ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಒಂದು ಉಜ್ವಲ ಹೆಸರು ಚಿತ್ರದುರ್ಗ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ್ದು. ಮೂರು ಶತಮಾನಗಳಿಗೂ ಹೆಚ್ಚಿನ ಗಣ್ಯಪರಂಪರೆಯನ್ನು ಹೊಂದಿ ಸಾಗಿಬಂದಿರುವ ಬೃಹನ್ಮಠವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸಿದೆ. ಶ್ರೀಮಠದಇತಿಹಾಸ ವಿಸ್ತಾರವಾದದ್ದು. ಹನ್ನೆರಡನೇ ಶತಮಾನದ ಶರಣರಾದ ಶ್ರೀ ಅಲ್ಲಮಪ್ರಭು, ಶ್ರೀಚನ್ನಬಸವಣ್ಣನವರಿಂದ ಪ್ರಾರಂಭಗೊಂಡು ತರುವಾಯ ಸಾಗಿಬಂದ “ಶೂನ್ಯಪೀಠ”ಪರಂಪರೆಯ ಶೂನ್ಯ ತತ್ವದ ಮಾರ್ಗವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ಶ್ರೀ ಜಗದ್ಗುರುಮುರುಘರಾಜೇಂದ್ರ ಬೃಹನ್ಮಠದ್ದು.ಶ್ರೀ ಅಲ್ಲಮಪ್ರಭುಗಳಿಂದ ಪ್ರಾರಂಭಗೊಂಡ ಶೂನ್ಯಪೀಠ ಪರಿಕಲ್ಪನೆಯಪರಂಪರೆಯು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ತತ್ವದ ಮೇಲೆ ಸುಮಾರು 5ಶತಮಾನಗಳಿಗೂ ಅಧಿಕ ಕಾಲ ಸುಮಾರು 24 ಯತಿಗಳ ಮೂಲಕ ಸಾಗಿಬಂದು 25ನೇಯತಿಗಳಾದ ಶ್ರೀ ಮುರಗಿ ಶಾಂತವೀರ ದೇಶಿಕರ ತನಕ ಮುಂದುವರೆದಿತ್ತು. ಶ್ರೀಗಳೂಕೂಡ ಅದೇ ತತ್ವದ ಆಧಾರದ ಮೇಲೆ ನಾಡಿನಲ್ಲೆಲ್ಲಾ ಸಂಚರಿಸಿ ಶರಣ ತತ್ವಗಳನ್ನುಪಸರಿಸಿದರು.ಇಂತಹ ಮಹಾಮಹಿಮ ಶ್ರೀಗಳು ತಮ್ಮ 93ನೇ ವಯಸ್ಸಿನಲ್ಲಿ ಚಿತ್ರದುರ್ಗಸೀಮೆಯಲ್ಲಿ ಮಾನವಸೇವೆ, ಬಸವತತ್ವ ಪ್ರಚಾರ, ಶರಣ ಸಂಸ್ಕøತಿಯ ಪ್ರಸಾರ ಕಾರ್ಯಗಳಲ್ಲಿ ನಿರತರಾಗಿದ್ದರು. ಆ ಸಮಯದಲ್ಲಿ ಅಲ್ಲಿಯ ದೊರೆ ಬಿಚ್ಚುಗತ್ತಿ ಭರಮಣ್ಣನಾಯಕನಿಗೆ ಆಶೀರ್ವದಿಸಿ ಅದರಿಂದಾಗಿ ಅವನಿಗೆ ದೊರೆಪಟ್ಟ ದೊರಕಿತೆಂದುಹೇಳಲಾಗಿದ್ದು, ಆ ದೊರೆಯ ಭಕ್ತಿಪೂರ್ವಕ ಒತ್ತಾಯಕ್ಕೆ ಒಪ್ಪಿಗೆ ಕೊಟ್ಟು ಚಿತ್ರದುರ್ಗದಲ್ಲಿಸ್ಥಿರವಾದರೆಂದು ತಿಳಿದುಬರುತ್ತದೆ. ದೊರೆಯು ಮೊದಲು ಚಿನ್ಮೂಲಾದ್ರಿಯ ಮೆಲೆ ಕಟ್ಟಿಸಿಕೊಟ್ಟ ಮಠವು ಕೆಲವು ವರ್ಷಗಳ ನಂತರ ಚಿತ್ರದುರ್ಗದ ಹೊರವಲಯದ ಈಗಿನ ಸ್ಥಳಕ್ಕೆಸ್ಥಳಾಂತರಗೊಂಡಿತು. ಅಲ್ಲಿ ಶ್ರೀ ಮುರುಗಿ ಶಾಂತವೀರ ದೇಶಿಕರು 1703ರ ಜುಲೈ 5 ರಂದುಲಿಂಗೈಕ್ಯರಾಗಿದ್ದು ಅವರ ಐಕ್ಯ ಸ್ಥಳವು ಕರ್ತೃಗದ್ದುಗೆ ಎಂದು ಕರೆಯಲ್ಪಡುತ್ತದೆ.ಶ್ರೀಗಳ ಉತ್ತರಾಧಿಕಾರಿಗಳಾಗಿ ಬಂದ ಶ್ರೀ ಗುರುಸಿದ್ದ ಸ್ವಾಮಿಗಳು ‘ಶ್ರೀ ಇಮ್ಮಡಿಮುರುಗಿ ಸ್ವಾಮಿ’ಗಳೆಂದೇ ಪ್ರಸಿದ್ಧರು. ಇವರ ಕಾಲದಲ್ಲಿ ಶ್ರೀಮಠವು ಹೆಚ್ಚಿನ ಅಭಿವೃದ್ಧಿ ಕಂಡುನಾಡಿನಾದ್ಯಂತ ಪ್ರಸಿದ್ಧಿಗೊಂಡಿತಲ್ಲದೇ ದೇಶದಾದ್ಯಂತ ನೂರಾರು ಮುರುಘಾ ಶಾಖಾಮಠಗಳು, ವಿರಕ್ತಮಠಗಳು ಪ್ರಾರಂಭಗೊಂಡವು. ಶ್ರೀಗಳು ಶ್ರೀಮಠವನ್ನು ಅಭಿವೃದ್ಧಿಪಡಿಸಿ ನಂತರ ಆನಂದಪುರಕ್ಕೆ ತೆರಳಿ ಅಲ್ಲೇ ಐಕ್ಯಗೊಂಡರು. ಹೀಗೆ ಪ್ರಾರಂಭಗೊಂಡ ಶ್ರೀಬೃಹನ್ಮಠವು ಇಂದಿನವರೆಗೂ 20 ಶ್ರೀಗಳನ್ನು ಕಂಡಿದ್ದು ದೇಶದ ಧಾರ್ಮಿಕ ವಲಯದಲ್ಲಿತನ್ನದೇ ಆದ ಹೆಗ್ಗುರುತನ್ನು ಉಳಿಸಿದೆ.ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತದಲ್ಲಿ ಮಹಾಮಹಿಮಶಿವಶರಣರು ಪೀಠಾಧಿಪತಿಗಳಾಗಿ ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ದಿದ್ದಾರೆ. ಅವರಲ್ಲಿಪ್ರಮುಖರು ಶ್ರೀ ಸಣ್ಣಬರಹದ ರಾಚವಟ್ಟಿ ಸ್ವಾಮಿಗಳು. ಇವರು ಶ್ರೀಮಠವನ್ನು ಪುನರ್ನಿರ್ಮಾಣ ಮಾಡಿದವರು. ಅವರ ತರುವಾಯದ ಶ್ರೀ ಸಾವಳಿಗೆ ಗುರುಶಾಂತ ಸ್ವಾಮಿಗಳುಶ್ರೀಮಠದ ಹಿಂಭಾಗದಲ್ಲಿ ಚಿದ್ವಿಲಾಸ ಭವನವನ್ನು ಕಟ್ಟಿಸಿ ಚಿದ್ವನವನ್ನು ಮಾಡಿಸಿದರು. ಆಚಿದ್ವನವೇ ಈಗಿನ ಶ್ರೀ ಮುರುಘಾವನ. ನಂತರದ ಪರಂಪರೆಯ ಶ್ರೀ ಶಿರಸಂಗಿಮಹಾಲಿಂಗ ಸ್ವಾಮಿಗಳು ಶಿಕ್ಷಣಕ್ಕಾಗಿ ಪ್ರಸಾದ ನಿಲಯವನ್ನು ಪ್ರಾರಂಭಿಸಿದ ಪ್ರಪ್ರಥಮಮಠಾಧಿಪತಿಗಳು ಎಂದೇ ಹೆಸರಾಗಿದ್ದಾರೆ. ನಂತರದ ಹೆಬ್ಬಾಳು ರುದ್ರಸ್ವಾಮಿಗಳು ನಾಡಿನಭೀಕರ ಬರಗಾಲದಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ನೆರವಾದವರು.ನಂತರದ ಪರಂಪರೆಯ ಶ್ರೀ ಜಯದೇವ ಸ್ವಾಮಿಗಳು ಇತರ ಕೋಮುಗಳೂಸೇರಿದಂತೆ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ, ರಾಜ್ಯಾದ್ಯಂತ ಹಾಗೂ ರಾಜ್ಯದಹೊರಗೆ ಸಹ ಅನೇಕ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. 1937ರಲ್ಲಿಹಾವೇರಿಯಲ್ಲಿದ್ದಾಗ ಇವರ ಹಾಗೂ ಗಾಂಧೀಜಿ ಅವರ ಭೇಟಿಯಾಗಿ ಆನಂತರ ದೇಶದಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಚಳುವಳಿಗಳನ್ನು ಬೆಂಬಲಿಸಿದರು. ಸುದೀರ್ಘಕಾಲ ಕ್ರಿಯಾಶೀಲರಾಗಿ ಶ್ರೀಮಠದ ಕೀರ್ತಿಯನ್ನು ಬೆಳಗಿದ ಶ್ರೀಗಳು 1956ರಲ್ಲಿದಾವಣಗೆರೆಯಲ್ಲಿ ಲಿಂಗೈಕ್ಯರಾದರು.ಆನಂತರದ ಶ್ರೀ ಜಯವಿಭವ ಸ್ವಾಮಿಗಳು 1962ರಲ್ಲಿ ಚೀನಾ ದೇಶವು ಭಾರತದಮೇಲೆ ಆಕ್ರಮಣ ಮಾಡಿದ ಕಾಲಕ್ಕೆ ರಕ್ಷಣಾ ನಿಧಿಯೆಂದು ಶ್ರೀಮಠದ ಸ್ವಾಮಿಗಳಿಗಾಗಿದ್ದಚಿನ್ನದ ಕಿರೀಟ, ಉಂಗುರಗಳು ಮತ್ತು ದೊಡ್ಡ ಮೊತ್ತದ ನಗದನ್ನು ಸರ್ಕಾರಕ್ಕೆ ನೀಡಿದಮಹಾಮಹಿಮರು. ನಂತರದಲ್ಲಿ ಬಂದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನಸ್ವಾಮಿಗಳು “ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ” ವನ್ನು ಸ್ಥಾಪಿಸಿ ಅನೇಕಶಾಲಾ ಕಾಲೇಜುಗಳನ್ನು ತೆರೆದು ವಿದ್ಯಾಪೋಷಕರೆನಿಸಿದರು. ಹಾಗೂ ಶ್ರೀಮಠದಪ್ರಕಾಶನವನ್ನು ಪ್ರಾರಂಭಿಸಿ ಅನೇಕ ಗ್ರಂಥಗಳನ್ನು ಪ್ರಕಟಿಸಿದರು. ಅನೇಕ ಪತ್ರಿಕೆಗಳನ್ನುಪ್ರಾರಂಭಿಸಿದರು. ಇಂತಹ ಮಹಾಮಹಿಮ ಶಿವಶರಣರು 1994ರಲ್ಲಿ ಹೊಳಲ್ಕೆರೆಯಲ್ಲಿಐಕ್ಯಗೊಂಡರು.ಇವರ ತರುವಾಯ ಶ್ರೀಮಠದ ಅಧಿಕಾರಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀಶಿವಮೂರ್ತಿ ಮುರುಘಾ ಶರಣರು. 1991ರಲ್ಲಿ ಶ್ರೀಮಠದ ಆಡಳಿತವನ್ನು ವಹಿಸಿಕೊಂಡಶರಣರು ತಮ್ಮ ಜಗದ್ಗುರು ಉಪಾಧಿಯನ್ನು ತೊರೆದು ತಮ್ಮನ್ನು ಶರಣರು ಎಂದುಕರೆದುಕೊಂಡಿದ್ದಾರೆ. ಅಡ್ಡಪಲ್ಲಕ್ಕಿ, ಚಿನ್ನದ ಕಿರೀಟ, ಬೆಳ್ಳಿಯ ಸಿಂಹಾಸನ ಇವನ್ನೆಲ್ಲಾತೊರೆದು ಸಮಾಜದ ಸುಧಾರಣೆ, ನವಜಾಗೃತಿಯ ಸಂದೇಶ ನೀಡುವ ಹಲವುರೂಪಕಗಳನ್ನು ರಚಿಸಿ ಪ್ರದರ್ಶಿಸಿದ್ದಾರೆ.ಶರಣರು ಎಲ್ಲಾ ಜಾತಿಯ ಜನರಿಗೆ ಪ್ರತಿ ತಿಂಗಳು ಬಹುಸಂಖ್ಯೆಯಲ್ಲಿ ಉಚಿತಸರಳ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ನೆರವಾಗಿದ್ದಾರೆ. ವಿವಿಧ ಜಾತಿಯ ಜನರಕೋರಿಕೆಯಂತೆ ಅವರ ಜಾತಿಯ ಏಳಿಗೆಯ ಸಲುವಾಗಿ ಲಿಂಗದೀಕ್ಷೆ ನೀಡಿ ಸ್ವಾಮಿಗಳನ್ನಾಗಿಮಾಡಿಕೊಟ್ಟು ಮಠ ನಿರ್ಮಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಅನೇಕ ಬಾರಿ ವಿದೇಶಪ್ರವಾಸ ಮಾಡಿರುವ ಇವರು ವಚನ ಸಾಹಿತ್ಯದ ಅಭ್ಯಾಸಕ್ಕೆ ಉತ್ತೇಜನ ಕೊಡಲು “ವಚನಕಮ್ಮಟ” ಪರೀಕ್ಷೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ.ಹಿಂದಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಪ್ರಾರಂಭಗೊಂಡ ಶ್ರೀಮುರುಘರಾಜೇಂದ್ರ ವಿದ್ಯಾಪೀಠವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದುಜೊತೆಯಲ್ಲಿ “ಬಸವ ತತ್ವ ಮಹಾವಿದ್ಯಾಲಯ”, “ಗುರುಕುಲ”ಗಳೆಂಬ ಹೊಸರೀತಿಯಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಹಾಗೂ ಹಿಂದಿನ “ದಸರಾ ಉತ್ಸವ”ಕ್ಕೆ “ಶರಣ ಸಂಸ್ಕøತಿಉತ್ಸವ” ಎಂದು ಹೆಸರಿಟ್ಟು ಹೊಸರೂಪ ಕೊಟ್ಟಿದ್ದಾರೆ. ಸಮಾಜ ಸುಧಾರಣಾ ಕಾರ್ಯ,ವಚನ ಸಾಹಿತ್ಯ ಕುರಿತ ಉತ್ತಮ ಕೃತಿ ಇವುಗಳಿಗಾಗಿ “ಬಸವಶ್ರೀ” ಎಂಬ ಪ್ರತಿಷ್ಠಿತಪ್ರಶಸ್ತಿಯೊಂದನ್ನು ಆರಂಭಿಸಿ ಸಾಧಕರಿಗೆ ನೀಡುತ್ತಾ ಬಂದಿದ್ದಾರೆ. ಹಾಗೆಯೇ ಅನೇಕಕೃತಿಗಳನ್ನು ರಚಿಸಿ ಪ್ರಕಟಿಸಿರುವ ಶ್ರೀಗಳು ಶ್ರೀಮಠದ ಉಜ್ವಲ ಪರಂಪರೆಯನ್ನುಹೊಸರೀತಿಯಲ್ಲಿ ಮುಂದುವರೆಸುತ್ತಾ ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ.ಶ್ರೀ ಶಿವಮೂರ್ತಿ ಶರಣರು ರಂಗಾಸಕ್ತರೂ ಸಹ ಆಗಿದ್ದು ಜಮುರಾ ಕಲಾಲೋಕವೆಂಬ ರಂಗತಂಡವನ್ನು 1991ರಲ್ಲಿ ಆರಂಭಿಸಿದರು. ಇಂದು ಜಮುರಾ ಕಲಾಲೋಕವು 21ನಾಟಕಗಳ 800ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿ ಹೆಸರುವಾಸಿಯಾಗಿದೆ.
Swamiji
Swamiji Name :
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ
Pattadikara :
1991
Photo :
Programs
ಪ್ರತಿ ತಿಂಗಳು 5ನೇ ತಾರೀಖಿನಂದು ಸಾಮೂಹಿಕ ವಿವಾಹಗಳು ಜರುಗುತ್ತವೆ.
ವಿಜೃಂಭಣೆಯ ಬಸವಜಯಂತಿ ಆಚರಣೆ.
ಮೇ ತಿಂಗಳಲ್ಲಿ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಸ್ವಾಮಿಗಳ ಸ್ಮರಣೋತ್ಸವ.
ಜುಲೈನಲ್ಲಿ ದಾವಣಗೆರೆಯಲ್ಲಿ ಶ್ರೀ ಜ|| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ಸ್ಮರಣೋತ್ಸವ.
ದಸರಾದಲ್ಲಿ 10 ದಿನಗಳ ಕಾಲ "ಶರಣ ಸಂಸ್ಕøತಿ ಉತ್ಸವ"
ಎರಡನೇ ದಿನ ಶ್ರೀ ಬೃಹನ್ಮಠದಲ್ಲಿ ಶ್ರೀ ಮುರುಘಾ ಶರಣರ ಶೂನ್ಯಪೀಠಾರೋಹಣ
ಮುೂರನೇ ದಿನ ಹೊಳಲ್ಕೆರೆ ಶ್ರೀ ಒಂಟಿಕಂಬ ಮಠದಲ್ಲಿ ಶ್ರೀ ಜ|| ಮಲ್ಲಿಕಾರ್ಜುನ ಮುರುಘರಾಜೇಂದ್ರ
ಸ್ವಾಮಿಗಳ ಸ್ಮರಣೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Institutions
ಎಸ್.ಜೆ.ಎಂ. ವಿದ್ಯಾಪೀಠ
ಬಸವತತ್ವ ಮಹಾವಿದ್ಯಾಲಯ / ಎಸ್.ಜೆ.ಎಂ. ವಚನ ಕಮ್ಮಟ
ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ
ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜು
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ
ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯ
ಸಂಸ್ಕøತ ವೇದ ಪಾಠಶಾಲೆ / ಸಂಗೀತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆಗಳು.
ಪದವಿ ಪೂರ್ವ / ಪದವಿ ಕಾಲೇಜುಗಳು
ಸ್ನಾತಕೋತ್ತರ ಪದವಿ ಕಾಲೇಜು
ಎಸ್.ಜೆ.ಎಂ. ಫಾರ್ಮಸಿ ಕಾಲೇಜು / ಎಸ್.ಜೆ.ಎಂ. ನರ್ಸಿಂಗ್ ಕಾಲೇಜು
ಎಸ್.ಜೆ.ಎಂ. ಕಾನೂನು ಕಾಲೇಜು / ಎಸ್.ಜೆ.ಎಂ. ಚಿತ್ರಕಲಾ ಶಾಲೆ
ವಿದ್ಯಾರ್ಥಿ / ವಿದ್ಯಾರ್ಥಿನಿಯರ ನಿಲಯಗಳು.