Shree Taralabalu Jagdguru Brahanmatha, Sirigere

Shree Taralabalu Jagdguru Brahanmatha, Sirigere Claimed

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ

Average Reviews

Description

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ

ಕರ್ತೃ ಪರಮಪೂಜ್ಯ ಶ್ರೀ ತರಳಬಾಳು ಸಿದ್ದೇಶ್ವರರು

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮವು ಇದು ನಾಡಿನಾದ್ಯಂತ ಪ್ರಮುಖಧಾರ್ಮಿಕ ಸ್ಥಳಗಳಲ್ಲೊಂದಾಗಿ ಗುರುತಿಸಲ್ಪಡುತ್ತಿದೆ ಎಂದರೆ ಅದಕ್ಕೆ ಕಾರಣ ಇಲ್ಲಿಸ್ಥಾಪಿತಗೊಂಡಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ಇಂದು ಸಿರಿಗೆರೆಯಬೃಹನ್ಮಠವು ವಿಖ್ಯಾತಗೊಂಡು ದೇಶವಿದೇಶದ ಜನ ಭಾರತೀಯ ಭೂಪಟದಲ್ಲಿ ಗುರುತಿಸುವಂತಾಗಿದ್ದು ಶ್ರೀ ಬೃಹನ್ಮಠವು ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ,ಸಾಹಿತ್ಯಿಕ ಹಾಗೂ ಸಾಂಸ್ಕøತಿಕವಾಗಿ ಅಭಿವೃದ್ಧಿಯನ್ನು ಕಂಡಿದೆ.ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಮೂಲ ಇರುವುದು ಬಳ್ಳಾರಿ ಜಿಲ್ಲೆಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿಯಲ್ಲಿ. ಶ್ರೀಮಠದ ಮೂಲಪುರುಷರು ಶ್ರೀ ಮರುಳಸಿದ್ಧರು.ಶ್ರೀ ಮರುಳಸಿದ್ಧರು ಚಿಕ್ಕಂದಿನಲ್ಲಿ ತಂದೆ-ತಾಯಿಯವರನ್ನು ಕಳೆದುಕೊಂಡು ಊರಿನದೊರೆಗಳ ಪುತ್ರರಾಗಿ ಬೆಳೆದರು. ಹೀಗಿರುವಾಗಲೇ ಈ ಪ್ರಾಂತ್ಯಕ್ಕೆ ಬರಗಾಲ ಬಂದುಬರಗಾಲ ನಿವಾರಣೆಗಾಗಿ ಜನ ಊರದೇವಿಗೆ ಬಲಿ ಕೊಡಲು ಮುಂದಾದಾಗ ಅದನ್ನುತಡೆದ ಮರುಳಸಿದ್ಧರು ಜನರಿಗೆ ತಿಳಿಹೇಳಿ ಸನ್ಮಾರ್ಗಕ್ಕೆ ತಂದರು.ಅಜ್ಞಾನ, ಅಂಧಕಾದಲ್ಲಿದ್ದ ಜನರನ್ನು ಸನ್ಮಾರ್ಗಕ್ಕೆ ತಂದ ಶ್ರೀಗಳು ಲೋಕಸಂಚಾರಕ್ಕೆ ಹೋಗಿ ಅನೇಕ ಪವಾಡಗಳನ್ನು ಮಾಡಿ ಪುನಃ ಉಜ್ಜಯಿನಿಗೆ ಮರಳಿ ಬಂದುವಿಶ್ವಬಂಧುವಾಗಿ ಸದ್ಧರ್ಮ ಪೀಠವನ್ನು ಸ್ಥಾಪಿಸುತ್ತಾರೆ. ತೆÀಲುಗುಬಾಳು ಸಿದ್ದಯ್ಯನಿಗೆಅಧಿಕಾರ ನೀಡಿ “ತರಳ, ಬಾಳು” ಎಂದು ಆಶೀರ್ವಾದ ಮಾಡಿ ಲಿಂಗೈಕ್ಯರಾಗುತ್ತಾರೆ. ಹೀಗೆಪ್ರಾರಂಭಗೊಂಡ ಪರಂಪರೆಯು ತರಳಬಾಳು ಸಿದ್ದೇಶ್ವರರಿಂದಾಗಿ ಮುಂದುವರೆದು ನಂತರ10ನೇ ಶ್ರೀಗಳವರೆಗೆ ಉಜ್ಜಯಿನಿಯಲ್ಲೇ ಬೆಳೆದಿದೆ.ತದನಂತರ ಶ್ರೀ ಜಂಬಪ್ಪ ದೇವರ ಕಾಲದಲ್ಲಿ ಉಜ್ಜಯಿನಿಯಲ್ಲಿ ನಡೆದ ಅನೇಕಕಹಿಘಟನೆಗಳಿಂದ ಶ್ರೀ ಜಂಬಪ್ಪದೇವರು ಹಾಗೂ ಅವರ ಶಿಷ್ಯ ಶ್ರೀ ಸಪ್ಪೆಸಿದ್ದಲಿಂಗ ದೇವರುಉಜ್ಜಯಿನಿಯನ್ನು ತ್ಯಜಿಸಿ ಎರಡು ಕವಲುಗಳಾಗಿ ಹೊರಡುತ್ತಾರೆ. ಶ್ರೀ ಜಂಬಪ್ಪ ದೇವರುಸಿರಿಗೆರೆಯಲ್ಲಿಯೂ, ಶ್ರೀ ಸಪ್ಪೆಲಿಂಗ ದೇವರು ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಪಾಲ್ಕುರಿಕೆಯಲ್ಲಿಯೂ ನೆಲೆನಿಂತು ಮಠಗಳನ್ನು ಸ್ಥಾಪನೆ ಮಾಡುತ್ತಾರೆ. ಹೀಗೆಉಜ್ಜಯಿನಿಯಿಂದ ಹೊರಟು ಸಿರಿಗೆರೆಯಲ್ಲಿ ನೆಲೆನಿಂತು ಶಿಷ್ಯವರ್ಗದ ಸಹಕಾರದಿಂದಶ್ರೀಮಠವನ್ನು ಸ್ಥಾಪನೆ ಮಾಡುವ ಶ್ರೀ ಜಂಬಪ್ಪದೇವರ ಮನೋಸ್ಥೈರ್ಯ ಹಾಗೂ ಅವರಅವಿರತ ಶ್ರಮವೇ ಇಂದು ನಾಡಿನ ಹೆಮ್ಮೆಯಾಗಿ ಬೆಳೆಯಲು ಶ್ರೀ ಬೃಹನ್ಮಠಕ್ಕೆಪ್ರೇರಣೆಯಾಯಿತು. ಮುಂದೆ ಸಿರಿಗೆರೆಯಲ್ಲಿ ಶ್ರೀ ಶಿವಲಿಂಗ ದೇಶಿಕೇಂದ್ರ ಸ್ವಾಮಿಗಳು ಅಧಿಕಾರಕ್ಕೆಬಂದ ಸಂದರ್ಭದಲ್ಲಿ ಕೆಲವರು ಸಿರಿಗೆರೆ ಪೀಠದ ಅಸ್ತಿತ್ವವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆಹೋದರು. ಆದರೆ ನ್ಯಾಯಾಲಯವು ಸಿರಿಗೆರೆ ಪೀಠವು ನ್ಯಾಯ ಸಮ್ಮತವಾಗಿ ರಚಿತವಾಗಿದೆಎಂದು ತೀರ್ಪು ನೀಡಿತು. ಇದರಿಂದ ಅಸಮಾಧಾನಗೊಂಡ ಕೆಲವರು ಸಿರಿಗೆರೆಯಲ್ಲಿಯೇಪರ್ಯಾಯವಾಗಿ ಇನ್ನೊಂದು ಹೊಸಮಠವನ್ನು ಸ್ಥಾಪಿಸಿದರು. ಆದರೆ ಶ್ರೀಗಳುಇದೆಲ್ಲವನ್ನು ಸಹಿಸಿಕೊಂಡು ಶ್ರೀಮಠವನ್ನು ಭದ್ರವಾಗಿ ರೂಪಿಸಿದರು. ಇದರಿಂದಾಗಿಯೇಇವರನ್ನು ಶ್ರೀಮಠದ ಗುರುಪರಂಪರೆಯ ಉದ್ಧಾರಕರೆಂದು ಕರೆಯಲಾಗಿದೆ.ನಂತರ ಪರಂಪರೆಯ ಶ್ರೀ ಗುರುಸಿದ್ಧ ದೇಶಿಕೇಂದ್ರ ಸ್ವಾಮಿಗಳು ಕ್ರಿಯಾಶೀಲರಾಗಿಜಗಳೂರು, ತರೀಕೆರೆ, ಬುಕ್ಕಾಂಬುದಿ ಪ್ರಾಂತ್ಯಗಳಲ್ಲಿ ಯಶಸ್ವಿ ಸಂಚಾರವನ್ನು ನಡೆಸಿಜನರನ್ನು ಸಂಘಟಿಸಿದ್ದಲ್ಲದೇ 1900ರಲ್ಲಿ ಸಿರಿಗೆರೆಯ ಮಠಕ್ಕೆ ಭವ್ಯವಾದ ಕಟ್ಟಡವನ್ನುಕಟ್ಟಿಸಿದರು. ತದನಂತರ 1917ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಗುರುಶಾಂತರಾಜದೇಶಿಕೇಂದ್ರ ಸ್ವಾಮಿಗಳು ಸಿರಿಗೆರೆಯಲ್ಲಿ ಸ್ಥಾಪಿತಗೊಂಡಿದ್ದ ಹೊಸ ಮಠವನ್ನು ಬೃಹನ್ಮಠದಲ್ಲಿವಿಲೀನಗೊಳಿಸಿದ ಕ್ರಮ ಐತಿಹಾಸಿಕವಾದುದು. ಶ್ರೀ ಗುರುಶಾಂತ ದೇಶಿಕೇಂದ್ರ ಸ್ವಾಮಿಗಳುಭಕ್ತವರ್ಗದ ಅಜ್ಞಾನ, ದಾರಿದ್ರ್ಯ ನಿವಾರಣೆಯಾಗಬೆಕಾದರೆ ಅಕ್ಷರಜ್ಞಾನ ಅವಶ್ಯವೆಂದುತಿಳಿದು ದಾವಣಗೆರೆಯಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು.ಶ್ರೀಮತ್ ಸಾಧುಸದ್ಧರ್ಮ ವೀರಶೈವ ಸಂಘವನ್ನು ಸ್ಥಾಪಿಸಿ ಆ ಮೂಲಕಸಮಾಜದ ನಿರ್ಗತಿಕರ ಉದ್ಧಾರಕ್ಕಾಗಿ ಶ್ರಮಿಸಿದ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದರು. ತದನಂತರ ಉಜ್ಜಯಿನಿಯಿಂದ ಎರಡು ಕವಲುಗಳಾಗಿ ಬೆಳೆದಸಿರಿಗೆರೆ ಮತ್ತು ಪಾಲ್ಕುರಿಕೆ ಮಠಗಳನ್ನು ಒಂದು ಮಾಡುವ ಸಂಕಲ್ಪ ತೊಟ್ಟು ಪಾಲ್ಕುರಿಕೆಮಠಕ್ಕೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನು ಅಧಿಕಾರಕ್ಕೆ ತಂದರು. ಆದರೆ ಈಎಲ್ಲಾ ಕಾರ್ಯಗಳು ನಡೆಯುತ್ತಿರುವಾಗಲೇ 1938ರ ಆಗಸ್ಟ್ 11ರಲ್ಲಿ ಶ್ರೀಗಳು ಶಿವೈಕ್ಯರಾದರು.ತದನಂತರ 1940ರ ಮೇ 2 ರಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳುಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಪೀಠದ ಅಧಿಕಾರವನ್ನು ವಹಿಸಿಕೊಂಡು ಎರಡೂಮಠಗಳ ಆಡಳಿತವನ್ನು ಒಂದು ಮಾಡಿ ಗುರುಗಳ ಅಭಿಲಾಷೆಯನ್ನು ಪೂರೈಸಿದರು.ಶ್ರೀಗಳು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ ನಾಡಿನ ಹಲವೆಡೆನೂರಾರು ಶಾಲಾಕಾಲೇಜುಗಳನ್ನು ತೆರೆದು ವಿದ್ಯಾಕ್ರಾಂತಿ ಮಾಡಿದರು. ಹಾಗೂಶ್ರೀಮಠದಲ್ಲಿ ನಡೆದುಬಂದಿದ್ದ ತರಳಬಾಳು ಹುಣ್ಣಿಮೆಯನ್ನು ಪ್ರತಿವರ್ಷ ಮಾಘ ಶುದ್ಧಸಪ್ತಮಿಯಿಂದ ಹುಣ್ಣಿಮೆಯವರೆಗೆ ಒಂಭತ್ತು ದಿನಗಳ ಕಾಲ ನಾಡಿನ ನಾನಾ ಭಾಗಗಳಲ್ಲಿ ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ನಾಡಹಬ್ಬವಾಗಿ ರೂಪುಗೊಳಿಸಿದರು.ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿದ್ದ ಶ್ರೀಗಳು ತಮ್ಮ 60ನೇ ವಯಸ್ಸಿನಲ್ಲಿತ್ಯಾಗಪತ್ರವನ್ನು ಬರೆದು ನಿವೃತ್ತಿಯನ್ನು ಘೋಷಿಸಿ ಪೀಠದ ತತ್ವ-ಸಿದ್ಧಾಂತಗಳಿಗೆಅನುಗುಣವಾಗುವ ಯೋಗ್ಯ ಉತ್ತರಾಧಿಕಾರಿಗಳನ್ನು ನೇಮಿಸಬೇಕೆಂದು ಸೂಚಿಸಿದವರು.ತದನಂತರ 1979ರ ಫೆಬ್ರವರಿ 11ರಂದು ಶ್ರೀ ಬೃಹನ್ಮಠದ ಅಧಿಕಾರವಹಿಸಿಕೊಂಡು ಬಂದವರು ಈಗಿನ ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯಮಹಾಸ್ವಾಮಿಗಳು. ಶ್ರೀಗಳು ಶ್ರೀಮಠದ ಅಧಿಕಾರ ಪಡೆದಂದಿನಿಂದ ಶ್ರೀಮಠವು ರಾಷ್ಟ್ರಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯಲು ಕಾರಣವಾಯಿತು. ಶ್ರೀಗಳು ಶ್ರೀಮಠದಅಧಿಕಾರ ವಹಿಸಿಕೊಳ್ಳುವ ಮುಂಚೆಯೇ ವಿದೇಶ ಪ್ರಯಾಣ ಮಾಡಿ ಗ್ರಾತ್ಸ್ನಗರದಚರ್ಚ್ನಲ್ಲಿ ಇಷ್ಟಲಿಂದ ಪೂಜೆ ನಡೆಸಿ, ಲಿಂಗಪೂಜೆಯ ಬಗ್ಗೆ ಅಲ್ಲಿನ ಜನತೆಗೆ ತಿಳಿಸಿದವರು.ಶ್ರೀಗಳು ತಮ್ಮ ಪಾಂಡಿತ್ಯದಿಂದ ಬಹುತೇಕ ಎಲ್ಲಾ ದೇಶಗಳಿಗೆ ಪ್ರವಾಸಕೈಗೊಂಡು ಅಲ್ಲಿನ ಜನತೆಗೆ ಲಿಂಗಪೂಜೆಯ ಮಹತ್ವವನ್ನು ವಿವರಿಸಿದ್ದಾರೆ. ಹಾಗೂಶೈಕ್ಷಣಿಕವಾಗಿ ಗುರುಗಳಿಂದ ಸ್ಥಾಪಿಸಲ್ಪಟ್ಟ ವಿದ್ಯಾಸಂಸ್ಥೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆಕೊಂಡೊಯ್ದಿದ್ದಾರೆ. ಶ್ರೀಗಳು ಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿದ್ದು ಅನೇಕಕೃತಿಗಳನ್ನು ರಚಿಸಿ ಪ್ರಕಟಿಸಿದ್ದಲ್ಲದೇ ಸಂಗೀತ ಕ್ಷೇತ್ರದಲ್ಲಿಯೂ ಪರಿಣಿತಿ ಸಾಧಿಸಿದವರು.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನು ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರುವಾಸಿಗೊಳಿಸಿದ್ದು ತಮ್ಮ ವಿದೇಶ ಸಂಪರ್ಕಗಳಿಂದ ಅಲ್ಲಿನವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ಉಪನ್ಯಾಸ ನೀಡಿ, ಸಮ್ಮೇಳನಗಳಲ್ಲಿ ಭಾಗವಹಿಸಿ,ವಿವೇಕಾನಂದರ ನಂತರ ದೇಶದ ಗೌರವ ಹೆಚ್ಚಿಸಿದ ಎರಡನೇ ಧರ್ಮಗುರು ಎಂಬಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಶ್ರೀಗಳು ಸಾಧುಸದ್ಧರ್ಮ ಸಮಾಜವನ್ನೊಳಗೊಂಡಂತೆ ಎಲ್ಲಾ ಸಮುದಾಯಗಳಉನ್ನತಿಗಾಗಿ ಶ್ರಮಿಸುತ್ತಿದ್ದು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಕಾರ್ಯಕ್ರಮಗಳಿಂದ ಧರ್ಮ ಹಾಗೂ ಸಮಾಜ ಎರಡನ್ನೂ ಉನ್ನತೀಕರಿಸುತ್ತಿದ್ದಾರೆ.

Swamiji

Swamiji Name :
ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
16-6-1947
Place :
ಸೂಗೂರು, ಶಿವಮೊಗ್ಗ ತಾ||
Pattadikara :
11-2-1979
Photo :

Programs

ಪ್ರತಿ ಸೋಮವಾರ ಸದ್ಧರ್ಮ ನ್ಯಾಯಪೀಠ ಜರುಗುತ್ತದೆ.
ಪ್ರತಿ ತಿಂಗಳು ಸಾಮೂಹಿಕ ವಿವಾಹ.
ಜನವರಿಯಲ್ಲಿ ಶ್ರೀ ಸಿದ್ಧರಾಮ ಜಯಂತಿ
ಮಾಘ ಶುದ್ಧ ಹುಣ್ಣಿಮೆಯಂದು "ತರಳಬಾಳು ಹುಣ್ಣಿಮೆ" - ಧಾರ್ಮಿಕ ಹಾಗೂ ಸಾಂಸ್ಕøತಿಕ ಜಾತ್ರೆ.
ಫೆಬ್ರವರಿಯಲ್ಲಿ ಚರಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಶ್ರದ್ಧಾಂಜಲಿ.
ಶಿವರಾತ್ರಿಯಂದು "ಸರ್ವಶರಣರ ದಿನ"
ಶ್ರೀ ರೇವಣಸಿದ್ಧ ಜಯಂತಿ ಹಾಗೂ ಶ್ರೀ ಅಲ್ಲಮಪ್ರಭು ಜಯಂತಿ ಆಚರಣೆ.
ದವನದ ಹುಣ್ಣಿಮೆಯಂದು ಅಕ್ಕಮಹಾದೇವಿ ಜಯಂತಿ
ಏಪ್ರಿಲ್‍ನಲ್ಲಿ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರ ಶ್ರದ್ಧಾಂಜಲಿ
ಬಸವಜಯಂತಿ ಆಚರಣೆ
ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ರಥ
ಆಗಸ್ಟ್‍ನಲ್ಲಿ 19ನೇ ತರಳಬಾಳು ಜಗದ್ಗುರು ಲಿಂ. ಶ್ರೀ ಗುರುರಾಜ ದೇಶಿಕೇಂದ್ರ
ಮಹಾಸ್ವಾಮಿಗಳ ಶ್ರದ್ಧಾಂಜಲಿ
ಸೆಪ್ಟೆಂಬರ್‍ನಲ್ಲಿ 20ನೇ ತರಳಬಾಳು ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ
ಮಹಾಸ್ವಾಮಿಗಳ ಶ್ರದ್ಧಾಂಜಲಿ
ಅಕ್ಟೋಬರ್‍ನಲ್ಲಿ ಹರಳಯ್ಯ ಮದುವಯ್ಯಗಳ ಮಹಾನವಮಿ
ನವೆಂಬರ್ ತಿಂಗಳಲ್ಲಿ ಶಿವನಪಾದ ಶ್ರೀ ಶಿವಾನಂದ ಸ್ವಾಮಿಗಳವರ ಶ್ರದ್ಧಾಂಜಲಿ,
ಶ್ರೀ ಚನ್ನಬಸವ ಜಯಂತಿ
ಕಾರ್ತೀಕದಲ್ಲಿ ಯಲಹಂಕದಲ್ಲಿ ಶ್ರೀ ವೀರಭದ್ರೇಶ್ವರ ಕಾರ್ತೀಕ
ಡಿಸೆಂಬರ್‍ನಲ್ಲಿ ಮಾದಾರ ಚನ್ನಯ್ಯ ಹಾಗೂ
ತರಳಬಾಳು ಸಿದ್ದೇಶ್ವರ ಜಯಂತಿ.

Institutions

ತರಳಬಾಳು ಜಗದ್ಗುರು ವಿದ್ಯಾಪೀಠ
ತಾಂತ್ರಿಕ ಮಹಾವಿದ್ಯಾಲಯ / ಪಾಲಿಟೆಕ್ನಿಕ್ ಕಾಲೇಜು
ವೈದ್ಯಕೀಯ ಮಹಾವಿದ್ಯಾಲಯ /
ಫಾರ್ಮಸಿ ಕಾಲೇಜು / ನರ್ಸಿಂಗ್ ಕಾಲೇಜು
ಸಂಸ್ಕøತ ವೇದ ಪಾಠಶಾಲೆ / ಸಂಗೀತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆಗಳು.
ಪದವಿ ಪೂರ್ವ / ಪದವಿ ಕಾಲೇಜುಗಳು
ಸ್ನಾತಕೋತ್ತರ ಪದವಿ ಕಾಲೇಜು
ವಿದ್ಯಾರ್ಥಿ / ವಿದ್ಯಾರ್ಥಿನಿಯರ ನಿಲಯಗಳು

Photos

Full Address Kannada

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ
ಸಿರಿಗೆರೆ - 577 541 ಚಿತ್ರದುರ್ಗ ತಾ||, ಜಿ||

Map

Near by Places

ಎನ್.ಹೆಚ್.4 - 6 ಕಿ.ಮೀ.
ಭರಮಸಾಗರ - 16 ಕಿ.ಮೀ.
ಚಿತ್ರದುರ್ಗ - 25 ಕಿ.ಮೀ.
ದಾವಣಗೆರೆ - 46 ಕಿ.ಮೀ.

Statistic

1137 Views
0 Rating
0 Favorite
2 Shares
error: Content is protected !!