ - 577 515
ಹೊಸದುರ್ಗ ತಾ||, ಚಿತ್ರದುರ್ಗ ಜಿ||

Map

Near by Places

ಹೊಸದುರ್ಗ - 15 ಕಿ.ಮೀ.
ಅಜ್ಜಂಪುರ - 17 ಕಿ.ಮೀ.
ಹಾಲುರಾಮೇಶ್ವರ - 22 ಕಿ.ಮೀ.

Statistic

48 Views
0 Rating
0 Favorite
0 Share
error: Content is protected !!